Kannada Translation

Ayah by Ayah

Tags

Download Links

Kannada Translation translation for Surah Fatir — Ayah 6

35:6
إِنَّ ٱلشَّيۡطَٰنَ لَكُمۡ عَدُوّٞ فَٱتَّخِذُوهُ عَدُوًّاۚ إِنَّمَا يَدۡعُواْ حِزۡبَهُۥ لِيَكُونُواْ مِنۡ أَصۡحَٰبِ ٱلسَّعِيرِ ٦
ಖಂಡಿತ ಶೈತಾನನು ನಿಮ್ಮ ಶತ್ರುವಾಗಿದ್ದಾನೆ. ಆದುದರಿಂದ ನೀವು ಅವನನ್ನು ಶತ್ರುವನ್ನಾಗಿ ಮಾಡಿರಿ. ಅವನು ತನ್ನ ಪಕ್ಷದವರನ್ನು ಅವರು ನರಕವಾಸಿಗಳಲ್ಲಿ ಸೇರಲೆಂದೇ ಆಹ್ವಾನಿಸುತ್ತಿದ್ದಾನೆ1.
Footnotes
  • [1] ಅರ್ಥಾತ್ ಮಾನವ ಕುಲವೇ! ಶೈತಾನನು ನಿಮ್ಮ ಶತ್ರು. ಅವನನ್ನು ನೀವು ಶತ್ರುವಾಗಿ ಮಾತ್ರವೇ ಕಾಣಬೇಕು. ಏಕೆಂದರೆ ಅವನು ತನ್ನ ಅನುಯಾಯಿ ಹಾಗೂ ಆಜ್ಞಾನುವರ್ತಿಗಳನ್ನು ನರಕದತ್ತ ಕೊಂಡೊಯ್ಯುತ್ತಿದ್ದಾನೆ. ನರಕದ ಶಾಶ್ವತ ವಾಸಕ್ಕೆ ತಳ್ಳುವತ್ತ ಆತನು ತನ್ನ ಸಂಘವನ್ನು ಸೆಳೆಯುತ್ತಾನೆ. ವೈರವನ್ನು ಬಂಡವಾಳವಾಗಿಟ್ಟುಕೊಂಡು ನಿಮ್ಮೊಂದಿಗೆ ಸೆಣಸಾಡಲು ಶೈತಾನನು ಗೋದೆಗಿಳಿದಿರುತ್ತಾನೆ. ನೀವೂ ಅವನ ಜತೆಗೆ ಹೊತ್ತಿ ಉರಿಯುವ ನರಕಕ್ಕೆ ಹೋಗಬೇಕೆಂಬುದೇ ಆತನ ಇರಾದೆ. ಆದ್ದರಿಂದ ನೀವು ಅವನಲ್ಲಿ ಕಠಿಣ ಶತ್ರುತ್ವವನ್ನು ಹೊಂದಿಕೊಂಡು ಅವನ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸಬೇಕು. ನೀವು ಮೋಸಕ್ಕೊಳಗಾಗುವ ಕಾರ್ಯಗಳಲ್ಲಿ ಅವನನ್ನು ದೂರವಿಡಬೇಕು. (ಇಬ್ನು ಕಸೀರ್ 3/547)