Kannada Translation

Ayah by Ayah

Tags

Download Links

Kannada Translation translation for Surah Fatir — Ayah 14

35:14
إِن تَدۡعُوهُمۡ لَا يَسۡمَعُواْ دُعَآءَكُمۡ وَلَوۡ سَمِعُواْ مَا ٱسۡتَجَابُواْ لَكُمۡۖ وَيَوۡمَ ٱلۡقِيَٰمَةِ يَكۡفُرُونَ بِشِرۡكِكُمۡۚ وَلَا يُنَبِّئُكَ مِثۡلُ خَبِيرٖ ١٤
ನೀವು ಅವರನ್ನು ಕರೆದರೆ ಅವರು ನಿಮ್ಮ ಕರೆಯನ್ನು ಕೇಳಲಾರರು. ಕೇಳಿದರೆಂದು ಸಂಕಲ್ಪಿಸಿದರೂ ಅವರು ಉತ್ತರವನ್ನು ನಿಮಗೆ ಕೊಡಲಾರರು1. ಪುನರುತ್ಥಾನ ದಿನ ನಿಮ್ಮ ಪಾಲುಗಾರಿಕೆಯನ್ನು ಅವರು ನಿರಾಕರಿಸುವರು2. (ಓ ಮಾನವ) ಸೂಕ್ಷ್ಮವಾಗಿ ತಿಳಿಯುವ ಅಲ್ಲಾಹ ನಂತೆ ಬೇರೊಬ್ಬನು ನಿಮಗೆ ತಿಳಿಸಿಕೊಡಲಿಕ್ಕಿಲ್ಲ.
Footnotes
  • [1] ಆ ಪ್ರತಿಮೆಗಳು ಕೇಳುವರೆಂದು ಸಂಕಲ್ಪಿಸಿದರೂ ಕೂಡ ಅವರಿಗೆ ವಾಕ್‍ಸಾಮಥ್ರ್ಯವನ್ನು ಕೊಡಲಾಗದ ನಿಮಿತ್ತ ಅವರು ಉತ್ತರ ಕೊಡಲಾರರು. ಕೇಳಿದ ಮಾತ್ರಕ್ಕೆ ಮಾತಾಡಲು ಸಾಧ್ಯವಾಗಬೇಕೆಂದಿಲ್ಲ. ಆದ್ದರಿಂದ ಇಲ್ಲಿನ ಉತ್ತರ ಎಂಬುದರ ಉದ್ದೇಶ ಮಾತಿನ ಮೂಲಕವಿರುವ ಉತ್ತರವಾಗಿದೆ. ಇನ್ನು ಪ್ರವೃತ್ತಿ ಮೂಲಕವಿರುವ ಉತ್ತರ ಎಂದೂ ಉದ್ದೇಶಿಸಬಹುದು. ಆಗ ಇದರ ಅರ್ಥ. ಅವರು ಕೇಳಿದರೂ ಕೂಡಾ ಅವರಿಗೆ ಕ್ರಿಯಾಶಕ್ತಿ ಇಲ್ಲದ ನಿಮಿತ್ತ ಅವರು ನಿಮಗೆ ಉಪಕಾರ ಮಾಡಲಾರರು ಎಂದಾಗುತ್ತದೆ. ಇವಿಷ್ಟು ಕರೆಯಲ್ಪಡುವವರು ವಿಗ್ರಹಗಳು ಎಂಬ ವ್ಯಾಖ್ಯಾನ ಪ್ರಕಾರವಾಗಿದೆ. ಇನ್ನು ಕರೆಯಲ್ಪಡುವವರು ಮಲಕ್‍ಗಳಂಥ ಅಲ್ಲಾಹನ ನಿಕಟ ದಾಸರಾಗಿದ್ದರೆ, ಅವರು ಇವರ ಕರೆಗೆ ಮಾತಿನ ಮೂಲಕ ಉತ್ತರ ಕೊಡದಿರಲು ಕಾರಣ ಅವರು ‘ಇಲಾಹ್’ಗಳು ಎಂಬ ತಪ್ಪು ನಂಬಿಕೆಯಿಂದ ಅವರನ್ನು ಕರೆದ ನಿಮಿತ್ತವಾಗಿದೆ. ಉತ್ತರ ಕೊಡುವುದಾದರೆ ಅವರು ಇಲಾಹ್‍ಗಳೆಂಬ ತಪ್ಪು ಕಲ್ಪನೆಯು ಸ್ಥಿರೀಕರಣಗೊಳ್ಳಲು ಸಾಧ್ಯವಿದೆ. ಪ್ರವೃತ್ತಿಯ ಮೂಲಕ ಉತ್ತರ ಕೊಡದಿರಲು ಇದುವೇ ಕಾರಣವಿರಬಹುದು. (ರೂಹುಲ್ ಮಆನಿ 16/374)
  • [2] ಅರ್ಥಾತ್ ನೀವು ಅವರಿಗೆ ಆರಾಧಿಸಿದ್ದೀರಿ ಎಂಬುದನ್ನು ಅವರು ನಿರಾಕರಿಸುವರು. ಮತ್ತು ನಿಮ್ಮಿಂದ ಅವರು ಮುಕ್ತರಾಗುವರು. ಮಲಕ್‍ಗಳು, ಜಿನ್ನ್, ಅನ್ಬಿಯಾಗಳು, ಶೈತಾನ್‍ಗಳು ಮುಂತಾದ ಬುದ್ಧಿಯಿರುವ ಆರಾಧ್ಯರ ಕಡೆಗೂ ಇದನ್ನು ಅನ್ವಯಗೊಳಿಸಬಹುದು. ಆಗ ಇದರ ಅರ್ಥ. ‘ನೀವು ಮಾಡಿದ ಪ್ರವೃತ್ತಿಯು ಸತ್ಯವಾಗಿರುವುದನ್ನು ಅವರಿಗೆ ಆರಾಧಿಸುವಂತೆ ಅವರು ನಿಮಗೆ ಆದೇಶಿಸಿದ್ದಾರೆ, ಎಂಬುದನ್ನು ಅವರು ನಿರಾಕರಿಸುವರು’ ಎಂದಾ ಗುತ್ತದೆ. ಇದನ್ನು ವಿಗ್ರಹಗಳಿಗೂ ಅನ್ವಯಗೊಳಿಸಬಹುದು. ಅರ್ಥಾತ್ ಅಲ್ಲಾಹನು ಆ ವಿಗ್ರಹಗಳನ್ನು ಜೀವಂತಗೊಳಿಸಿದ ಬಳಿಕ ಅವು ಆರಾಧನೆಗೆ ಯೋಗ್ಯವಲ್ಲ ಎಂಬ ವಿಷಯವನ್ನು ಆ ವಿಗ್ರಹಗಳು ಸಾರಿ ಹೇಳುವವು. (ಕುರ್ತುಬಿ 14/337)