Kannada Translation

Ayah by Ayah

Tags

Download Links

Kannada Translation translation for Surah Ya-Sin — Ayah 80

36:80
ٱلَّذِي جَعَلَ لَكُم مِّنَ ٱلشَّجَرِ ٱلۡأَخۡضَرِ نَارٗا فَإِذَآ أَنتُم مِّنۡهُ تُوقِدُونَ ٨٠
ನಿಮಗಾಗಿ ಹಚ್ಚಹಸಿರಾದ ಮರದಿಂದ ಬೆಂಕಿ ಯನ್ನುಂಟು ಮಾಡಿದವನು ಅವನೇ. ನೀವು ಅದರಿಂದ ಬೆಂಕಿ ಉರಿಸುತ್ತಿರುವಿರಿ1.
Footnotes
  • [1] ನೀರು ಬೆಂಕಿಯನ್ನು ಆರಿಸುವ ವಸ್ತು. ಅಂತಹ ನೀರಿನ ಅಂಶ ತುಂಬಿದ ಹಸಿ ಮರದಿಂದ ಅಲ್ಲಾಹನು ಬೆಂಕಿಯನ್ನು ಉತ್ಪತ್ತಿ ಮಾಡುತ್ತಾನೆ. ದ್ರವಿಸಿದ ದೇಹವನ್ನು ಮರು ರೂಪಿಸಿ ಜೀವ ತುಂಬುವುದು ಇಷ್ಟು ಕ್ಲಿಷ್ಟವಲ್ಲ ಎಂದಾಗಿದೆ ಇಲ್ಲಿನ ಉದಾಹರಣೆ. ಹಿಂದೆ ಹಿಜಾಝ್‍ನಲ್ಲಿ ಅಫಾರ್ ಮರಖ್ ಎಂಬ ಹೆಸರಿನ ಒಂದು ಮರದ ಎರಡು ಕೊರಡುಗಳನ್ನು ಪರಸ್ಪರ ತಿಕ್ಕುವ ಮೂಲಕ ಬೆಂಕಿ ಮಾಡುತ್ತಿದ್ದರು. ಈಗಲೂ ಆದಿವಾಸಿಗಳಲ್ಲಿ ಬಿದಿರು ತುಂಡುಗಳನ್ನು ಒರೆಸಿ ಬೆಂಕಿ ಹೊತ್ತಿಸುವ ರೂಢಿ ಚಾಲ್ತಿಯಲ್ಲಿದೆ.