Kannada Translation

Ayah by Ayah

Tags

Download Links

Kannada Translation translation for Surah Al-Ahzab — Ayah 32

33:32
يَٰنِسَآءَ ٱلنَّبِيِّ لَسۡتُنَّ كَأَحَدٖ مِّنَ ٱلنِّسَآءِ إِنِ ٱتَّقَيۡتُنَّۚ فَلَا تَخۡضَعۡنَ بِٱلۡقَوۡلِ فَيَطۡمَعَ ٱلَّذِي فِي قَلۡبِهِۦ مَرَضٞ وَقُلۡنَ قَوۡلٗا مَّعۡرُوفٗا ٣٢
ಪ್ರವಾದಿಯ ಪತ್ನಿಯರೇ, ನೀವು ಬೇರೆ ಸ್ತ್ರೀಯರಂತಲ್ಲ. ನೀವು ಭಯಭಕ್ತಿ (ಸೂಕ್ಷ್ಮತೆ) ಹೊಂದಿದ್ದಲ್ಲಿ. ಆದ್ದರಿಂದ (ಪುರುಷರೊಡನೆ) ಮೃದು ಮಾತು ಆಡದಿರಿ. ಮನದಲ್ಲಿ ರೋಗ ವಿದ್ದವನು ಮೋಹಿಸಿಬಿಟ್ಟಾನು1. ನೀವು ಹಸನಾ ದ ನುಡಿಯನ್ನಾಡಿರಿ.
Footnotes
  • [1] ಸ್ತ್ರೀಯರು ಪರ ಪುರುಷರೊಡನೆ ಮಾತಾಡುವ ಅನಿವಾರ್ಯ ಸಂದರ್ಭದಲ್ಲಿ ಕೂಡಾ ಸ್ವರವನ್ನು ಮಾಧುರ್ಯಗೊಳಿಸಬಾರದು ಎಂಬ ಆದೇಶವಿದು. ಹೀಗಿರುವಾಗ ಮಧುರ ಕಂಠದಿಂದ ಹಾಡು ಕೇಳಿಸುವುದು ದೊಡ್ಡ ತಪ್ಪು ಎಂಬುದು ಸ್ಪಷ್ಟ. ಮಾತಿಗಿಂತ ಹೆಚ್ಚು ಹಾಡಿನಲ್ಲಿ ಆಕರ್ಷಣೆ ಇದೆ ತಾನೆ? ಹೆಣ್ಣಿನ ಸ್ವರದ ಸಿನಿಮಾಗಿಂತ ಇತರ ಪದ್ಯಗಳು ಸಿ.ಡಿ. ಹಾಗೂ ಮೊಬೈಲ್ ರಿಂಗಿಂಗ್ ಟೋನ್‍ಗಳು ವ್ಯಾಪಕವಾದ ಈ ಕಾಲದಲ್ಲಿ ಈ ಆಯತ್ ಬಹಳ ಪ್ರಸ್ತುತ. ಮಹಿಳೆಗೆ ಹಾಡುವುದು ನಿಷಿದ್ಧವಾದರೆ ಅದನ್ನು ಆಲಿಸುವುದು ಪರಪುರುಷರಿಗೆ ನಿಷಿದ್ಧವೆಂಬುದು ಸ್ಪಷ್ಟ.