Muhammad Hamza Battur

Ayah by Ayah

Tags

Download Links

Muhammad Hamza Battur translation for Surah Az-Zukhruf — Ayah 58

43:58
وَقَالُوٓاْ ءَأَٰلِهَتُنَا خَيۡرٌ أَمۡ هُوَۚ مَا ضَرَبُوهُ لَكَ إِلَّا جَدَلَۢاۚ بَلۡ هُمۡ قَوۡمٌ خَصِمُونَ ٥٨
ಅವರು ಕೇಳಿದರು: “ನಮ್ಮ ದೇವರುಗಳು ಶ್ರೇಷ್ಠರೋ ಅಥವಾ ಅವನೋ?”1 ಅವರು ಕೇವಲ ತರ್ಕಕ್ಕಾಗಿ ನಿಮ್ಮ ಮುಂದೆ ಅದನ್ನು ಹೇಳಿದ್ದರು. ವಾಸ್ತವವಾಗಿ, ಅವರು ಜಗಳಗಂಟಿ ಜನರಾಗಿದ್ದಾರೆ.
Footnotes
  • [1] “ನಿಶ್ಚಯವಾಗಿಯೂ, ನೀವು ಮತ್ತು ಅಲ್ಲಾಹನನ್ನು ಬಿಟ್ಟು ನೀವು ಆರಾಧಿಸುವ ದೇವರುಗಳು ನರಕದ ಇಂಧನವಾಗಲಿದ್ದಾರೆ.” [21:98] ಎಂಬ ವಚನವು ಅವತೀರ್ಣವಾದಾಗ, ಈ ವಚನದ ಪ್ರಕಾರ ಕ್ರೈಸ್ತರು ಆರಾಧಿಸುತ್ತಿರುವ ಪ್ರವಾದಿ ಈಸಾ ಬಿನ್ ಮರ್ಯಮ್ (ಅವರ ಮೇಲೆ ಶಾಂತಿಯಿರಲಿ) ಕೂಡ ನರಕದ ಇಂಧನವಾಗುತ್ತಾರೆಂದು ಅವರು ವಾದಿಸಿದರು. ಪ್ರವಾದಿಗಳು, ಮಹಾಪುರುಷರು ಮತ್ತು ದೇವದೂತರುಗಳನ್ನು ಜನರು ಆರಾಧಿಸುತ್ತಾರೆ ಎಂಬುದು ನಿಜ. ಆದರೆ ಅವರು ತಮ್ಮನ್ನು ಆರಾಧಿಸಬೇಕೆಂದು ಹೇಳಿಲ್ಲ ಮತ್ತು ಆ ಆರಾಧನೆಯ ಬಗ್ಗೆ ಅವರು ಸಂಪ್ರೀತರೂ ಅಲ್ಲ. ಆದ್ದರಿಂದ ಅವರು ನರಕಕ್ಕೆ ಇಂಧನವಾಗುವುದಿಲ್ಲ.