Kannada Translation

Ayah by Ayah

Tags

Download Links

Kannada Translation translation for Surah Al-Masad — Ayah 1

111:1
تَبَّتۡ يَدَآ أَبِي لَهَبٖ وَتَبَّ ١
ಅಬೂಲಹಬನ1 ಎರಡು ಕೈಗಳು ನಾಶವಾಗಲಿ ಹಾಗೂ ಅವನು ನಾಶವಾದನು.
Footnotes
  • [1] * ಅಲ್-ಮಸದ್ ಎಂದರೆ ಹೊಸೆದ ನಾರು ಎಂದರ್ಥ. ಸೂರಃ ತಬ್ಬತ್, ಸೂರಃ ಲಹಬ್ ಮುಂತಾದ ಹೆಸರುಗಳೂ ಈ ಅಧ್ಯಾಯಕ್ಕಿದೆ. ಅಬೂಲಹಬ್ ಎಂಬವನು ಪ್ರವಾದಿವರ್ಯ ರ ಚಿಕ್ಕಪ್ಪನಾಗಿದ್ದನು. ಆತನ ನೈಜ ಹೆಸರು `ಅಬ್ದುಲ್ ಉಝ್ಝಾ' ಎಂದಾಗಿದೆ. ಉಝ್ಝಾ ಎಂಬುದು ಮುಶ್ರಿಕರ ಒಂದು ವಿಗ್ರಹದ ಹೆಸರಾಗಿದೆ. ಅವನು ತನ್ನ ನಿಜವಾದ ಹೆಸರಿಗಿಂತಲೂ ಹೆಚ್ಚಾಗಿ ಈ ಹೆಸರಿನಿಂದ ಪರಿಚಿತನಾಗಿದ್ದನು. ಈ ಹೆಸರು ಸೂಚಿಸುವ ಅರ್ಥಕ್ಕೆ ಅವನ ಗುಣ ಸ್ವಭಾವ ಅತ್ಯಂತ ನಿಕಟವಾಗಿತ್ತು. ಅಂದರೆ ಲಹಬ್ ಎಂದರೆ ಬೆಂಕಿಯ ಜ್ವಾಲೆ ಎಂದಾಗಿದೆ. ಆದ್ದರಿಂದ ಈತ ತನ್ನ ಸ್ವಭಾವಗುಣಗಳಿಂದಾಗಿ ಅಗ್ನಿತಾಣವಾದ ನರಕಕ್ಕೆ ಅತೀ ಸಮೀಪಸ್ಥನಾದವನು ಎಂದು ತಿಳಿಯಬಹುದಾಗಿದೆ.