Kannada Translation

Ayah by Ayah

Tags

Download Links

Kannada Translation translation for Surah An-Nasr — Ayah 3

110:3
فَسَبِّحۡ بِحَمۡدِ رَبِّكَ وَٱسۡتَغۡفِرۡهُۚ إِنَّهُۥ كَانَ تَوَّابَۢا ٣
ತಮ್ಮ ಪಾಲಕ ಪ್ರಭು ಅಲ್ಲಾಹನ ಸ್ತುತಿಕೀರ್ತನೆಯೊಂದಿಗೆ ಅವನ ಪರಿಶುದ್ಧತೆಯನ್ನು ಕೊಂಡಾಡಿರಿ ಹಾಗೂ ಅವನೊಂದಿಗೆ ಕ್ಷಮೆ ಯಾಚಿಸಿರಿ1. ಖಂಡಿತವಾಗಿಯೂ ಅವನು ಪಶ್ಚಾತ್ತಾಪವನ್ನು ಯಥೇಷ್ಠ ಸ್ವೀಕರಿಸುವವನಾಗಿರುವನು.
Footnotes
  • [1] ಈ ಆದೇಶವು ಅವರ ಪದವಿ ಹಾಗೂ ಔನ್ನತ್ಯವನ್ನು ಹೆಚ್ಚಿಸಲಿಕ್ಕಾಗಿಯೇ ಹೊರತು ದೌತ್ಯ ನಿರ್ವಹಣೆಯಲ್ಲಿ ಪ್ರಮಾದ ಸಂಭವಿಸಿದೆ ಎನ್ನುವುದಕ್ಕಲ್ಲ. ಉಮ್ಮು ಸಲಮಃ ರವರು ಹೇಳುತ್ತಾರೆ, `ಈ ಅಧ್ಯಾಯವು ಅವತೀರ್ಣಗೊಂಡ ಬಳಿಕ ಪ್ರವಾದಿವರ್ಯ ರು ಎಲ್ಲಾ ಸಂದರ್ಭಗಳಲ್ಲೂ ಅಂದರೆ ನಿಲ್ಲುವಾಗಲೂ, ಕುಳಿತು ಕೊಳ್ಳುವಾಗಲೂ, ನಡೆಯುವಾಗಲೂ ಸುಬ್‍ಹಾನಲ್ಲಾಹಿ ವಬಿಹಮ್ದಿಹಿ ಅಸ್ತಗ್‍ಫಿರುಲ್ಲಾಹಿ ವಅತೂಬು ಇಲೈಹಿ' ಎಂದು ಹೇಳು ತ್ತಿದ್ದರು. ಅಬೂ ಹುರೈರಾ ರವರು ಹೇಳುತ್ತಾರೆ. `ಈ ಅಧ್ಯಾಯ ಅವತೀರ್ಣಗೊಂಡ ಬಳಿಕ ಪ್ರವಾದಿವರ್ಯ ರು ಅತೀ ಹೆಚ್ಚಾಗಿ ಆರಾಧನೆಯಲ್ಲಿ ತಲ್ಲೀನ ರಾಗಿದ್ದರು. ಎಲ್ಲಿಯವರೆಗೆಂದರೆ ಅವರ ಪಾದಗಳು ಬಾತು ಹೋಗಿದ್ದವು, ಶರೀರ ಕ್ಷೀಣಿಸಿದ್ದವು, ನಗು ಕಮ್ಮಿಯಾಗಿ, ಹೆಚ್ಚು ಅಳುತ್ತಿದ್ದರು'.