Kannada Translation

Ayah by Ayah

Tags

Download Links

Kannada Translation translation for Surah Al-Ahzab — Ayah 37

33:37
وَإِذۡ تَقُولُ لِلَّذِيٓ أَنۡعَمَ ٱللَّهُ عَلَيۡهِ وَأَنۡعَمۡتَ عَلَيۡهِ أَمۡسِكۡ عَلَيۡكَ زَوۡجَكَ وَٱتَّقِ ٱللَّهَ وَتُخۡفِي فِي نَفۡسِكَ مَا ٱللَّهُ مُبۡدِيهِ وَتَخۡشَى ٱلنَّاسَ وَٱللَّهُ أَحَقُّ أَن تَخۡشَىٰهُۖ فَلَمَّا قَضَىٰ زَيۡدٞ مِّنۡهَا وَطَرٗا زَوَّجۡنَٰكَهَا لِكَيۡ لَا يَكُونَ عَلَى ٱلۡمُؤۡمِنِينَ حَرَجٞ فِيٓ أَزۡوَٰجِ أَدۡعِيَآئِهِمۡ إِذَا قَضَوۡاْ مِنۡهُنَّ وَطَرٗاۚ وَكَانَ أَمۡرُ ٱللَّهِ مَفۡعُولٗا ٣٧
(ಪೈಗಂಬರರೇ,) ಅಲ್ಲಾಹನೂ ನೀವೂ ಅನುಗ್ರಹ ನೀಡಿದ ವ್ಯಕ್ತಿಯನ್ನುದ್ದೇಶಿಸಿ1 ನೀವು, ‘ನಿನ್ನ ಪತ್ನಿಯನ್ನು (ತಲಾಖ್ ನೀಡದೆ) ತಡೆದಿರಿಸು ಮತ್ತು ಅಲ್ಲಾಹನನ್ನು ಭಯಪಡು’ ಎಂದು ಹೇಳಿದ ಸಂದರ್ಭವನ್ನು ಸ್ಮರಿಸಿರಿ. ಅಲ್ಲಾಹು ಬಹಿರಂಗಗೊಳಿಸಲು ಇಚ್ಚಿಸಿದ್ದ ವಿಷಯವನ್ನು ನೀವು ನಿಮ್ಮ ಹೃದಯದೊಳಗೆ ಬಚ್ಚಿಟ್ಟಿದ್ದಿರಿ. ಜನರಿಗೆ ಹೆದರಿದಿರಿ. ನಿಜವಾಗಿ ತಮಗೆ ಭಯ ಪಡಲು ಹೆಚ್ಚು ಅರ್ಹನು ಅಲ್ಲಾಹು ಆಗಿರುವನು. ತದನಂತರ ಝೈದ್ ಅವಳಿಂದ ತನ್ನ ಅಪೇಕ್ಷೆಯನ್ನು ಪೂರ್ತಿಗೊಳಿಸಿಕೊಂಡ ಬಳಿಕ ಅವಳ ವಿವಾಹವನ್ನು ನಾವು ನಿಮ್ಮೊಂದಿಗೆ ಮಾಡಿದೆವು. ಇದು ದತ್ತು ಪುತ್ರರ ಪತ್ನಿಯರನ್ನು ವಿವಾಹವಾಗುವುದರಲ್ಲಿ - ಅವರು ತಮ್ಮ ಪತ್ನಿಯರೊಂದಿಗೆ ತಮ್ಮ ಅಪೇಕ್ಷೆ ಪೂರ್ತಿಗೊಳಿಸಿಕೊಂಡ ಬಳಿಕ - ಸತ್ಯವಿಶ್ವಾಸಿಗಳಿಗೆ ಯಾವುದೇ ಅಡಚಣೆ ಇಲ್ಲದಂತಾಗಲಿಕ್ಕಾಗಿ ಆಗಿದೆ. ಅಲ್ಲಾಹನ ಆಜ್ಞೆ ಜಾರಿಗೆ ಬಂದೇ ತೀರುವುದು2.
Footnotes
  • [1] ಅಲ್ಲಾಹು ಮತ್ತು ಪ್ರವಾದಿಯವರು ಅನುಗ್ರಹಿಸಿದ ವ್ಯಕ್ತಿ ಎಂದಿರುವುದು ಝೈದ್‍ರವರ ಬಗ್ಗೆ. ಧರ್ಮ ಸ್ವೀಕೃತಿಗೆ ಸಮ್ಮತಿ ಹಾಗೂ ಇನ್ನಿತರ ಅನೇಕ ಅನುಗ್ರಹಗಳನ್ನು ಅವರಿಗೆ ಅಲ್ಲಾಹು ನೀಡಿದ್ದರೆ ಪುತ್ರನಂತೆ ಸಾಕಿದ್ದು ಹಾಗೂ ದಾಸ್ಯ ಮುಕ್ತಿಗೊಳಿಸಿದ್ದು ಪ್ರವಾದಿವರ್ಯ ರು ನೀಡಿದ್ದ ಅನುಗ್ರಹಗಳಾಗಿದ್ದುವು.
  • [2] ಧರ್ಮ ವಿರೋಧಿಗಳು ದುರ್ಬಲ ಕಪೋಲ ಕಲ್ಪಿತ ವರದಿಗಳ ಮೂಲಕ ಪ್ರವಾದಿವರ್ಯ ರ ವ್ಯಕ್ತಿತ್ವಕ್ಕೆ ಕಳಂಕ ಮಾಡಲು ಪ್ರಯತ್ನಿಸಿದ್ದಾರೆ. ಪಾಶ್ಚಾತ್ಯರು ಎತ್ತಿಕೊಂಡು ವಿಮರ್ಶಿಸುತ್ತಿರುವ ಈ ಅಸಂಬದ್ಧ ವರದಿಗಳು ಕೂಡ ಕೆಲವು ತಫ್ಸೀರಿನ ಗ್ರಂಥಗಳಲ್ಲಿ ಸ್ಥಳ ಹಿಡಿದಿವೆ. ಅವುಗಳಲ್ಲಿ ಝೈದರ ಪತ್ನಿ ಝೈನಬ್‍ರನ್ನು ಪ್ರವಾದಿವರ್ಯ ರು ಕಂಡಾಗ ಆಕೆಯಲ್ಲಿ ಅನುರಕ್ತರಾದ ಬಗ್ಗೆ ಪ್ರಸ್ತಾಪವಿದೆ. ಅಲ್ಲಾಮ ಅಬೂಬಕರ್ ಬಿನ್ ಅರಬಿ ಹೇಳಿದ ಪ್ರಕಾರ ಈ ವರದಿಗಳು ನಂಬಲರ್ಹವಲ್ಲ. ಸಂಪೂರ್ಣ ನಿರಾಧಾರವಾಗಿದೆ. ಈ ಸೂಕ್ತವು ಈ ಅಪವಾಧವನ್ನು ಸ್ಪಷ್ಟವಾಗಿ ಖಂಡಿಸುತ್ತದೆ. ``ಅಲ್ಲಾಹನು ಬಹಿರಂಗಪಡಿಸಿದ್ದನ್ನು ನೀವು ಬಚ್ಚಿಟ್ಟಿದ್ದಿರಿ'' ಎಂಬುದರ ತಾತ್ಪರ್ಯ ದತ್ತುಪುತ್ರನನ್ನು ನಿಜವಾದ ಪುತ್ರನೆಂದೇ ಭಾವಿಸಲಾಗುತ್ತಿದ್ದ ಅರೇಬಿಯಾದ ಪುರಾತನ ಸಂಪ್ರದಾಯವನ್ನು ಮುರಿಯುವುದು. ಪ್ರವಾದಿವರ್ಯರು ಝೈನಬ್‍ರನ್ನು ವರಿಸುವುದು. ಆದರೆ ಈ ಬಗ್ಗೆ ಅವರು ತಮ್ಮ ಸೊಸೆಯನ್ನೇ ವಿವಾಹವಾಗಿದ್ದಾರೆ ಎಂಬ ಜನರ ಆಕ್ಷೇಪಕ್ಕೆ ಹೆದರಿದ್ದರು. ಅತಿಯಾದ ಸಂಕೋಚ ಹಾಗೂ ಜನರ ನಾಲಗೆಯಿಂದ ಸುರಕ್ಷಿತ್ವವನ್ನು ಬಯಸಿ ತಮ್ಮ ಆಗ್ರಹವನ್ನು ಬಚ್ಚಿಟ್ಟುಕೊಂಡಿದ್ದರು. ಆದರೆ ಅಲ್ಲಾಹನು ಅವರನ್ನು ವರಿಸುವಂತೆ ಪ್ರವಾದಿವರ್ಯರಿಗೆ ಆದೇಶಿಸುವ ಮೂಲಕ ಅದನ್ನು ಬಹಿರಂಗಪಡಿಸಿದನು