Kannada Translation

Ayah by Ayah

Tags

Download Links

Kannada Translation translation for Surah Al-Ahzab — Ayah 8

33:8
لِّيَسۡـَٔلَ ٱلصَّٰدِقِينَ عَن صِدۡقِهِمۡۚ وَأَعَدَّ لِلۡكَٰفِرِينَ عَذَابًا أَلِيمٗا ٨
ಇದು, ಸತ್ಯಸಂಧರಿಂದ ಅವರ ಸತ್ಯಸಂಧತೆಯ ಕುರಿತು ಅಲ್ಲಾಹನು ಪ್ರಶ್ನಿಸಲಿಕ್ಕಾಗಿ ಇದೆ1. ಸತ್ಯನಿಷೇಧಿಗಳಿಗೆ ಅವನು ವೇದನಾಯುಕ್ತ ಶಿಕ್ಷೆಯನ್ನು ಸಿದ್ಧಪಡಿಸಿದ್ದಾನೆ.
Footnotes
  • [1] ಪ್ರವಾದಿಗಳ ಸತ್ಯನಿಷ್ಟೆಯ ಬಗ್ಗೆ ಸ್ಪಷ್ಟ ಗೊತ್ತಿದ್ದೂ ಕೂಡಾ ಅಲ್ಲಾಹು ಅವರಲ್ಲಿ ಪ್ರಶ್ನಿಸುವುದರ ಯುಕ್ತಿಯೇನೆಂದರೆ ಸತ್ಯನಿಷೇಧಿಗಳನ್ನು ನಿರುತ್ತರಗೊಳಿಸುವುದು ಹಾಗೂ ಅವಮಾನಿಸುವುದಾಗಿದೆ. (ಹಾಶಿಯ ಸಾವಿ 3/269) ಪ್ರವಾದಿಗಳೇ ವಿಚಾರಣೆಗೊಳಗಾಗುವುದಾದರೆ ಇತರರ ಪಾಡೇನು? ಸತ್ಯ ನಿಷೇಧಿಗಳಿಗೆ ಭೀತಿ ಹುಟ್ಟಿಸುವುದು ಪ್ರಶ್ನೆಯ ಉದ್ದೇಶ. ಅಲ್ಲಾಹನು ಈಸಾ ನಬಿಯವರಲ್ಲಿ `ನನ್ನನ್ನು ಮತ್ತು ನನ್ನ ತಾಯನ್ನು ಆರಾಧಿಸಿರಿ ಎಂದು ನೀವು ಹೇಳಿರು ವಿರಾ? ಎಂದು ಪ್ರಶ್ನಿಸಲಿರುವನು ಎಂದು ಅಲ್ಲಾಹು (ಮಾಇದಾ 116) ಹೇಳಿರುತ್ತಾನೆ. (ತಫ್ಸೀರ್ ಖುರ್ತುಬಿ 14/128)