Kannada Translation

Ayah by Ayah

Tags

Download Links

Kannada Translation translation for Surah Al-Ahzab — Ayah 51

33:51
۞ تُرۡجِي مَن تَشَآءُ مِنۡهُنَّ وَتُـٔۡوِيٓ إِلَيۡكَ مَن تَشَآءُۖ وَمَنِ ٱبۡتَغَيۡتَ مِمَّنۡ عَزَلۡتَ فَلَا جُنَاحَ عَلَيۡكَۚ ذَٰلِكَ أَدۡنَىٰٓ أَن تَقَرَّ أَعۡيُنُهُنَّ وَلَا يَحۡزَنَّ وَيَرۡضَيۡنَ بِمَآ ءَاتَيۡتَهُنَّ كُلُّهُنَّۚ وَٱللَّهُ يَعۡلَمُ مَا فِي قُلُوبِكُمۡۚ وَكَانَ ٱللَّهُ عَلِيمًا حَلِيمٗا ٥١
ನಿಮ್ಮ ಪತ್ನಿಯರ ಪೈಕಿ ನಿಮಗೆ ಇಷ್ಟವಿದ್ದವರನ್ನು ನಿಮಗೆ ಹಿಂದೆ ನಿಲ್ಲಿಸಲಿಕ್ಕೂ ನಿಮಗೆ ಇಷ್ಟ ಬಂದವರನ್ನು ಹತ್ತಿರಗೊಳಿಸಲಿಕ್ಕೂ ಬೇರೆ ನಿಲ್ಲಿಸಿದ ಬಳಿಕ ನಿಮಗೆ ಇಷ್ಟವಿದ್ದವರನ್ನು ನಿಮ್ಮ ಬಳಿಗೆ ವಾಪಾಸು ಕರೆಸಿಕೊಳ್ಳಲಿಕ್ಕೂ ನಿಮಗೆ ಅಧಿಕಾರವಿದೆ1. ನಿಮ್ಮ ಮೇಲೆ ಯಾವುದೇ ತಪ್ಪಿಲ್ಲ. ಅವರ ಕಣ್ಣುಗಳು ತಣಿದಿರಲು, ಅವರು ದುಃಖಿಸದಿರಲು ಮತ್ತು ನೀವು ಅವರಿಗೆ ಕೊಟ್ಟು ದರಲ್ಲಿ ಅವರೆಲ್ಲರೂ ತೃಪ್ತಿಪಡಲು ಅತ್ಯಂತ ಸೂಕ್ತ ದಾರಿಯಿದು. ನಿಮ್ಮ ಹೃದಯಗಳಲ್ಲಿ ಇರುವುದನ್ನು ಅಲ್ಲಾಹು ಅರಿಯುತ್ತಾನೆ. ಅಲ್ಲಾಹು ಸರ್ವಜ್ಞನೂ ಸಹನಶೀಲನೂ ಆಗಿರುತ್ತಾನೆ.
Footnotes
  • [1] ಇಬ್ನು ಅಬ್ಬಾಸ್‍ರವರ ವ್ಯಾಖ್ಯಾನ: ನಬಿಯವರೇ! ನಿಮ್ಮ ಪತ್ನಿಯರ ಪೈಕಿ ಬೇಕಾದವರನ್ನು ಉಳಿಸಿಕೊಳ್ಳುವ ಬೇಡವೆಂದರೆ ವಿಚ್ಛೇಧಿಸುವ ಅವಕಾಶ ನಿಮಗಿದೆ ಎಂದಾಗಿದೆ. ಇಮಾಮ್ ಮುಜಾಹಿದ್ ಹಾಗೂ ಇಮಾಮ್ ಳಹ್ಹಾಕ್‍ರವರ ವ್ಯಾಖ್ಯಾನ ಪ್ರಕಾರ ನಿಮ್ಮ ಪತ್ನಿಯರ ನಡುವೆ ಉದ್ದೇಶವಿದ್ದರೆ ಸಮಾನತೆಯನ್ನು ಪಾಲಿಸಬಹುದು, ಪಾಲಿಸದಿರಲೂ ಬಹುದು, ಕೆಲವರಿಗೆ ಕಡಿಮೆ ಸವಲತ್ತು ಕೊಡಬಹುದು, ಕೆಲವರಿಗೆ ಹೆಚ್ಚು ಕೊಡಬಹುದು ಎಂದಾಗಿ ರುತ್ತದೆ. ಬಹು ಪತ್ನಿಯರ ನಡುವೆ ಸಮಾನತೆ ಪಾಲಿಸಬೇಕು ಎಂಬ ನಿಯಮವನ್ನು ಅಲ್ಲಾಹನು ನಬಿಯವರಿಗೆ ಸಡಿಲಿಸಿ ವಿಶೇಷ ರಿಯಾಯಿತಿ ನೀಡಿರು ತ್ತಾನೆ ಎಂದು ಈ ವ್ಯಾಖ್ಯಾನದಿಂದ ತಿಳಿದುಬರುತ್ತದೆ. ಆದರೆ ಇದೊಂದು ಅನುಮತಿ ಮಾತ್ರವಾಗಿದ್ದು ನಬಿಯವರು ಅಸಮಾನತೆ ತೋರಿಲ್ಲ ಎನ್ನುವುದು ಬೇರೆ ವಿಷಯ. ಪ್ರವಾದಿಯವರಿಗೆ ಈ ಸ್ವಾತಂತ್ರ್ಯ ನೀಡಿದ್ದರಿಂದ ಪತ್ನಿಯರು ಸಹನೆಯೊಂದಿಗೆ ತೃಪ್ತರಾಗಬೇಕೇ ಹೊರತು ಹಕ್ಕುಗಳ ಬೇಡಿಕೆಯಿಟ್ಟು ಪೀಡಿಸಲು ಅಥವಾ ಆ ವಿಷಯದಲ್ಲಿ ತಕರಾರೆಬ್ಬಿಸಲು ದಾರಿಯಿರಲಿಲ್ಲ. ಪ್ರವಾದಿ ರ ಪ್ರವರ್ತಿಗಳೆಲ್ಲವೂ ಅಲ್ಲಾಹನ ಆದೇಶ ಪ್ರಕಾರವಾಗಿದ್ದುವು. ಇಬ್ನು ಜರೀರ್, ಇಬ್ನು ಕಸೀರ್ ಮುಂತಾದ ಪ್ರಧಾನ ವ್ಯಾಖ್ಯಾನಕಾರರು ಈ ಅಭಿಪ್ರಾಯವನ್ನು ಬಲಪಡಿಸಿದ್ದಾರೆ.