Kannada Translation

Ayah by Ayah

Tags

Download Links

Kannada Translation translation for Surah Al-Ahzab — Ayah 33

33:33
وَقَرۡنَ فِي بُيُوتِكُنَّ وَلَا تَبَرَّجۡنَ تَبَرُّجَ ٱلۡجَٰهِلِيَّةِ ٱلۡأُولَىٰۖ وَأَقِمۡنَ ٱلصَّلَوٰةَ وَءَاتِينَ ٱلزَّكَوٰةَ وَأَطِعۡنَ ٱللَّهَ وَرَسُولَهُۥٓۚ إِنَّمَا يُرِيدُ ٱللَّهُ لِيُذۡهِبَ عَنكُمُ ٱلرِّجۡسَ أَهۡلَ ٱلۡبَيۡتِ وَيُطَهِّرَكُمۡ تَطۡهِيرٗا ٣٣
ನಿಮ್ಮ ಮನೆಗಳಲ್ಲೇ ಅಡಗಿದ್ದು ಕೊಳ್ಳಿರಿ1. ಗತ ಅಜ್ಞಾನ ಕಾಲದ ಸೌಂದರ್ಯ ಪ್ರದರ್ಶನದಂತೆ ನೀವು ಮೈಮಾಟವನ್ನು ಪ್ರದರ್ಶಿಸಬೇಡಿರಿ. ನಮಾಝನ್ನು ಸಂಸ್ಥಾಪಿಸಿರಿ, ಝಕಾತ್ ಕೊಡಿರಿ, ಅಲ್ಲಾಹು ಮತ್ತು ಅವನ ರಸೂಲರನ್ನು ಅನುಸರಿಸಿರಿ. ರಸೂಲರ ಮನೆಯವರೇ,2 ನಿಮ್ಮಿಂದ ಮಾಲಿನ್ಯವನ್ನು ದೂರೀಕರಿಸಲು ಮತ್ತು ನಿಮ್ಮನ್ನು ಚೆನ್ನಾಗಿ ಶುದ್ಧಿಗೊಳಿಸಲು ಅಲ್ಲಾಹು ಇಚ್ಚಿಸುತ್ತಾನೆ.
Footnotes
  • [1] ಅರ್ಥಾತ್ ಸ್ತ್ರೀಯರು ಕಡ್ಡಾಯ ಕಾರ್ಯಗಳ ಹೊರತು ಎಲ್ಲ ಸಂದರ್ಭಗಳಲ್ಲೂ ಹೊರಗಿಳಿಯದೆ ಮನೆಯೊಳಗೇ ಇರಬೇಕು ಎಂದಾಗಿದೆ. ಪ್ರಸ್ತುತ ಆಯತನ್ನು ಓದುತ್ತಿರುವಾಗ ಆಇಶಾ ಬೀವಿಯವರು ತನ್ನ ಮುಖ ಪರದೆ ಒದ್ದೆಯಾಗುವಷ್ಟು ಅಳುತ್ತಿದ್ದರು ಎಂದು ವರದಿಯಾಗಿದೆ. ಜಮಲ್ ಯುದ್ಧದ ಸಂದರ್ಭದಲ್ಲಿ ಮುಸ್ಲಿಮರೊಳಗಿನ ಸಂಧಾನಕ್ಕಾಗಿ ತಾನು ಹೊರಗಿಳಿದುದು ತಪ್ಪಾಯಿತೇ ಎಂಬ ಭಯವಾಗಿತ್ತು ಅವರ ಅಳುವಿಗೆ ಕಾರಣ. ``ನೀವು ಮನೆಯೊಳಗೇ ಇರಬೇಕು ಎಂದಾಗಿತ್ತಲ್ಲವೇ ಅಲ್ಲಾಹನ ಆದೇಶ?'' ಎಂದು ಆಇಶಾರವರಲ್ಲಿ ಅಮ್ಮಾರ್ ರವರು ಕೇಳಿದರು ಎಂದು ಕೂಡಾ ವರದಿಯಾಗಿದೆ. (ತಫ್ಸೀರ್ ಖುರ್ಥುಬಿ (4: 180) ಇಮಾಮ್ ಅಲಾಉದ್ದೀನ್ ಕಾಸಾನಿ ಬರೆಯುತ್ತಾರೆ. ``ಜುಮಾ ಹಾಗೂ ಎರಡು ಈದ್‍ಗಳಿಗೆ ಯುವತಿಯರ ಹಾಜರಾತಿ ಸಮ್ಮತವಲ್ಲವೆಂಬುದು ಒಮ್ಮತಾಭಿಪ್ರಾಯ. ನೀವು ಮನೆಗಳೊಳಗೆ ಅವಿತುಕೊಂಡಿರಬೇಕು'' ಎಂಬ ಖುರ್‍ಆನಿನ ಆದೇಶವಾಗಿದೆ ಇದಕ್ಕೆ ಕಾರಣ. ಮನೆಯೊಳಗೆ ಇರಬೇಕು ಎಂಬ ಆದೇಶದ ಉದ್ದೇಶ ಹೊರಗಿಳಿಯಬಾರದು ಎಂದಾಗಿರುತ್ತದೆ. ಅಷ್ಟೇ ಅಲ್ಲ ಅವರ ಹೊರ ಸುತ್ತಾಟವು ನಾಶಕ್ಕೆ ಹೇತುವೆಂಬುದರಲ್ಲಿ ಸಂದೇಹವಿಲ್ಲ. ನಾಶವನ್ನುಂಟು ಮಾಡುವುದು ನಿಷಿದ್ಧ. ಆದ್ದರಿಂದ ನಿಷಿದ್ಧಕ್ಕೆ ಕಾರಣವಾಗುವ ಕಾರ್ಯವೂ ನಿಷಿದ್ಧ (ಬದಾಇಉಸ್ಸನಾಈ 1: 275) ಸ್ತ್ರೀಯರ ಜಮಾಅತ್‍ಗೆ ಹಾಜರಾತಿ ಸುನ್ನತ್ತೇ ಅದಲ್ಲ ಕೇವಲ ಸಮ್ಮತ ಮಾತ್ರವೋ ಎಂಬ ಚರ್ಚೆಯಲ್ಲಿ ಇಬ್ನು ಜರೀರು ತ್ವಬರಿ ಬರೆದು ದನ್ನು ಕಸ್ತಲ್ಲಾನಿ ಉಲ್ಲೇಖಿಸಿದ್ದಾರೆ. ``ಮಸೀದಿ ಪ್ರವೇಶಕ್ಕೆ ಸಂಬಂಧಪಟ್ಟ ಹದೀಸ್‍ಗಳೆಲ್ಲವೂ ಕೇವಲ ಅನುಮತಿ ಮಾತ್ರ. ಅದು ಫರಳೋ ಸುನ್ನತ್ತೋ ಅಲ್ಲ. (ಕಸ್ತಲ್ಲಾನಿ 2: 51) ಆದ್ದರಿಂದಲೇ ಇಮಾಂ ಶಾಫಿಯವರು ರಬೀಅ ರವರೊಂದಿಗೆ ಈ ವಿಷಯದಲ್ಲಿ ಚರ್ಚೆ ಮಾಡುತ್ತಾ ಈ ಕೆಳಗಿನಂತೆ ಹೇಳಿದ್ದು; ``ಸ್ತ್ರೀಯರ ಮಸೀದಿ ಪ್ರವೇಶದಲ್ಲಿ ಏನಾದರೂ ಪುಣ್ಯ ಇದ್ದಿದ್ದರೆ ನಬಿ-ಸಹಾಬಿಗಳು ಅದಕ್ಕೆ ಆದೇಶ ಕೊಡುತ್ತಿದ್ದರು. ಆದರೆ ಎಲ್ಲರೂ ಪ್ರವಾದಿಯವರಿಂದ ಉದ್ಧರಿಸಿದ್ದು ``ಸ್ತ್ರೀಗೆ ಮಸೀದಿಗಿಂತ ಮನೆಯಲ್ಲೇ ನಮಾಝ್ ಉತ್ತಮ'' ಎಂದಾಗಿದೆ. (ಇಖ್ತಿಲಾಫುಲ್ ಹದೀಸ್ 7: 175)
  • [2] ರಸೂಲರ ಮನೆಯವರು (ಅಹ್ಲುಲ್ ಬೈತ್) ಎಂದರೆ ``ಪ್ರವಾದಿ ಪತ್ನಿಯರು ಹಾಗೂ ಮಕ್ಕಳು ಹಾಗೂ ಹಸನ್, ಹುಸೈನ್ ಎಂಬವರನ್ನೊಳಗೊಂಡ ಪ್ರವಾದಿ ಕುಟುಂಬ. (ರಾಝಿ: 25: 181) ಒಮ್ಮೆ ಪ್ರವಾದಿವರ್ಯ ರು ಅಲೀ ಫಾತಿಮ, ಹಸನ್, ಹುಸೈನ್ ಎಂಬವರನ್ನು ಒಟ್ಟು ಸೇರಿಸಿ``ನನ್ನ ಅಹ್ಲುಬೈತ್ ಇದು'' ಎಂದರು. (ಮುಸ್ಲಿಮ್ 15/175) ``ಫಾತಿಮಾ ನನ್ನ ದೇಹದ ಒಂದು ಭಾಗ'' (ಬುಖಾರಿ 1/532) ಎಂದು ಇನ್ನೊಂದು ಹದೀಸ್‍ನಲ್ಲಿದೆ. ``ನೀನು ನನ್ನವನು, ನಾನು ನಿನ್ನವನು'' ಎಂದು ಅಲಿಯವರಲ್ಲಿ ನಬಿಯವರು ಹೇಳಿದ ಹದೀಸ್ ಬುಖಾರಿಯಲ್ಲಿದೆ. (1-529) ಆಇಶಾ ಹೇಳುತ್ತಾರೆ; ಒಮ್ಮೆ ನಬಿಯವರು ಒಂದು ಹೊದಿಕೆಯೊಳಗೆ ಹಸನ್, ಹುಸೈನ್, ಫಾತಿಮಾ ಹಾಗೂ ಅಲಿಯನ್ನು ಸೇರಿಸಿಕೊಂಡು ``ಅಹ್ಲುಬೈತ್‍ಗಳಾದ ನಿಮ್ಮಿಂದ ದುರಾಚಾರಗಳನ್ನು ನಿವಾರಿಸಲು ನಿಮ್ಮನ್ನು ಶುದ್ಧೀಕರಿಸಲು ಅಲ್ಲಾಹನು ಉದ್ದೇಶಿಸುತ್ತಾನೆ'' ಎಂಬ ಆಯತನ್ನು (ಅಹ್ಝಾಬ್: 32) ನಬಿಯರು ಓದಿದರು. (ಜಾಮಿಉಲ್ ಬಯಾನ್ 10-292) ಈ ಆಯತ್ ಅವತೀರ್ಣವಾದಾಗ ನಬಿಯವರು ಪ್ರಸ್ತುತ ನಾಲ್ವರನ್ನು ಹತ್ತಿರ ಸೇರಿಸಿ ಒಂದು ಹೊದಿಕೆಯನ್ನು ಅವರ ಮೇಲೆ ಹಾಕಿ; ``ಅಲ್ಲಾಹನೇ! ನನ್ನ ಅಹ್ಲುಬೈತ್ ಇವರೇ. ಇವರಿಂದ ಎಲ್ಲ ಕೆಡುಕುಗಳನ್ನು ನಿವಾರಿಸಿ ಶುದ್ಧೀಕರಿಸು'' ಎಂದು ಪ್ರಾರ್ಥಿಸಿದರು ಎಂದು ನಬಿ ಪತ್ನಿ ಉಮ್ಮು ಸಲಮ ರಿಂದ ವರದಿಯಾದ ಹದೀಸನ್ನು ಹಾಫಿಳ್ ಇಬ್ನುಜರೀರ್, ಇಬ್ನುಲ್ ಮುನ್‍ದಿರ್, ಇಬ್ನು ಮುರ್‍ದೂಯ, ಬೈಹಖಿ ಎಂಬವರು ವಿವಿಧ ಪರಂಪರೆಗಳ ಮೂಲಕ ದಾಖಲಿಸುತ್ತಾರೆ. ಇಮಾಮ್ ತುರ್ಮುದಿ ಹಾಗೂ ಹಾಕಿಂ ಉಲ್ಲೇಖಿಸುತ್ತಾ ಈ ಹದೀಸ್ ವಿಶ್ವಾಸಯೋಗ್ಯ ಎಂದು ಸಾರಿದ್ದಾರೆ. (ಅದ್ದುರ್ರುಲ್ ಮನ್‍ಸೂರ್ 5: 377)