Muhammad Hamza Battur

Ayah by Ayah

Tags

Download Links

Muhammad Hamza Battur translation for Surah Al-Ahqaf — Ayah 21

46:21
۞ وَٱذۡكُرۡ أَخَا عَادٍ إِذۡ أَنذَرَ قَوۡمَهُۥ بِٱلۡأَحۡقَافِ وَقَدۡ خَلَتِ ٱلنُّذُرُ مِنۢ بَيۡنِ يَدَيۡهِ وَمِنۡ خَلۡفِهِۦٓ أَلَّا تَعۡبُدُوٓاْ إِلَّا ٱللَّهَ إِنِّيٓ أَخَافُ عَلَيۡكُمۡ عَذَابَ يَوۡمٍ عَظِيمٖ ٢١
ಆದ್ ಗೋತ್ರದವರ ಸಹೋದರ (ಹೂದ್‍ರನ್ನು) ಸ್ಮರಿಸಿರಿ. ಅವರು ಅಹ್ಕಾಫ್‍ನಲ್ಲಿರುವ1 ತಮ್ಮ ಜನರಿಗೆ ಮುನ್ನೆಚ್ಚರಿಕೆ ನೀಡಿದ ಸಂದರ್ಭ. ಅವರಿಗಿಂತ ಮೊದಲು ಮತ್ತು ಅವರ ನಂತರ ಅನೇಕ ಮುನ್ನೆಚ್ಚರಿಕೆಗಾರರು (ಪ್ರವಾದಿಗಳು) ಬಂದು ಹೋಗಿದ್ದಾರೆ. “ನೀವು ಅಲ್ಲಾಹನನ್ನು ಬಿಟ್ಟು ಬೇರೆ ಯಾರನ್ನೂ ಆರಾಧಿಸಬೇಡಿ. ನಿಶ್ಚಯವಾಗಿಯೂ ನಿಮ್ಮ ಮೇಲೆ ಆ ಭಯಾನಕವಾದ ದಿನದ ಶಿಕ್ಷೆಯನ್ನು ನಾನು ಭಯಪಡುತ್ತಿದ್ದೇನೆ” (ಎಂದು ಅವರು ಎಚ್ಚರಿಸಿದರು).
Footnotes
  • [1] ಅಹ್ಕಾಫ್ ಎಂದರೆ ಯಮನ್‌ನ ಹದ್ರಮೌತ್‌ನ ಸಮೀಪವಿರುವ ಮರಳ ದಿಬ್ಬಗಳು ತುಂಬಿದ ಪ್ರದೇಶ. ಹೂದ್ (ಅವರ ಮೇಲೆ ಶಾಂತಿಯಿರಲಿ) ರ ಜನರು ಇಲ್ಲಿ ವಾಸವಾಗಿದ್ದರು.