Muhammad Hamza Battur

Ayah by Ayah

Tags

Download Links

Muhammad Hamza Battur translation for Surah Al-Jathiyah — Ayah 23

45:23
أَفَرَءَيۡتَ مَنِ ٱتَّخَذَ إِلَٰهَهُۥ هَوَىٰهُ وَأَضَلَّهُ ٱللَّهُ عَلَىٰ عِلۡمٖ وَخَتَمَ عَلَىٰ سَمۡعِهِۦ وَقَلۡبِهِۦ وَجَعَلَ عَلَىٰ بَصَرِهِۦ غِشَٰوَةٗ فَمَن يَهۡدِيهِ مِنۢ بَعۡدِ ٱللَّهِۚ أَفَلَا تَذَكَّرُونَ ٢٣
ತನ್ನ ಸ್ವೇಚ್ಛೆಯನ್ನೇ ದೇವನನ್ನಾಗಿ ಮಾಡಿಕೊಂಡವನನ್ನು ನೀವು ನೋಡಿದ್ದೀರಾ?1 ಅಲ್ಲಾಹು ತಿಳಿದೇ ಅವನನ್ನು ದಾರಿತಪ್ಪಿಸಿದ್ದಾನೆ, ಅವನ ಕಿವಿ ಮತ್ತು ಹೃದಯಕ್ಕೆ ಮೊಹರು ಹಾಕಿದ್ದಾನೆ ಮತ್ತು ಅವನ ಕಣ್ಣಿನ ಮೇಲೆ ಒಂದು ಪರದೆಯನ್ನಿಟ್ಟಿದ್ದಾನೆ. ಅಲ್ಲಾಹನ ನಂತರ ಅವನಿಗೆ ಸನ್ಮಾರ್ಗ ತೋರಿಸುವವರು ಯಾರು? ನೀವು ಉಪದೇಶ ಸ್ವೀಕರಿಸುವುದಿಲ್ಲವೇ?
Footnotes
  • [1] ಅಂದರೆ ಅವನಿಗೆ ಯಾವುದು ಒಳ್ಳೆಯದೆಂದು ಕಾಣುತ್ತದೆಯೋ ಅದನ್ನು ಒಳ್ಳೆಯದೆಂದು ತಿಳಿಯುತ್ತಾನೆ ಮತ್ತು ಅವನಿಗೆ ಯಾವುದು ಕೆಟ್ಟದೆಂದು ಕಾಣುತ್ತದೆಯೋ ಅದನ್ನು ಕೆಟ್ಟದೆಂದು ತಿಳಿಯುತ್ತಾನೆ. ಅಂದರೆ ಅವರು ಅಲ್ಲಾಹನ ಮತ್ತು ಅವನ ಪ್ರವಾದಿಯ ಆಜ್ಞೆಗಳಿಗಿಂತಲೂ ತನ್ನ ಇಚ್ಛೆಗೆ ಪ್ರಾಮುಖ್ಯತೆ ನೀಡುತ್ತಾನೆ. ತನ್ನ ಬುದ್ಧಿಯನ್ನೇ ತನ್ನ ತೀರ್ಪುಗಾರನಾಗಿ ಮಾಡಿಕೊಳ್ಳುತ್ತಾನೆ.