Kannada Translation

Ayah by Ayah

Tags

Download Links

Kannada Translation translation for Surah Fatir — Ayah 13

35:13
يُولِجُ ٱلَّيۡلَ فِي ٱلنَّهَارِ وَيُولِجُ ٱلنَّهَارَ فِي ٱلَّيۡلِ وَسَخَّرَ ٱلشَّمۡسَ وَٱلۡقَمَرَۖ كُلّٞ يَجۡرِي لِأَجَلٖ مُّسَمّٗىۚ ذَٰلِكُمُ ٱللَّهُ رَبُّكُمۡ لَهُ ٱلۡمُلۡكُۚ وَٱلَّذِينَ تَدۡعُونَ مِن دُونِهِۦ مَا يَمۡلِكُونَ مِن قِطۡمِيرٍ ١٣
ಅವನು ರಾತ್ರಿಯನ್ನು ಹಗಲಿಗೂ ಹಗಲನ್ನು ರಾತ್ರಿಗೂ ದಾಟಿಸುತ್ತಾನೆ. ಸೂರ್ಯ ಚಂದ್ರರನ್ನು ಅವನು ನಿಯಂತ್ರಿಸಿದನು. ಎಲ್ಲ ಒಂದು ನಿಶ್ಚಿತ ಅವಧಿಗೆ ನಡೆಯುತ್ತ ಸಾಗುತ್ತಿದೆ1. ಈ ಅಲ್ಲಾಹ ನೇ ನಿಮ್ಮ ಪ್ರಭು. ಪ್ರಭುತ್ವವು ಅವನದ್ದು. ಅವ ನನ್ನು ಬಿಟ್ಟು ನೀವು ಆರಾಧಿಸುವವರು ಒಂದು ಈತ ಬೀಜದ ಸಿಪ್ಪೆಯ ಒಡೆಯರೂ ಅಲ್ಲ.
Footnotes
  • [1] ಸೂರ್ಯನು ಚಲಿಸುತ್ತಿದ್ದಾನೆ ಎಂಬ ಮಾತು ಕಣ್ಣಿಗೆ ಗೋಚರವಾಗುವ ರೀತಿಯನ್ನು ಹೇಳಿದ್ದು ಎಂದಾಗಬಹುದು. ಸೂರ್ಯನು ವಾಸ್ತವದಲ್ಲಿ ಚಲಿಸುತ್ತಿಲ್ಲವಾದರೂ ಭೂಮಿಯಲ್ಲಿರುವ ತಮಗೆ ಚಲಿಸುತ್ತಿರುವಂತೆ ಭಾಸವಾಗುತ್ತದೆ ತಾನೆ? ಇನ್ನು ವಾಸ್ತವದಲ್ಲಿ ಚಲಿಸುತ್ತಿದೆ ಎಂದು ಅರ್ಥ ಕೊಟ್ಟರೂ ಅದಕ್ಕೆ ವೈಜ್ಞಾನಿಕ ಸಮರ್ಥನೆ ಇದೆ. ಇಡೀ ಸೌರವ್ಯೂಹವೇ ಒಂದು ನಿಶ್ಚಿತ ಕಡೆಗೆ ಚಲಿಸುತ್ತಾ ಇದೆ ಎಂಬ ಅಂಶವನ್ನು ಆಧುನಿಕ ವಿಜ್ಞಾನ ಪ್ರತಿಪಾದಿಸುತ್ತಿದೆ. ಸೂರ್ಯನನ್ನು ಸುತ್ತುವರಿದ ಭೂಮಿ ಮತ್ತು ಇತರ ಗ್ರಹಗಳು ಇದ್ದಲ್ಲೇ ಇದ್ದು ಸೂರ್ಯ ಮಾತ್ರ ಚಲಿಸಿದರೆ ಸೌರವ್ಯೂಹದ ರಚನೆ ಏರುಪೇರಾದೀತು. ಆದರೆ ಸೂರ್ಯನೂ ಗ್ರಹಗಳೂ ಸೇರಿದ ಇಡೀ ಸೌರವ್ಯೂಹ ತಮ್ಮ ತಮ್ಮ ಸ್ಥಾನ ಮತ್ತು ಅಂತರವನ್ನು ಕಾಯ್ದುಕೊಂಡ ಸ್ಥಿತಿಯಲ್ಲೇ ಒಟ್ಟಿಗೇ ಚಲಿಸುತ್ತಾ ಇದ್ದರೆ ಏರುಪೇರು ಇರುವುದಿಲ್ಲ. ನಮಗೆ ಗೊತ್ತಾಗುವುದೂ ಇಲ್ಲ. ಇದಕ್ಕೊಂದು ಸರಳ ಉದಾಹರಣೆ : ಬಸ್ಸಿನೊಳಗೆ ಉರಿಯುತ್ತಿರುವ ಲೈಟ್‍ನ ಬಳಿ ಏಳೆಂಟು ಹಾತೆಗಳು ಒಂದು ಗುಂಪಾಗಿ ಸುತ್ತುವರಿಯುತ್ತಾ ಇರುತ್ತವೆ. ಬಸ್ಸು ಚಲಿಸಿದಂತೆ ಆ ಗುಂಪು ಮುಂದಕ್ಕೆ ಸಾಗುತ್ತಾ ಇರುತ್ತದೆ. ಆದರೂ ಆ ಗುಂಪಿನಲ್ಲಿರುವ ಹಾತೆಗಳ ನಡುವಿನ ಅಂತರ ವ್ಯತ್ಯಾಸವಾಗುವುದಿಲ್ಲ.