Kannada Translation

Ayah by Ayah

Tags

Download Links

Kannada Translation translation for Surah Al-Ikhlas — Ayah 1

112:1
قُلۡ هُوَ ٱللَّهُ أَحَدٌ ١
(ಪ್ರವಾದಿಯವರೇ) ಹೇಳಿರಿ, ಅವನು1 ಅಲ್ಲಾಹು2. ಏಕಮಾತ್ರನು3.
Footnotes
  • [1] * ಪವಿತ್ರವಾದ ಏಕದೇವ ವಿಶ್ವಾಸವನ್ನು ಪ್ರತಿಪಾದಿಸುವ ಅಧ್ಯಾಯವೆಂಬ ನೆಲೆಯಲ್ಲಿ ಇದಕ್ಕೆ ಸೂರಃ ಇಖ್‍ಲಾಸ್ವ್ ಎಂಬ ಹೆಸರು ಬಂದಿದೆ. ಇದಕ್ಕೆ ಹೊರತಾಗಿ ಸೂರಃ ಅಸಾಸ್, ಸೂರಃ ಮಅïರಿಫ, ಸೂರಃ ತೌಹೀದ್ ಎಂಬ ಹೆಸರೂ ಇವೆ. ಖುರ್‍ಆನಿನಲ್ಲಿರುವ ಅಧ್ಯಾಯಗಳ ಪೈಕಿ ಈ ಅಧ್ಯಾಯಕ್ಕೆ ವಿಶೇಷವಾದ ಮಹತ್ವವಿದೆ. ಅಬೂಸಈದಿಲ್ ಖುದ್ರೀ ಅವರಿಂದ ವರದಿ: ಒಮ್ಮೆ ಪ್ರವಾದಿವರ್ಯರು ಸ್ವಹಾಬಿಗಳಲ್ಲಿ ಕೇಳಿದರು, ಪ್ರತೀ ದಿನ ರಾತ್ರಿ ಖುರ್‍ಆನಿನ ಮೂರರಲ್ಲೊಂದು ಭಾಗ ಪಾರಾಯಣ ಮಾಡಲು ನಿಮಗೆ ಸಾಧ್ಯವಾಗಲಾರದೇ? ಅವರು ಕೇಳಿದರು, `ಪ್ರವಾದಿಯವರೇ, ಅದು ನಮಗೆ ಸಾಧ್ಯವಾಗುವುದು ಹೇಗೆ? ಆಗ ಪ್ರವಾದಿವರ್ಯ ರು ಹೇಳಿದರು, ಅಲ್ಲಾಹುಲ್‍ವಾಹಿದುಸ್ಸಮದ್ (ಅರ್ಥಾತ್ ಸೂರಃ ಇಖ್‍ಲಾಸ್ವ್) ಸೂರಃ ಖುರ್‍ಆನಿನ ಮೂರಲ್ಲೊಂದು ಭಾಗಕ್ಕೆ ಸಮಾನವಾಗಿದೆ. (ಮುಸ್ಲಿಮ್) ಖುರೈಶಿಗಳು `ಆಮಿರ್ ಬಿನ್ ತುಫೈಲ್' ಎಂಬ ವ್ಯಕ್ತಿಯನ್ನು ನಬಿವರ್ಯ ರವರ ಬಳಿ ಕಳಿಸಿ ಪ್ರವಾದಿವರ್ಯ ರ ಆರಾಧ್ಯ ವಸ್ತುವಿನ ಕುರಿತು ವಿವರಣೆ ಕೇಳುವಂತೆ ತಿಳಿಸಿದರು. ಆಮಿರ್ ಬಂದು ಕೇಳಿದ; `ಮುಹಮ್ಮದ್! ನಿನ್ನ ಆರಾಧ್ಯ ವಸ್ತುವಿನ ಕುರಿತು ನಮಗೆ ವಿವರಿಸಿ ಕೊಡು, ಅದನ್ನು ಚಿನ್ನದಿಂದಲೋ ಅಥವಾ ಬೆಳ್ಳಿಯಿಂದಲೋ, ಯಾವುದರಿಂದ ನಿರ್ಮಿಸಲ್ಪಟ್ಟಿದೆ?' ಇದಕ್ಕೆ ಉತ್ತರವಾಗಿ ಅಲ್ಲಾಹನು ಈ ಅಧ್ಯಾಯವನ್ನು ಅವತೀರ್ಣಗೊಳಿಸಿದನು. ಹುವ ಎಂಬ ಸರ್ವನಾಮ ಪದವನ್ನು ಇಲ್ಲಿ ಎರಡು ರೀತಿಯಲ್ಲಿ ಅರ್ಥೈಸಬಹುದು. 1. ಪ್ರಸ್ತುತ ಪದವು, ಜೂದರು ಮತ್ತು ಕ್ರೈಸ್ತರು ಕೇಳಿದ ಆರಾಧ್ಯನಿಗೆ ಮರಳುವುದು. ಆಗ ಅದರರ್ಥ ನೀವು ಕೇಳಿದ ಆರಾಧ್ಯನು ಒರ್ವನಾದ ಅಲ್ಲಾಹನಾಗಿರುವನು ಎಂದಾಗುವುದು.
  • [2] ಸಂಗತಿ ಎಂಬ ಅರ್ಥ ಬರುವ `ಳಮೀರುಶ್ಶಅïನ್' ಆಗಿದೆ. ಆಗ `ಸಂಗತಿಯು ಅಲ್ಲಾಹು ಓರ್ವನಾಗಿದ್ದಾನೆ ಎಂದಾಗಿದೆ' ಎಂಬ ಅರ್ಥ ಬರುತ್ತದೆ.
  • [3] ಅಹದ್ ಎಂಬುದು ವಿಶಿಷ್ಟ ಗುಣವಾಚಕ ಪದವಾಗಿದೆ. ಅಲ್ಲಾಹೇತರರಿಗೆ ಇದನ್ನು ಉಪಯೋಗಿಸಲ್ಪಡುವುದಿಲ್ಲ. ಆದ್ದರಿಂದಲೇ ರಜುಲುನ್ ವಾಹಿದುನ್ (ಒಬ್ಬ ಪುರುಷ) ಎಂದು ಹೇಳಲಾಗುವುದೇ ವಿನಃ ರಜುಲುನ್ ಅಹದುನ್ ಎಂದು ಹೇಳಲಾಗುವುದಿಲ್ಲ. (ಅಸಾಸು-ತ್ತಕ್‍ದೀಸ್ ಲಿರ್ರಾಝಿ)