Kannada Translation

Ayah by Ayah

Tags

Download Links

Kannada Translation translation for Surah Saba — Ayah 20

34:20
وَلَقَدۡ صَدَّقَ عَلَيۡهِمۡ إِبۡلِيسُ ظَنَّهُۥ فَٱتَّبَعُوهُ إِلَّا فَرِيقٗا مِّنَ ٱلۡمُؤۡمِنِينَ ٢٠
ಅವರ ವಿಷಯದಲ್ಲಿ ಇಬ್‍ಲೀಸನು ತನ್ನ ಗುಮಾನಿಯನ್ನು ನಿಜಗೊಳಿಸಿದನು. ಸತ್ಯ ವಿಶ್ವಾಸಿಗಳಾಗಿದ್ದ ಒಂದು ಗುಂಪಿನ ಹೊರತು ಅವರೆಲ್ಲರೂ ಅವನನ್ನೇ ಅನುಸರಿಸಿದರು1.
Footnotes
  • [1] ಇಮಾಮ್ ಹಸನುಲ್ ಬಸ್ವರೀ ಹೇಳುತ್ತಾರೆ. ಆದಮ್, ಹವ್ವಾರನ್ನು ಸ್ವರ್ಗದಿಂದ ಭೂಮಿಗೆ ಕಳಿಸಿದಾಗ ಇಬ್‍ಲೀಸನು ಬಹಳ ಸಂತೋಷದಿಂದ ಭೂಮಿಗೆ ಬಂದು ಹೇಳಿದನು. ‘ಮಾತಾಪಿತರನ್ನು ಮೋಸಗೊಳಿಸಲು ನನಗೆ ಸಾಧ್ಯವಾಯಿತು. ಇನ್ನು ಇವರ ಮಕ್ಕಳನ್ನು ಮೋಸ ಮಾಡುವುದು ನನಗೆ ಬಹಳ ಸುಲಭ!’ ಮನುಷ್ಯರ ಬಗ್ಗೆ ಇಬ್‍ಲೀಸನ ಧೋರಣೆ ಇದಾಗಿತ್ತು. (ತಫ್ಸೀರ್ ಇಬ್ನು ಕಸೀರ್ 3/535) ಆದಮ್, ಹವ್ವಾರು ಅವನ ಪಿತೂರಿಗೆ ಬಲಿಯಾದುದೇ ಅವನ ಈ ಧೋರಣೆಗೆ ಕಾರಣವೆಂದು ವ್ಯಾಖ್ಯಾನಕಾರರು ಉಲ್ಲೇಖಿಸಿದ್ದಾರೆ. ಆದ್ದರಿಂದಲೇ ಅವನ ಧೋರಣೆ ನಿಜವಾಯಿತು ಎನ್ನಲಾಗಿದೆ. (ತಫ್ಸೀರ್ ಖುರ್ತುಬಿ 14/292)