Kannada Translation

Ayah by Ayah

Tags

Download Links

Kannada Translation translation for Surah Saba — Ayah 50

34:50
قُلۡ إِن ضَلَلۡتُ فَإِنَّمَآ أَضِلُّ عَلَىٰ نَفۡسِيۖ وَإِنِ ٱهۡتَدَيۡتُ فَبِمَا يُوحِيٓ إِلَيَّ رَبِّيٓۚ إِنَّهُۥ سَمِيعٞ قَرِيبٞ ٥٠
ಹೇಳಿರಿ; “ನಾನು ದಾರಿ ತಪ್ಪಿದರೆ ನನ್ನ ಮೇಲೆ ಯೇ ನಾನು ದಾರಿ ತಪ್ಪಿದೆ. ನಾನು ನೇರ ದಾರಿ ಹಿಡಿದರೆ, ಅದು ನನ್ನ ಪ್ರಭು ನನ್ನ ಮೇಲೆ ಅವತೀರ್ಣಗೊಳಿಸುವ ದಿವ್ಯವಾಣಿಯ ಪ್ರಕಾರವಿದೆ1. ಅವನು ಸರ್ವಶ್ರುತನೂ ಅತ್ಯಂತ ನಿಕಟನೂ ಆಗಿರುತ್ತಾನೆ”2.
Footnotes
  • [1] ಅರ್ಥಾತ್ ಒಳಿತುಗಳೆಲ್ಲವೂ ಅಲ್ಲಾಹನ ಕಡೆಯಿಂದಾಗಿದ್ದು ಅವು ಅವನು ರವಾನಿಸಿದ ದಿವ್ಯ ಸಂದೇಶಗಳಲ್ಲಿ ಅಡಕವಾಗಿವೆ. ಸತ್ಪಥವನ್ನು ಅದರಲ್ಲಿ ವಿವರಿಸಲಾಗಿದೆ. ಯಾವನಾದರೂ ವಾಮಮಾರ್ಗ ತುಳಿಯುವುದಾದರೆ ಅದಕ್ಕೆ ಅವನೇ ಹೊಣೆ. (ತಫ್ಸೀರುಲ್ ಖುರ್‍ಆನ್ 3/544)
  • [2] ಅರ್ಥಾತ್: ಸಧರ್ಮಿಯಾಗಿರಲಿ, ಅಧರ್ಮಿಯಾಗಿರಲಿ ಎಲ್ಲರ ನಡೆನುಡಿ - ಎಷ್ಟೇ ಗುಟ್ಟಾಗಿದ್ದರೂ - ಅಲ್ಲಾಹು ಅರಿಯುತ್ತಾನೆ. (ತಫ್ಸೀರ್ ಅಬುಸ್ಸುಊದ್ 4/235)