Kannada Translation

Ayah by Ayah

Tags

Download Links

Kannada Translation translation for Surah Al-Qadr — Ayah 1

97:1
إِنَّآ أَنزَلۡنَٰهُ فِي لَيۡلَةِ ٱلۡقَدۡرِ ١
ಇದನ್ನು (ಖುರ್‍ಆನನ್ನು) ನಾವು ಖದ್‍ರಿನ ರಾತ್ರಿಯಲ್ಲಿ ಅವತೀರ್ಣಗೊಳಿಸಿದ್ದೇವೆ1.
Footnotes
  • [1] *`ಕ್ವದ್‍ರ್' ಎಂದರೆ ನಿರ್ಣಯ, ಮಹತ್ವ ಎಂದರ್ಥ. ಕ್ವದ್‍ರ್‍ನ ರಾತ್ರಿಯಲ್ಲಿ ಖುರ್‍ಆನಿನ ಅವತೀರ್ಣವಾಯಿತೆಂದು ಇದರ ಪ್ರಥಮ ಸೂಕ್ತದಲ್ಲೇ ಪ್ರಸ್ತಾಪಿಸಲಾಗಿದೆ. ಲೌಹುಲ್ ಮಹ್ಫೂಳ್‍ನಲ್ಲಿ ದಾಖಲಿಸಲಾದ ವಿಧಿಗಳನ್ನು ಕಾರ್ಯ ನಿರ್ವಾಹಕರಾದ ಮಲಕ್‍ಗಳಿಗೆ ಅಂದು ಒಪ್ಪಿಸಲಾಗುವುದು. ಇನ್ನೊಂದು ಅಭಿಪ್ರಾಯ ಪ್ರಕಾರ ಅಲ್ಲಾಹನು ಬರಾಅತ್ ರಾತ್ರಿ (ಶಅïಬಾನ್ ಹದಿನೈದರ ರಾತ್ರಿ)ಯಂದು ಸೃಷ್ಟಿಗಳ ವಿಧಿಗಳನ್ನು ದಾಖಲಿಸುವನು. ಲೈಲತುಲ್ ಕ್ವದ್‍ರಿನಂದು ಅದನ್ನು ಮಲಕ್‍ಗಳಿಗೆ ಒಪ್ಪಿಸುವನು. ಅರ್ಥಾತ್ ಕ್ವದ್‍ರಿನ ರಾತ್ರಿಯಲ್ಲಿ ನಾವು ಖುರ್‍ಆನಿನ ಅವತೀರ್ಣವನ್ನು ಆರಂಭಿಸಿದ್ದೇವೆ. ಇಬ್ನ್‍ಅಬ್ಬಾಸ್ ರವರ ಪ್ರಕಾರ ಈ ರಾತ್ರಿಯಲ್ಲಿ ಭೂಮಿಗೆ ಸಮೀಪವಿರುವ ಆಕಾಶಕ್ಕೆ ಖುರ್‍ಆನನ್ನು ಒಟ್ಟಾಗಿ ಅವತೀರ್ಣಗೊಳಿಸಲಾಗಿದೆ. ಬಳಿಕ ಇಪ್ಪತ್ತಮೂರು ವರ್ಷಗಳ ಅವಧಿಯಲ್ಲಿ ಸಂದರ್ಭಾನುಸಾರ ಭೂಮಿಗೆ ಹಂತ ಹಂತವಾಗಿ ಅವತೀರ್ಣಗೊಳಿಸಲಾಗಿದೆ.