Kannada Translation

Ayah by Ayah

Tags

Download Links

Kannada Translation translation for Surah Ya-Sin — Ayah 39

36:39
وَٱلۡقَمَرَ قَدَّرۡنَٰهُ مَنَازِلَ حَتَّىٰ عَادَ كَٱلۡعُرۡجُونِ ٱلۡقَدِيمِ ٣٩
ಚಂದ್ರನಿಗೆ ನಾವು ಸ್ಥಾನಗಳನ್ನು ನಿಶ್ಚಯಿಸಿಕೊಟ್ಟಿದ್ದು ಕೊನೆಗೆ ಅದು ಖರ್ಜೂರದ ಗೊನೆಯ ಹಳೆಯ ದಿಂಡಿನ ಸ್ಥಿತಿಗೆ ಮರಳುತ್ತದೆ1.
Footnotes
  • [1] ರಾತ್ರಿ ಮತ್ತು ಹಗಲನ್ನು ಗುರುತಿಸುವಂತಾಗಲು ಸೂರ್ಯನನ್ನು ನಿಶ್ಚೈಸಿರುವಂತೆಯೇ ತಿಂಗಳನ್ನು ಗುರುತಿಸಲು ಚಂದ್ರನನ್ನು ಅಲ್ಲಾಹನು ನಿಶ್ಚೈಸಿದ್ದಾನೆ. ಸೂರ್ಯ - ಚಂದ್ರರ ಸಂಚಾರಗಳ ನಡುವೆ ವ್ಯತ್ಯಾಸವಿದೆ. ಸೂರ್ಯ ನಿತ್ಯ ಉದಿಸುತ್ತಾನೆ ಮತ್ತು ಅಸ್ತಮಿಸುತ್ತಾನೆ. ಬೇಸಿಗೆ ಕಾಲದಲ್ಲೂ ಶೀತ ಕಾಲದಲ್ಲೂ ಸೂರ್ಯ ಅದರ ಉದಯ ಸ್ಥಾನಕ್ಕೂ ಅಸ್ತಮ ಸ್ಥಾನಕ್ಕೂ ಚಲಿಸಿಕೊಂಡಿರುತ್ತಾನೆ. ಈ ಕಾರಣದಿಂದ ಕೆಲವೊಮ್ಮೆ ಹಗಲು ದೀರ್ಘವಾಗುತ್ತದೆ ಮತ್ತು ರಾತ್ರಿ ಕಡಿಮೆಯಾಗುತ್ತದೆ. ಸೂರ್ಯ ಒಂದು ಹಗಲು ನಕ್ಷತ್ರವಾಗಿದೆ. ಆದರೆ ಚಂದ್ರನಿಗೆ ಕೆಲವು ರಾಶಿ ಮಂಡಲಗಳನ್ನು ಅಲ್ಲಾಹು ನಿಶ್ಚೈಯಿಸಿದ್ದಾನೆ. ತಿಂಗಳ ಪ್ರಥಮ ರಾತ್ರಿಯಲ್ಲಿ ತೆಳು ಗಾತ್ರದಲ್ಲೂ ಕುಂದಿದ ಪ್ರಕಾಶದಲ್ಲೂ ಅದು ಉದಿಸುತ್ತಾ ಬರುತ್ತದೆ. ನಂತರದ ರಾತ್ರಿಗಳಲ್ಲಿ ಕ್ರಮೇಣ ಅದರ ಗಾತ್ರ ಹಾಗೂ ಪ್ರಕಾಶ ವೃದ್ಧಿಸುತ್ತಾ ಹೋಗುತ್ತದೆ. ಹದಿನಾಲ್ಕನೆಯ ರಾತ್ರಿ ಅದು ಪೂರ್ಣಚಂದ್ರನಾಗಿ ಮಾರ್ಪಡುತ್ತದೆ. ತರುವಾಯ ತಿಂಗಳ ಕೊನೆಗೆ ತಲುಪುವಂತೆ ಅದರ ಗಾತ್ರ ಹಾಗೂ ಪ್ರಕಾಶ ಕ್ರಮೇಣ ಕುಂಠಿತವಾಗುತ್ತ ಬರುತ್ತದೆ. ಹಾಗೆ ಕೊನೆಗದು ಖರ್ಜೂರದ ಹಳೆಯ ಕಾಂಡದಂತೆ ಆಗಿಬಿಡುತ್ತದೆ. (ಮುಖ್ತಸರ್ ಇಬ್ನುಕಸೀರ್ 3/163) “ಸ್ಥಾನಗಳನ್ನು ನಿಶ್ಚಯಿಸಿಕೊಟ್ಟಿದ್ದು” ಎಂಬುದರ ಉದ್ದೇಶ ಚಂದ್ರನ ಮಾಸಿಕ ಭ್ರಮಣಪಥದ 28 ಮಂಡಲಗಳು. ಕಟ್ಟಕಡೆಯ ದಿನ ಅದು ಕಣ್ಣಿಗೆ ಗೋಚರಿಸುವ ರೂಪವನ್ನು ಅರಬರಿಗೆ ಚಿರಪರಿಚಿತವಾದ ಒಂದು ವಸ್ತುವಿನೊಂದಿಗೆ ಹೋಲಿಕೆ ಮಾಡಿಹೇಳಲಾಗಿದೆ. ಸಾಹಿತ್ಯವನ್ನು ಮನಸ್ಸಿಗೆ ಮುಟ್ಟಿಸುವ ತಂತ್ರಗಾರಿಕೆಯಲ್ಲಿ ಪರಿಚಿತ ವಸ್ತುಗಳ ಹೋಲಿಕೆಗೆ ಪ್ರಧಾನ ಪಾತ್ರವಿದೆ. ತೆಂಗಿನಕಾಯಿಗಳ ಕೊಂಬೆಯಂತೆ ಖರ್ಜೂರವು ಕೊಂಬೆಗಳಲ್ಲಿ ಬೆಳೆಯುತ್ತದೆ. ತೆಂಗಿನಕಾಯಿ ಕಳಚಿದರೆ ಬೆಂಕಿ ಹೊತ್ತಿಸಲು ಬಳಕೆಯಾಗುವ ಅದರ ಖಾಲಿ ಗೊನೆ ನಮಗೆಲ್ಲ ಗೊತ್ತು. ಖರ್ಜೂರದ ಹಣ್ಣುಗಳನ್ನು ಕಿತ್ತರೆ ಅದರ ಖಾಲಿ ಗೊನೆಯೂ ಇದೇ ತರ ಇರುತ್ತದೆ. ಅದು ಒಣಗಿ ಹಳತಾದರೆ ಅರ್ಧ ಚಂದ್ರಾಕೃತಿಯಲ್ಲಿ ಬಾಗುತ್ತದೆ.