Kannada Translation

Ayah by Ayah

Tags

Download Links

Kannada Translation translation for Surah Fatir — Ayah 45

35:45
وَلَوۡ يُؤَاخِذُ ٱللَّهُ ٱلنَّاسَ بِمَا كَسَبُواْ مَا تَرَكَ عَلَىٰ ظَهۡرِهَا مِن دَآبَّةٖ وَلَٰكِن يُؤَخِّرُهُمۡ إِلَىٰٓ أَجَلٖ مُّسَمّٗىۖ فَإِذَا جَآءَ أَجَلُهُمۡ فَإِنَّ ٱللَّهَ كَانَ بِعِبَادِهِۦ بَصِيرَۢا ٤٥
ಜನರು ಮಾಡಿದ ದುಷ್ಕರ್ಮಗಳಿಗಾಗಿ ಅಲ್ಲಾ ಹನು ಅವರನ್ನು (ತ್ವರಿತವಾಗಿ) ಹಿಡಿದು ಶಿಕ್ಷಿಸುತ್ತಿದ್ದರೆ, ಭೂಮಿಯ ಮೇಲೆ ಒಂದು ಜೀವಿಯನ್ನೂ ಜೀವಂತ ಬಿಡುತ್ತಿರಲಿಲ್ಲ. ಆದರೆ, ಅವನು ಅವರಿಗೆ ಒಂದು ನಿಶ್ಚಿತ ಸಮಯದವರೆಗೆ ಕಾಲಾವಕಾಶ ಕೊಡುವನು. ಅನಂತರ ಅವರ ನಿಶ್ಚಿತ ಕಾಲ ಬಂದಾಗ ಅಲ್ಲಾಹು ತನ್ನ ದಾಸರನ್ನು ನೋಡಿ ಕೊಳ್ಳುವನು. (ತಕ್ಕ ಪ್ರತಿಫಲ ಕೊಡುವನು)1.
Footnotes
  • [1] ಅಪರಾಧಿಗಳನ್ನು ಅಲ್ಲಾಹನಿಗೆ ಸುಟ್ಟು ಭಸ್ಮಗೊಳಿಸಬಾರದೇಕೆ? ಎಂಬ ಪ್ರಶ್ನೆಗೆ ಉತ್ತರವಿದು. ಮನುಷ್ಯನ ಅಪರಾಧಕ್ಕೆ ಅಲ್ಲಾಹನು ತಕ್ಷಣ ಶಿಕ್ಷಾ ಕ್ರಮ ವನ್ನು ಕೈಗೊಳ್ಳುತ್ತಿದ್ದರೆ ಯಾವುದೇ ಒಂದು ಜೀವಿಯು ಭೂತಳದಲ್ಲಿ ಬದುಕುಳಿಯುತ್ತಿರಲಿಲ್ಲ. ಅಷ್ಟಕ್ಕೂ ಕಠಿಣವಾಗಿದೆ ಮನುಷ್ಯನ ಧಿಕ್ಕಾರ ಹಾಗೂ ಕೃತ ಘ್ನತೆ ಎಂದು ಅರ್ಥ. ಪ್ರತಿಯೊಂದಕ್ಕೂ ನಿಶ್ಚಿತ ಸಮಯ ಹಾಗೂ ವಿಧಾನಗಳಿವೆ. ಅಪರಾಧಿಗಳನ್ನು ಶಿಕ್ಷಿಸುವಂತೆ ಸಚ್ಚರಿತರಿಗೆ ಪ್ರತಿಫಲ ನೀಡಲೂ ಒಂದು ವೇದಿಕೆ ಇದೆ. ಪಾರತ್ರಿಕ ಲೋಕವದು. ನಿಶ್ಚಿತ ಸಂದರ್ಭ ತಲುಪಿ ಬಿಟ್ಟರೆ ಪ್ರತಿಯೊಬ್ಬರಿಗೂ ಅರ್ಹ ಫಲವನ್ನು ಕೊಡಲಾಗುವುದು. ಅಲ್ಲಾಹನು ಪ್ರತಿ ಯೊಬ್ಬನನ್ನೂ ಸೂಕ್ಷ್ಮವಾಗಿ ದಿಟ್ಟಿಸಬಲ್ಲವನು. ಯಾರು ಶಿಕ್ಷೆಗೆ ಅರ್ಹನಾದ ವ್ಯಕ್ತಿ. ಪ್ರತಿಫಲಕ್ಕೆ ಅರ್ಹನಾದವನು ಯಾರು? ಎಂಬುದನ್ನೆಲ್ಲ ಅವನು ಸೂಕ್ಷ್ಮ ವಾಗಿ ತಿಳಿಯುತ್ತಾನೆ.