Kannada Translation

Ayah by Ayah

Tags

Download Links

Kannada Translation translation for Surah Fatir — Ayah 37

35:37
وَهُمۡ يَصۡطَرِخُونَ فِيهَا رَبَّنَآ أَخۡرِجۡنَا نَعۡمَلۡ صَٰلِحًا غَيۡرَ ٱلَّذِي كُنَّا نَعۡمَلُۚ أَوَلَمۡ نُعَمِّرۡكُم مَّا يَتَذَكَّرُ فِيهِ مَن تَذَكَّرَ وَجَآءَكُمُ ٱلنَّذِيرُۖ فَذُوقُواْ فَمَا لِلظَّٰلِمِينَ مِن نَّصِيرٍ ٣٧
ಅಲ್ಲಿ ಅವರು ಚೀರಾಡುವರು. “ನಮ್ಮ ಪ್ರಭೂ, ನೀನು ನಮ್ಮನ್ನು ಒಮ್ಮೆ ಹೊರಹಾಕು. ಆಗ ನಾವು ಹಿಂದೆ ಮಾಡುತ್ತಿದ್ದಂತಹ ಕರ್ಮಗಳಿಗಿಂತ ಭಿನ್ನವಾದ ಸತ್ಕರ್ಮವನ್ನು ಮಾಡುತ್ತೇವೆ”. “ಯೋಚಿಸುವವರಿಗೆ ಅರ್ಥಮಾಡಿಕೊಳ್ಳಲು ಸಾಕಾಗುವಷ್ಟು ಆಯುಷ್ಯವನ್ನು ನಾವು ನಿಮಗೆ ಕೊಟ್ಟಿರಲಿಲ್ಲವೇ? ನಿಮ್ಮ ಬಳಿಗೆ ಎಚ್ಚರಿಕೆ ಕೊಡು ವವರೂ ಬಂದಿದ್ದರಲ್ಲವೇ? ಆದ್ದರಿಂದ ಈಗ ಸವಿಯಿರಿ, ಇನ್ನು ಅಕ್ರಮಿಗಳಿಗೆ ಯಾರೂ ಸಹಾಯ ಕನಿಲ್ಲ” (ಎಂದು ಅವರಿಗೆ ಉತ್ತರಿಸಲಾಗುವುದು.)1
Footnotes
  • [1] ಸತ್ಯ ನಿಷೇಧಿಗಳು ಇನ್ನೊಮ್ಮೆ ಇಹಲೋಕಕ್ಕೆ ತಮ್ಮನ್ನು ಮರಳಿಸಬೇಕೆಂಬ ತಮ್ಮ ವ್ಯಾಮೋಹವನ್ನು ಅಲ್ಲಾಹುವಿನ ಮುಂದೆ ತೋಡಿಕೊಂಡರು ತಾನೆ? ಅದು ಸ್ವೀಕೃತವಲ್ಲವೆಂದು ಇಲ್ಲಿ ಸ್ಪಷ್ಟಪಡಿಸಲಾಗಿದೆ. ತಿರಸ್ಕಾರಕ್ಕೆ ಎರಡು ಕಾರಣಗಳನ್ನು ನೀಡಲಾಗಿದೆ. ಒಂದು; ಪಾರತ್ರಿಕ ಮೋಕ್ಷಕ್ಕೆ ಅಗತ್ಯವಾದ ಪುಣ್ಯ ಕಾರ್ಯಗಳನ್ನು ಮಾಡಲು ಯಥೇಷ್ಠ ಅವಕಾಶಗಳನ್ನು ನಿಮಗೆ ಇಹಲೋಕದಲ್ಲಿ ನೀಡಲಾಗಿತ್ತು. ಆದರೆ ಅದನ್ನು ನೀವು ದುರುಪಯೋಗ ಮಾಡಿದಿರಿ. ಎರಡು; ಪರಲೋಕದ ಈ ಅವಸ್ಥೆಯ ಬಗ್ಗೆ ಮುನ್ನೆಚ್ಚರಿಕೆ ನೀಡಲು ಪ್ರವಾದಿಗಳನ್ನು ನೇಮಿಸಲಾಗಿತ್ತು. ಅವರನ್ನು ನೀವು ತಳ್ಳಿ ಹಾಕಿದಿರಿ. ಆದ್ದರಿಂದ ನಿಮ್ಮ ಇಂದಿನ ಅಹವಾಲು ಪರಿಗಣನಾರ್ಹವಲ್ಲ ಎಂದರ್ಥ. ನದ್ಸೀರ್ (ಮುನ್ನೆಚ್ಚರಿಕೆದಾರ) ಎಂಬುದರ ತಾತ್ಪರ್ಯ ರಸೂಲರು ಎಂದು ಖತಾದಃರಿಂದ ವರದಿ ಯಾಗಿದ್ದು ಇಬ್ನು ಜರೀರ್ ಈ ಅಭಿಪ್ರಾಯವನ್ನು ಖಚಿತಪಡಿಸಿದ್ದಾರೆ. ಆದರೆ ಇಬ್ನು ಅಬ್ಬಾಸ್ ಮತ್ತು ಇಕ್‍ರಿಮಃ ರಿಂದ ಇಮಾಮ್ ಬುಖಾರಿ ಉಲ್ಲೇಖಿಸಿದ್ದು ಕೂದಲಿನ ನೆರೆತ ಎಂದಾಗಿದೆ. ಕೂದಲು ಬಿಳಿಯಾದರೆ ಅದು ಅಂತ್ಯ ಸನ್ನಿಹಿತವಾಗುವ ಲಕ್ಷಣವನ್ನು ಸಂಕೇತಿಸುವ ಎಚ್ಚರಿಕೆದಾರನಾಗಿ ಕೆಲಸ ಮಾಡುತ್ತದೆ. ``ಆದ್ದರಿಂದ ನೀವು ಅನುಭವಿಸಿರಿ’’ ಎಂಬ ರಾಜ ಘೋಷಣೆಯು ಅವರ ಎಲ್ಲ ಆಸೆಗಳಿಗೆ ಪರದೆಯೆಳೆಯುತ್ತದೆ. `ಕಾಲಾಕಾಲ ಅನುಭವಿಸುತ್ತಾ ಇರಿ’ ಎಂದು ಇದರರ್ಥವೆಂದು ಇಮಾಮ್ ರಾಝಿ ದಾಖಲಿಸಿದ್ದಾರೆ. (ರಾಝಿ 26/30)