Muhammad Hamza Battur

Ayah by Ayah

Tags

Download Links

Muhammad Hamza Battur translation for Surah Az-Zumar — Ayah 29

39:29
ضَرَبَ ٱللَّهُ مَثَلٗا رَّجُلٗا فِيهِ شُرَكَآءُ مُتَشَٰكِسُونَ وَرَجُلٗا سَلَمٗا لِّرَجُلٍ هَلۡ يَسۡتَوِيَانِ مَثَلًاۚ ٱلۡحَمۡدُ لِلَّهِۚ بَلۡ أَكۡثَرُهُمۡ لَا يَعۡلَمُونَ ٢٩
ಅಲ್ಲಾಹು ಒಂದು ಉದಾಹರಣೆಯನ್ನು ನೀಡುತ್ತಾನೆ. ಪರಸ್ಪರ ಕಚ್ಚಾಡುವ ಹಲವು ಪಾಲುದಾರರಿಗೆ ಗುಲಾಮನಾಗಿರುವ ಒಬ್ಬ ವ್ಯಕ್ತಿಮತ್ತು ಒಬ್ಬನೇ ಯಜಮಾನನಿಗೆ ಗುಲಾಮನಾಗಿರುವ ಇನ್ನೊಬ್ಬ ವ್ಯಕ್ತಿ. ಇವರಿಬ್ಬರು ಹೋಲಿಕೆಯಲ್ಲಿ ಸಮಾನರಾಗುವರೇ? ಅಲ್ಲಾಹನಿಗೆ ಸರ್ವಸ್ತುತಿ! ಆದರೆ ಅವರಲ್ಲಿ ಹೆಚ್ಚಿನವರೂ ತಿಳಿಯುವುದಿಲ್ಲ.1
Footnotes
  • [1] ಅಲ್ಲಾಹು ಇಲ್ಲಿ ಬಹುದೇವವಿಶ್ವಾಸಿ ಮತ್ತು ಏಕದೇವವಿಶ್ವಾಸಿಯ ಬಗ್ಗೆ ತಿಳಿಸುತ್ತಿದ್ದಾನೆ. ಹಲವು ಪಾಲುದಾರರಿಗೆ ಗುಲಾಮನಾಗಿರುವ ವ್ಯಕ್ತಿ ಎಂದರೆ ಬಹುದೇವವಿಶ್ವಾಸಿ. ಇವನಿಗೆ ಅನೇಕ ದೇವರುಗಳಿದ್ದಾರೆ. ಎಲ್ಲರ ಆಜ್ಞೆಗಳನ್ನು ಅವನು ಪಾಲಿಸಬೇಕಾಗಿದೆ. ಒಬ್ಬನೇ ಯಜಮಾನನಿಗೆ ಗುಲಾಮನಾಗಿರುವ ವ್ಯಕ್ತಿಯೆಂದರೆ ಏಕದೇವವಿಶ್ವಾಸಿ.