Kannada Translation

Ayah by Ayah

Tags

Download Links

Kannada Translation translation for Surah Ya-Sin — Ayah 38

36:38
وَٱلشَّمۡسُ تَجۡرِي لِمُسۡتَقَرّٖ لَّهَاۚ ذَٰلِكَ تَقۡدِيرُ ٱلۡعَزِيزِ ٱلۡعَلِيمِ ٣٨
ಸೂರ್ಯನು ತನ್ನ ನೆಲೆಗೆ ಚಲಿಸುತ್ತಿದ್ದಾನೆ1. ಪ್ರತಾಪನೂ ಸರ್ವಜ್ಞನೂ ಆದವನ ನಿರ್ಣಯವಿದು.
Footnotes
  • [1] ಸೂರ್ಯನು ತನ್ನ ಕಕ್ಷೆಯಲ್ಲಿ ತಿರುಗುತ್ತಿರುವುದರೊಂದಿಗೆ ಸೆಕೆಂಡಿಗೆ 20 ಕಿ. ಮೀ. ವೇಗದಲ್ಲಿ ಸಂಚರಿಸುತ್ತಿದ್ದು 20 ಕೋಟಿ ವರ್ಷಗಳಾದಾಗ ಒಂದು ಸುತ್ತು ಮುಗಿಸುತ್ತದೆ ಎಂಬುದು ಆಧುನಿಕ ವಿಜ್ಞಾನದ ನಿಗಮನ. ಇಂಥ ಪ್ರಚಂಡ ವೇಗದಲ್ಲಿ ಚಲಿಸುವಾಗ ಅದು ಮತ್ತು ಉಳಿದ ಗ್ರಹಗಳು ತಮ್ಮ ಅಂತರವನ್ನು ಕಾಯ್ದುಕೊಂಡೇ ಚಲಿಸುವುದರಿಂದ ಇಡೀ ಸೌರವ್ಯೂಹದ ಗುಂಪು ಚಲಿಸಿದಂತಾಗುತ್ತದೆ. ಆದ್ದರಿಂದ ಅವುಗಳ ನಿರ್ದಿಷ್ಟ ಅಂತರದಲ್ಲಿ ಏರುಪೇರಾಗುವುದಿಲ್ಲ.