Kannada Translation

Ayah by Ayah

Tags

Download Links

Kannada Translation translation for Surah Saba — Ayah 39

34:39
قُلۡ إِنَّ رَبِّي يَبۡسُطُ ٱلرِّزۡقَ لِمَن يَشَآءُ مِنۡ عِبَادِهِۦ وَيَقۡدِرُ لَهُۥۚ وَمَآ أَنفَقۡتُم مِّن شَيۡءٖ فَهُوَ يُخۡلِفُهُۥۖ وَهُوَ خَيۡرُ ٱلرَّٰزِقِينَ ٣٩
ಹೇಳಿರಿ, “ನನ್ನ ಪ್ರಭು ತನ್ನ ದಾಸರಲ್ಲಿ ತಾನಿಚ್ಛಿಸಿ ದವರಿಗೆ ಜೀವನಾಧಾರವನ್ನು ವಿಶಾಲಗೊಳಿಸುತ್ತಾನೆ. ತಾನಿಚ್ಚಿಸಿದವರಿಗೆ ಪರಿಮಿತಗೊಳಿಸುತ್ತಾನೆ. ನೀವು (ದೇವ ಮಾರ್ಗದಲ್ಲಿ) ಏನನ್ನು ಖರ್ಚು ಮಾಡಿದರೂ ಅದಕ್ಕೆ ಬದಲಾಗಿ ಅವನು ನಿಮಗೆ ಇನ್ನಷ್ಟು ಕೊಡುತ್ತಾನೆ. ಅವನು ಜೀವನಾಧಾರ ನೀಡುವವರಲ್ಲೇ ಅತ್ಯುತ್ತಮನು”1.
Footnotes
  • [1] ದಿಟ ನಂಬಿಕೆ, ಸುಕೃತಗಳು ಮಾನವನನ್ನು ದೇವನತ್ತ ನಿಕಟಗೊಳಿಸುವುದಲ್ಲದೆ ಸುಕೃತಗಳು ದ್ವಿಗುಣಗೊಳ್ಳಲು ನಿಮಿತ್ತವಾಗುತ್ತವೆ. ಅದೇ ವೇಳೆ ಇಹದಲ್ಲಿ ವಿಶಾಲತೆ ಪ್ರಾಪ್ತಿಯು ಪಾರತ್ರಿಕ ಸೌಭಾಗ್ಯಕ್ಕೆ ವಿರೋಧವಾಗುವುದಿಲ್ಲ ಎಂಬ ಅಂಶವನ್ನು ಇಲ್ಲಿ ಒತ್ತಿ ಹೇಳಲಾಗಿದೆ. ಸಚ್ಚರಿತರಾದ ಕೆಲವರಿಗೆ ಪಾರತ್ರಿಕ ಶ್ರೇಯಸ್ಸು ನಿಶ್ಚಿತವಾಗುವುದರ ಜೊತೆಗೇ ಲೌಕಿಕ ವಿಶಾಲತೆಯೂ ಪ್ರಾಪ್ತವಾಗುವುದಿದೆ. ಅದು ಅಲ್ಲಾಹುವಿನ ವಾಗ್ದಾನದ ಮೇರೆಗಾಗಿದೆ. (ಹಾಶಿಯ ಶೈಖ್ ರhೂದ 3/93)