Kannada Translation

Ayah by Ayah

Tags

Download Links

Kannada Translation translation for Surah Al-Ahzab — Ayah 56

33:56
إِنَّ ٱللَّهَ وَمَلَٰٓئِكَتَهُۥ يُصَلُّونَ عَلَى ٱلنَّبِيِّۚ يَٰٓأَيُّهَا ٱلَّذِينَ ءَامَنُواْ صَلُّواْ عَلَيۡهِ وَسَلِّمُواْ تَسۡلِيمًا ٥٦
ನಿಶ್ಚಯವಾಗಿಯೂ ಅಲ್ಲಾಹು ಮತ್ತು ಅವನ ಮಲಕ್‍ಗಳು ಪ್ರವಾದಿಯವರಿಗೆ ಸ್ವಲಾತ್ ನಿರ್ವಹಿಸುತ್ತಾರೆ. ಸತ್ಯವಿಶ್ವಾಸಿಗಳೇ, ನೀವೂ ಅವರ ಮೇಲೆ ಸ್ವಲಾತ್ ಮತ್ತು ಸಲಾಮ್ ಸಲ್ಲಿಸಿರಿ1.
Footnotes
  • [1] ಅರ್ಥಾತ್ ಅಲ್ಲಾಹನು ಪ್ರವಾದಿವರ್ಯರಿಗೆ ಕೃಪೆ ನೀಡುತ್ತಾನೆ, ಸ್ಥಾನ ಮಾನವನ್ನು ಏರಿಸುತ್ತಾನೆ, ದೇವಚರರು ಪ್ರವಾದಿವರ್ಯರಿಗಾಗಿ ಪ್ರಾರ್ಥಿಸುತ್ತಾರೆ. ಅವರಿಗಾಗಿ ಕ್ಷಮಾಪಣೆ ಬೇಡುತ್ತಾರೆ ಮತ್ತು ಉನ್ನತ ಪದವಿ ದಯಪಾಲಿಸುವಂತೆ ಕೋರುತ್ತಾರೆ. ಖುರ್ತುಬಿ ಹೇಳುತ್ತಾರೆ ``ಅಲ್ಲಾಹನಿಂದ ಸಲಾತ್ ಎಂದರೆ ಆತನ ಅನುಗ್ರಹ ಹಾಗೂ ಸಂಪ್ರೀತಿಯಾಗಿದೆ. ದೇವಚರರಿಂದ ಸಲಾತ್ ಎಂದರೆ ಪ್ರಾರ್ಥನೆ ಹಾಗೂ ಮುಕ್ತಿಗಾಗಿ ಬೇಡಿಕೆಯಾಗಿದೆ. ಸಮುದಾಯದಿಂದ ಸಲಾತ್ ಎಂದರೆ ಪ್ರಾರ್ಥನೆ ಹಾಗೂ ಅವರನ್ನು ಗೌರವಿಸುವುದು. (ಖುರ್ತುಬಿ 14/232) ಅಲ್ಲಾಹು ಸಲಾತ್ ಹೇಳುವುದೆಂದರೆ ಮಲಕ್‍ಗಳ ಸಮಕ್ಷಮದಲ್ಲಿ ನಬಿಯವರ ಪ್ರಶಂಸೆ ಮಾಡುವುದು, ಮಲಕ್‍ಗಳ ಸಲಾತ್ ಅಂದರೆ ಅವರು ನಬಿಯವರಿಗಾಗಿ ಪ್ರಾರ್ಥಿಸುವುದು ಎಂದು ಇಮಾಮ್ ಅಬುಲ್ ಆಲಿಯಾ ಪ್ರಸ್ತಾಪಿಸಿರುವುದಾಗಿ ಇಮಾಮ್ ಬುಖಾರಿ (14/483) ಉಲ್ಲೇಖಿಸಿರುತ್ತಾರೆ. ಇಬ್ನು ಕಸೀರ್ ಹೇಳುತ್ತಾರೆ; ಪ್ರವಾದಿ ಮುಹಮ್ಮದ್ ರಿಗೆ ಅಲ್ಲಾಹನ ಬಳಿಯಿರುವ ಮಹತ್ತರ ಸ್ಥಾನವನ್ನು ಜನರಿಗೆ ಈ ಮೂಲಕ ಸಾರಲಾಗಿದೆ. ಮಲಕ್‍ಗಳ ಲೋಕದಲ್ಲಿ ಅಲ್ಲಾಹನು ಹಾಗೂ ಮಲಕ್‍ಗಳು ನಬಿಯವರನ್ನು ಪ್ರಶಂಶಿಸುತ್ತಿದ್ದಾರೆ. ಎಂದು ತಿಳಿಸಿದ ನಂತರ ಭೂಮುಖದ ಜನರಿಗೆ ಅದರ ಆದೇಶ ಕೊಡಲಾಗಿದೆ. ಆಕಾಶಲೋಕ ಹಾಗೂ ಭೂಲೋಕದ ಸರ್ವಜನರೂ ನಬಿಯವರ ಕೀರ್ತನೆಯಲ್ಲಿ ಒಟ್ಟು ಸೇರಬೇಕೆಂಬುದೇ ಇದರ ಉದ್ದೇಶ. (ಇಬ್ನು ಕಸೀರ್ 3/506)