Kannada Translation

Ayah by Ayah

Tags

Download Links

Kannada Translation translation for Surah Al-Ahzab — Ayah 34

33:34
وَٱذۡكُرۡنَ مَا يُتۡلَىٰ فِي بُيُوتِكُنَّ مِنۡ ءَايَٰتِ ٱللَّهِ وَٱلۡحِكۡمَةِۚ إِنَّ ٱللَّهَ كَانَ لَطِيفًا خَبِيرًا ٣٤
ನಿಮ್ಮ ಮನೆಗಳಲ್ಲಿ ಓದಿ ಹೇಳಲಾಗುತ್ತಿರುವ ಅಲ್ಲಾಹನ ಸೂಕ್ತಗಳನ್ನೂ ಯುಕ್ತಿಪೂರ್ಣ ಜ್ಞಾನಗಳನ್ನೂ1 ಚೆನ್ನಾಗಿ ನೆನಪಿಡಿರಿ. ಅಲ್ಲಾಹು ಸೂಕ್ಷ್ಮಜ್ಞನೂ ವಿವರಪೂರ್ಣನೂ ಆಗಿರುತ್ತಾನೆ.
Footnotes
  • [1] ಹಿಕ್‍ಮತ್ ಎಂಬುದಕ್ಕೆ ಜ್ಞಾನ, ತತ್ವಜ್ಞಾನ, ಯುಕ್ತಿ ಮುಂತಾದ ಅರ್ಥಗಳಿವೆ. ಖುರ್‍ಆನಿನ ಹೊರತಾಗಿ ಪ್ರವಾದಿವರ್ಯರಿಗೆ ಲಭಿಸುವ ಸರ್ವಜ್ಞಾನಗಳೂ ಹಿಕ್‍ಮತ್‍ಗೆ ಸೇರಿವೆ. ಪ್ರವಾದಿವರ್ಯರ ಮಾತು ಮತ್ತು ಚರ್ಯೆಗಳನ್ನೊಳಗೊಂಡ ಸುನ್ನತ್ತಾಗಿದೆ ಇಲ್ಲಿನ ವಿವಕ್ಷೆ. ಇಮಾಂ ಇಬ್ನು ಜರೀರ್, ಮಹಿಲ್ಲಿ, ಇಬ್ನುಕಸೀರ್ ಮುಂತಾದ ವ್ಯಾಖ್ಯಾನಗಾರರು ಇದನ್ನು ಸ್ಪಷ್ಟಪಡಿಸಿದ್ದಾರೆ. ಪ್ರವಾದಿವರ್ಯರ ಸುನ್ನತ್ ಕೂಡಾ ವಹೀ ಮೂಲಕ ಲಭಿಸುವಂತಹುದು.