Kannada Translation

Ayah by Ayah

Tags

Download Links

Kannada Translation translation for Surah Saba — Ayah 34

34:34
وَمَآ أَرۡسَلۡنَا فِي قَرۡيَةٖ مِّن نَّذِيرٍ إِلَّا قَالَ مُتۡرَفُوهَآ إِنَّا بِمَآ أُرۡسِلۡتُم بِهِۦ كَٰفِرُونَ ٣٤
ನಾವು ಯಾವುದೇ ನಾಡಿಗೆ ಎಚ್ಚರಿಕೆ ನೀಡುವ ವನನ್ನು (ಪ್ರವಾದಿಯನ್ನು) ಕಳುಹಿಸಿದಾಗಲೆಲ್ಲಾ ಆ ನಾಡಿನ ಸುಖಲೋಲುಪರು - “ನೀವು ತಂದಿರುವ ಸಂದೇಶವನ್ನು ಖಂಡಿತ ನಾವು ನಿಷೇಧಿಸುತ್ತೇವೆ” ಎಂದು ಹೇಳದೆ ಇರಲಿಲ್ಲ1.
Footnotes
  • [1] ಎಲ್ಲೆಲ್ಲ ಪ್ರವಾದಿಗಳು ಬಂದಿದ್ದಾರೋ ಅಲ್ಲೆಲ್ಲ ಸುಖ ಲೋಲುಪರು ಪ್ರವಾದಿಗಳನ್ನು ದಿಕ್ಕರಿಸುತ್ತಿರುವುದು ಹಿಂದಿನಿಂದಲೇ ಬಂದ ರೂಢಿ. ಮುತ್‍ರಫೂನ್ (ಐಷಾರಾಮಿಗಳು) ಎಂಬುದರಿಂದ ಇಲ್ಲಿ ಉದ್ದೇಶವಿಟ್ಟಿರುವುದು ಅಲ್ಲಿನ ದುಷ್ಕರ್ಮಿಗಳ ಮುಂದಾಳುಗಳಾದ ಧಿಕ್ಕಾರಿಗಳನ್ನಾಗಿದೆ ಎಂದು ಇಮಾಮ್ ಖತಾದ ಪ್ರಸ್ತಾಪಿಸಿದ್ದಾರೆ. ಪ್ರವಾದಿಗಳನ್ನು ಧಿಕ್ಕರಿಸುವುದರಲ್ಲಿ ಐಷಾರಾಮಿಗಳು ಮುಂಚೂಣಿಯಲ್ಲಿರುತ್ತಾರೆಂದು ಇಲ್ಲಿ ಸ್ಪಷ್ಟಪಡಿಸಲಾಗಿದೆ. ಲೌಕಿಕ ಸುಖದ ಸುಪ್ಪತ್ತಿಗೆಯಲ್ಲಿ ನೆಲೆಗೊಂಡಿರುವ ಅವರ ಮನಸ್ಸಲ್ಲಿ ಅದೇ ಯೋಚನೆ ತುಂಬಿರುತ್ತದೆ. ಬಡವರು ಹಾಗಲ್ಲ. ಅವರ ಅಂತಃರಂಗವು ಇದರಿಂದ ಮುಕ್ತವಾಗಿರುವುದರಿಂದ ಸತ್ಯದ ಸ್ವೀಕೃತಿಗೆ ಪಕ್ವಗೊಂಡಿರುತ್ತದೆ. ಪ್ರವಾದಿಗಳನ್ನು ಅನುಸರಿಸಿದವರಲ್ಲಿ ಅಧಿಕವೂ ಬಡವರೇ ಆಗಿದ್ದುದು ಇದೇ ಕಾರಣದಿಂದಾಗಿದೆ. (ಅಲ್-ಬಹ್ರುಲ್ ಮುಹೀತ್ 7/285 ಅಲ್-ಜಾಮಿಉ ಲಿಅಹ್ಕಾಮಿಲ್ ಖುರ್‍ಆನ್ 14/305)