Kannada Translation

Ayah by Ayah

Tags

Download Links

Kannada Translation translation for Surah Al-Ahzab — Ayah 52

33:52
لَّا يَحِلُّ لَكَ ٱلنِّسَآءُ مِنۢ بَعۡدُ وَلَآ أَن تَبَدَّلَ بِهِنَّ مِنۡ أَزۡوَٰجٖ وَلَوۡ أَعۡجَبَكَ حُسۡنُهُنَّ إِلَّا مَا مَلَكَتۡ يَمِينُكَۗ وَكَانَ ٱللَّهُ عَلَىٰ كُلِّ شَيۡءٖ رَّقِيبٗا ٥٢
ಅವರ ನಂತರ1 ನಿಮಗೆ ಇತರ ಸ್ತ್ರೀಯರು ಧರ್ಮ ಸಮ್ಮತವಲ್ಲ. ಇವರಿಗೆ ಬದಲು ಇತರ ಪತ್ನಿಯರನ್ನು ಸ್ವೀಕರಿಸಿಕೊಳ್ಳುವುದು - ಅವರ ಸೌಂದರ್ಯವು ತಮ್ಮನ್ನು ಎಷ್ಟೇ ವಿಸ್ಮಯಗೊಳಿಸಿದ್ದರೂ - ಸಮ್ಮತವಲ್ಲ. ಆದರೆ ತಾವು ಅಧೀನಗೊಳಿಸಿದವರ (ದಾಸಿಯರ) ಹೊರತು. ಅಲ್ಲಾಹು ಸಕಲ ವಸ್ತುಗಳ ಮೇಲ್ವಿಚಾರಕನಾಗಿರುತ್ತಾನೆ.
Footnotes
  • [1] ಅವರ ನಂತರ ಎಂದರೆ ಆ ಒಂಭತ್ತು ಪತ್ನಿಯರ ನಂತರ ಎಂದಾಗಿದೆ. ಈಗ ಅಸ್ತಿತ್ವದಲ್ಲಿರುವ ಪತ್ನಿಯರ ಹೊರತಾಗಿ ಇನ್ಯಾರನ್ನೂ ವರಿಸುವ ಮೂಲಕ ಸಂಖ್ಯೆಯನ್ನು ಹೆಚ್ಚಿಸಬಾರದು. ಯಾರನ್ನಾದರೂ ವಿಚ್ಛೇದಿಸಿ ಅವರ ಸ್ಥಾನದಲ್ಲಿ ಬೇರೆಯವರನ್ನು ತರುವುದು ಸಮ್ಮತವಲ್ಲ. ವಿವಾಹ ನಿಷಿದ್ಧರಾದವರು (ಮಹ್‍ರಂ) ಅಲ್ಲದ ಎಲ್ಲಾ ಸ್ತ್ರೀಯರನ್ನು ವಿವಾಹ ಮಾಡುವುದು ವಫಾತಿಗೆ ಮುನ್ನ ಅವರಿಗೆ ಅಲ್ಲಾಹು ಅನುವದನೀಯಗೊಳಿಸಿಕೊಟ್ಟಿರುವನು ಎಂದು ಉಮ್ಮುಸಲಮ ಹೇಳಿರುತ್ತಾರೆ. (ಇಬ್ನು ಅಬೀ ಹಾತಿಮ್) ಇನ್ನೊಂದು ಅಭಿಪ್ರಾಯ ಪ್ರಕಾರ ಅವರ ನಂತರ ಎಂದರೆ 50ನೇ ಸೂಕ್ತದಲ್ಲಿ ಹೇಳಲಾದ ಸ್ತ್ರೀಯರ ನಂತರ ಎಂದಾಗಿದೆ. ಆದರೆ ಯಾವ ಅವಸ್ಥೆಯಲ್ಲೂ ಗುಲಾಮ ಸ್ತ್ರೀಯರನ್ನು ಇಷ್ಟ ಪ್ರಕಾರ ಅನುಭೋಗಿಸುವ ಅನುಮತಿ ಇದೆ.