Kannada Translation

Ayah by Ayah

Tags

Download Links

Kannada Translation translation for Surah Al-Ahzab — Ayah 36

33:36
وَمَا كَانَ لِمُؤۡمِنٖ وَلَا مُؤۡمِنَةٍ إِذَا قَضَى ٱللَّهُ وَرَسُولُهُۥٓ أَمۡرًا أَن يَكُونَ لَهُمُ ٱلۡخِيَرَةُ مِنۡ أَمۡرِهِمۡۗ وَمَن يَعۡصِ ٱللَّهَ وَرَسُولَهُۥ فَقَدۡ ضَلَّ ضَلَٰلٗا مُّبِينٗا ٣٦
ಅಲ್ಲಾಹು ಮತ್ತು ಅವನ ಸಂದೇಶವಾಹಕರು ಒಂದು ವಿಷಯದ ತೀರ್ಮಾನ ಮಾಡಿದರೆ ಆ ವಿಷಯದಲ್ಲಿ ಸ್ವತಃ ತೀರ್ಮಾನ ಕೈಗೊಳ್ಳುವ ಹಕ್ಕು ಸತ್ಯವಿಶ್ವಾಸಿಗಳಾದ ಯಾವ ಸ್ತ್ರೀ ಪುರುಷರಿಗೂ ಇಲ್ಲ. ಯಾರಾದರೂ ಅಲ್ಲಾಹು ಮತ್ತು ಅವನ ಸಂದೇಶವಾಹಕರ ಆಜ್ಞೋಲ್ಲಂಘನೆ ಮಾಡಿದರೆ, ಅವನು ಸುವ್ಯಕ್ತ ಪಥಭ್ರಷ್ಟತೆಗೆ ಒಳಗಾದನು1.
Footnotes
  • [1] ಒಂದು ವಿಷಯದಲ್ಲಿ ಅಲ್ಲಾಹು ಮತ್ತು ರಸೂಲ್ ಒಂದು ವಿಧಿ ಘೋಷಣೆ ಮಾಡಿದರೆ ಮತ್ತೆ ಅದರ ವಿರುದ್ಧ ಅಭಿಪ್ರಾಯ ಹೇಳುವ ಸ್ವಾತಂತ್ರ್ಯ ಯಾರಿಗೂ ಇಲ್ಲ. ಇದು ಇಸ್ಲಾಮಿನ ಮೂಲಭೂತ ಸಿದ್ಧಾಂತ. ಅಲ್ಲಾಹನ ಆದೇಶಕ್ಕೆ ವಿರುದ್ಧವಾಗಿ ಪ್ರವಾದಿವರ್ಯರು ಆದೇಶಿಸಲಾರರು. ಪ್ರವಾದಿವರ್ಯರ ಆದೇಶವು ವಾಸ್ತವದಲ್ಲಿ ಅಲ್ಲಾಹನ ಆದೇಶವೇ ಆಗಿರುತ್ತದೆ. ಅವರ ಮಾತು ಕೃತಿಗಳು ಖುರ್‍ಆನಿನ ವ್ಯಾಖ್ಯಾನಗಳಾಗಿವೆ. ಆದ್ದರಿಂದ ಖುರ್‍ಆನ್ ತಿಳಿಯಲು ಪ್ರವಾದಿವರ್ಯರ ವ್ಯಾಖ್ಯಾನದ ಮೂಲಕವಾಗಬೇಕು. ಖುರ್‍ಆನಿನಿಂದ ಸ್ವಂತವಾಗಿ ಏನಾದರೂ ಗ್ರಹಿಸಿಕೊಂಡು ತರುವಾಯ ಅದಕ್ಕೆ ವಿರುದ್ಧವಾದ ಯಾವುದೇ ಪ್ರಬಲ ಹದೀಸ್‍ಗಳನ್ನು ಕಂಡರೆ ಅದು ಅಲ್ಲಾಹನ ವಚನಕ್ಕೆ ವಿರುದ್ಧವಾಗಿದೆ ಎನ್ನುವುದು ಸಂಗತವಲ್ಲ. ಆದರೆ ಒಂದು ವಿಷಯದಲ್ಲಿ ಅಲ್ಲಾಹು ಹಾಗೂ ರಸೂಲರಿಂದ ಸ್ಪಷ್ಟವಾದ ವಿಧಿ ಕಂಡು ಬರದೆ, ತದ್ವಿಷಯದಲ್ಲಿ ಮುಜ್‍ತಹಿದ್‍ಗಳಾದ ಇಮಾಂಗಳು ಇತರ ಆಧಾರ ಪ್ರಮಾಣಗಳಲ್ಲಿ ಸಂಶೋಧನೆ ನಿರೀಕ್ಷಣೆಯನ್ನು ಮಾಡಿ ವಿಧಿ ಕಂಡು ಹುಡುಕುವುದು ಇದಕ್ಕೆ ಹೊರತಾಗಿದೆ. ಅಲ್ಲಾಹು ಹಾಗೂ ರಸೂಲರು ಸ್ಪಷ್ಟವಾಗಿ ತಿಳಿಸದ ವಿಷಯದಲ್ಲಿ ಮಾತ್ರ ಇಜ್‍ತಿಹಾದ್ ನಡೆಯುತ್ತದೆ. ಶರೀಅತ್‍ನ ವಿಧಿ ತಡೆಗಳಲ್ಲಿ ಯಾವುದೇ ಅಸಂಬದ್ಧತೆ ಇಲ್ಲ. ಆದರೆ ಕೆಲವು ವಿಷಯಗಳ ಯುಕ್ತಿ ರಹಸ್ಯಗಳು ನಿಗೂಢವಾಗಿದೆ ಎಂದು ಮಾತ್ರ. ಆ ಸಂದರ್ಭದಲ್ಲಿ ಅದನ್ನು ಕಂಡುಹುಡುಕಲು ಪ್ರಯತ್ನಿಸಬಹುದೇ ವಿನಃ ವಿಧಿಯನ್ನು ತಳ್ಳಿ ಹಾಕಲಾಗದು. ಅದು ಅಲ್ಲಾಹು ಹಾಗೂ ರಸೂಲರನ್ನು ಧಿಕ್ಕರಿಸುವುದಾಗಿದೆ.