Kannada Translation

Ayah by Ayah

Tags

Download Links

Kannada Translation translation for Surah Al-Kawthar — Ayah 3

108:3
إِنَّ شَانِئَكَ هُوَ ٱلۡأَبۡتَرُ ٣
ತಮ್ಮೊಂದಿಗೆ ದ್ವೇಷ ಸಾಧಿಸುವವನೇ ನಿಜದಲ್ಲಿ ಸಂತಾನ ಕಡಿಯಲ್ಪಟ್ಟವನು1.
Footnotes
  • [1] ಪ್ರವಾದಿವರ್ಯ ರ ಎಲ್ಲ ಗಂಡು ಮಕ್ಕಳೂ ಚಿಕ್ಕಂದಿನಲ್ಲೇ ನಿಧನ ಹೊಂದಿದ್ದರು. ಇದರಿಂದ ಸಂತೋಷಗೊಂಡ ಖುರೈಶಿ ಮುಖಂಡರು ಮುಹಮ್ಮದರ ಬಳಿಕ ಅವರ ಉತ್ತರಾಧಿಕಾರಿಯಾಗಿ ತನ್ನ ಚಳವಳಿಯನ್ನು ಮುಂದುವರಿಸಲು ಮಕ್ಕಳು ಯಾರೂ ಬದುಕಿಲ್ಲವಲ್ಲಾ ಎಂದು ಸಮಾಧಾನಪಟ್ಟುಕೊಳ್ಳುತ್ತಿದ್ದರು ಹಾಗೂ ಇದರ ಹೆಸರಲ್ಲಿ ಅವರು ನಬಿ ರನ್ನು ಅಬ್‍ತರ್-(ಮೂಲ ಕಡಿಯಲ್ಪಟ್ಟವನು) ಎಂದು ಕರೆದು ಆಗಾಗ ಹಂಗಿಸುತ್ತಿದ್ದರು. ಅವರಿಗೆ ಪ್ರತ್ಯುತ್ತರವಾಗಿ ಈ ಸೂಕ್ತ ಬಂದಿದೆ. ಅರ್ಥಾತ್ ತಮ್ಮೊಂದಿಗೆ ವೈರ ಕಟ್ಟಿಕೊಂಡವನೇ ಹಿಂಗಾಮಿಗಳಿಲ್ಲದ ಬಾಲ ಮುರಿದವನು. ಏಕೆಂದರೆ ಆತನ ಸಂತಾನಗಳಾಗಲಿ ಸತ್‍ಕೀರ್ತಿಯಾಗಲಿ ಉಳಿಯಲಾರದು. ಅದೇ ವೇಳೆ ತಮ್ಮ ಸಂತಾನಗಳು, ಸತ್ಕೀರ್ತಿ ಹಾಗೂ ತಮ್ಮ ಮಹತ್ವದ ಪವಿತ್ರಾವಶೇಷಗಳು ಅಂತ್ಯ ದಿನದವರೆಗೂ ಬಾಕಿ ಉಳಿಯುವುದು. ಪರಲೋಕದಲ್ಲಿ ಬಣ್ಣಿಸಲು ಸಾಧ್ಯವಿಲ್ಲದ ರೀತಿ ಮಹತ್ವ ಹಾಗೂ ಸ್ಥಾನ ಮಾನಗಳು ತಮಗೆ ಪ್ರಾಪ್ತವಾಗುತ್ತದೆ. (ಬೈಳಾವಿ, ಅಬುಸ್ಸುಊದ್)