Kannada Translation

Ayah by Ayah

Tags

Download Links

Kannada Translation translation for Surah Saba — Ayah 28

34:28
وَمَآ أَرۡسَلۡنَٰكَ إِلَّا كَآفَّةٗ لِّلنَّاسِ بَشِيرٗا وَنَذِيرٗا وَلَٰكِنَّ أَكۡثَرَ ٱلنَّاسِ لَا يَعۡلَمُونَ ٢٨
(ಪೈಗಂಬರರೇ) ನಾವು ನಿಮ್ಮನ್ನು ಸಮಗ್ರ ಮಾನವರಿಗಾಗಿ ಸುವಾರ್ತೆ ಕೊಡುವವರಾಗಿಯೂ ಎಚ್ಚರಿಕೆ ನೀಡುವವರಾಗಿಯೂ ಕಳುಹಿಸಿರುತ್ತೇವೆ1. ಆದರೆ ಹೆಚ್ಚಿನವರು (ಈ ವಾಸ್ತವಿಕತೆಯನ್ನು) ಅರಿಯುವುದಿಲ್ಲ.
Footnotes
  • [1] ಪ್ರವಾದಿವರ್ಯ ರು ಸಮಸ್ತ ಮಾನವ ವರ್ಗಕ್ಕೆ ನಿಯುಕ್ತರಾದವರು ಎಂದು ಈ ಆಯತ್‍ನಲ್ಲಿ ಅಲ್ಲಾಹು ವ್ಯಕ್ತಪಡಿಸುತ್ತಾನೆ. `ಮನುಷ್ಯರಿಗೆ’ ಎಂಬ ಪದ ಅದನ್ನು ಸೂಚಿಸುತ್ತದೆ. ಧರ್ಮನಿಷ್ಠೆಗೆ ಆದೇಶ ನೀಡಲ್ಪಟ್ಟ ಸರ್ವಸೃಷ್ಟಿಗಳಿಗೂ ನಿಯುಕ್ತರಾದವರು ಎಂದಾಗಿದೆ ಇಬ್ನುಕಸೀರ್‍ರವರ ವ್ಯಾಖ್ಯೆ (ತಫ್ಸೀರ್ 3/538)