Kannada Translation

Ayah by Ayah

Tags

Download Links

Kannada Translation translation for Surah Al-Falaq — Ayah 4

113:4
وَمِن شَرِّ ٱلنَّفَّٰثَٰتِ فِي ٱلۡعُقَدِ ٤
ಗಂಟುಗಳಲ್ಲಿ ಊದುವವರ ಕೇಡಿನಿಂದ1.
Footnotes
  • [1] . ನಫ್ಫಾಸಾತ್ ಎಂಬುದು ನಾಫಿಸತ್ ಎಂಬುದರ ಬಹುವಚನ ರೂಪವಾಗಿದೆ. ಊದುವವರು ಎಂದರ್ಥ. ಬಹುದೇವ ಸಂಕಲ್ಪದ ಮಂತ್ರಗಳನ್ನು ಊದಿ ಮಾಟ ಮಾಡುವವರ ಕುರಿತು ಈ ಪ್ರಸ್ತಾಪ ಬಂದಿದೆ. ಊದುವ ಸ್ತ್ರೀಯರು ಎಂದೂ ಇದನ್ನು ಅರ್ಥೈಸಬಹುದು. ಲಬೀದನು ಪ್ರವಾದಿವರ್ಯ ರಿಗೆ ಸಿಹ್‍ರ್ ಮಾಡುವಾಗ ಆತನ ಹೆಣ್ಣು ಮಕ್ಕಳು ಅವನ ನೆರವಿಗೆ ಇದ್ದುದರಿಂದ ಅವರನ್ನುದ್ದೇಶಿಸಿ ಹೀಗೆ ಹೇಳಲಾಗಿದೆ ಎಂಬ ಅಭಿಪ್ರಾಯವಿದೆ. ಇನ್ನು ನಫ್ಫಾಸಾತ್ ಎಂಬುದನ್ನು ನುಫೂಸ್ ಎಂಬ ಸಾಂಕಲ್ಪಿಕ ಪದದ ವಿಶೇಷಣವಾಗಿಯೂ ವ್ಯಾಖ್ಯಾನಿಸಬಹುದು. ಆಗ ಸೂಕ್ತದ ಅರ್ಥವು ಊದುವ ಎಲ್ಲಾ ಶರೀರಗಳ ಕೇಡಿನಿಂದ ಅಭಯ ಯಾಚಿಸುತ್ತೇನೆ ಎಂದಾಗುತ್ತದೆ. ಅಂದರೆ ಇದು ಶಿರ್ಕ್‍ನ ವಚನಗಳನ್ನು ಪಠಿಸಿ ಊದುವುದರ ಕುರಿತಾಗಿದೆ. ಇದು ಇಸ್ಲಾಮಿನಲ್ಲಿ ನಿಷಿದ್ಧವಾಗಿದೆ. ಆದರೆ ಖುರ್‍ಆನಿನ ಸೂಕ್ತ ಅಥವಾ ದ್ಸಿಕ್ರ್‍ಗಳನ್ನು ಹೇಳಿ ಊದುವುದಕ್ಕೆ ಇದು ಅನ್ವಯವಲ್ಲ. ಸಿಹ್‍ರ್ ಎಂಬುದು ಒಂದು ಯತಾಥ್ರ್ಯ. ಅದು ಮನುಷ್ಯರ ಮೇಲೆ ದೈಹಿಕ, ಮಾನಸಿಕ, ಆರ್ಥಿಕ, ಕೌಟುಂಬಿಕ, ಹೀಗೆ ಎಲ್ಲ ರಂಗದಲ್ಲಿಯೂ ಅನೇಕ ದುಷ್ಪರಿಣಾಮಗಳನ್ನು ಬೀರುತ್ತದೆ ಎಂಬುದು ಅಹ್ಲುಸ್ಸುನ್ನತಿನ ಅಭಿಪ್ರಾಯ. ಇಂಥ ಸಂದರ್ಭಗಳಲ್ಲಿ ಆಧ್ಯಾತ್ಮ ಚಿಕಿತ್ಸಾ ರೀತಿಗಳಾದ ಮಂತ್ರವನ್ನು ಬಳಸುವುದಕ್ಕೆ ಅನೇಕ ಹದೀಸ್‍ಗಳಲ್ಲಿ ಪುರಾವೆಗಳು ಬಂದಿವೆ. ಜಿಬ್‍ರೀಲ್ ಪ್ರವಾದಿವರ್ಯ ರಿಗೆ ಮಂತ್ರಿಸಿ ಊದಿದ್ದು, ಪ್ರವಾದಿವರ್ಯ ರು ಕಲಿಸಿಕೊಟ್ಟ ಕೆಲವು ಮಂತ್ರದ ವಾಕ್ಯಗಳನ್ನು ಹ. ಇಬ್ನ್‍ಅಬ್ಬಾಸ್ ಉಲ್ಲೇಖಿಸಿದ್ದು, ಸ್ವತಃ ಪ್ರವಾದಿವರ್ಯ ರು ರೋಗಿಗಳ ಬಳಿ ಹೋದರೆ ಅವರಿಗೆ ಕೆಲವು ನಿಗದಿತ ವಾಕ್ಯಗಳನ್ನು ಓದಿ ಮಂತ್ರಿಸಿ ಊದುತ್ತಿದ್ದುದು, ವಿದ್ವಾಂಸ ಲೋಕದ ಒಮ್ಮತದಿಂದ ಸಾಬೀತಾದ ಸಂಗತಿಗಳಾಗಿವೆ. (ರಾಝೀ, ಖಾಝಿನ್)