Kannada Translation

Ayah by Ayah

Tags

Download Links

Kannada Translation translation for Surah Saba — Ayah 21

34:21
وَمَا كَانَ لَهُۥ عَلَيۡهِم مِّن سُلۡطَٰنٍ إِلَّا لِنَعۡلَمَ مَن يُؤۡمِنُ بِٱلۡأٓخِرَةِ مِمَّنۡ هُوَ مِنۡهَا فِي شَكّٖۗ وَرَبُّكَ عَلَىٰ كُلِّ شَيۡءٍ حَفِيظٞ ٢١
ಇಬ್‍ಲೀಸನಿಗೆ ಅವರ ಮೇಲೇನೂ ಅಧಿಕಾರ ವಿರಲಿಲ್ಲ1. ಪರಲೋಕದ ಬಗ್ಗೆ ಸಂಶಯದಲ್ಲಿ ಬಿದ್ದವರ ಕೂಟದಿಂದ ಅದರಲ್ಲಿ ನಂಬುವವರನ್ನು ನಾವು ಪ್ರತ್ಯಕ್ಷವಾಗಿ ಬೇರ್ಪಡಿಸಿ ತಿಳಿಯಲಿಕ್ಕಾಗಿ2 ಮಾತ್ರವಿದು. ನಿನ್ನ ಪ್ರಭು ಎಲ್ಲ ವಸ್ತುವಿನ ಮೇಲೆ ಮೇಲ್ನೋಟವುಳ್ಳವನು.
Footnotes
  • [1] ಇಮಾಮ್ ಹಸನುಲ್ ಬಸ್ವರಿ ಹೇಳುತ್ತಾರೆ; ಇಬ್‍ಲೀಸನು ಮನುಷ್ಯರಿಗೆ ಬೆತ್ತ ಹಿಡಿದು ಹೊಡೆಯುವುದಿಲ್ಲ. ಯಾವ ಕೆಡುಕಿಗೂ ಬಲಾತ್ಕಾರ ಮಾಡು ವುದಿಲ್ಲ. ಅವನು ಜನರಿಗೆ ಕೆಲವನ್ನು ಚಂದಗಾಣಿಸಿ ತೋರಿಸುತ್ತಾನೆ. ಹಾಗೂ ಅದರತ್ತ ಆಸೆ ಹುಟ್ಟಿಸುತ್ತಾನೆ. ಮನುಷ್ಯನು ಅದಕ್ಕೆ ಬಲಿಯಾಗುತ್ತಾನೆ. (ತಫ್ಸೀರ್ ಇಬ್ನು ಕಸೀರ್ 3/9535, ಅಲ್-ಜಾಮಿಉ ಲಿಅಹ್ಕಾಮಿಲ್ ಖುರ್‍ಆನ್ 14/293)
  • [2] ನಾವು ತಿಳಿಯಲು (ಲಿನಅïಲಮ) ಎಂಬುದರ ಅರ್ಥವು ನನ್ನ ಪೂರ್ವ ಅರಿವನ್ನು ಉಳಿದವರಿಗೆ ಪ್ರಕಟಗೊಳಿಸಲು ಎಂದಾಗಿದೆ.