Kannada Translation

Ayah by Ayah

Tags

Download Links

Kannada Translation translation for Surah As-Saffat — Ayah 113

37:113
وَبَٰرَكۡنَا عَلَيۡهِ وَعَلَىٰٓ إِسۡحَٰقَۚ وَمِن ذُرِّيَّتِهِمَا مُحۡسِنٞ وَظَالِمٞ لِّنَفۡسِهِۦ مُبِينٞ ١١٣
ಅವರಿಗೂ ಇಸ್‍ಹಾಖರಿಗೂ ನಾವು ಸಮೃದ್ಧಿ ದಯಪಾಲಿಸಿದೆವು. ಅವರಿಬ್ಬರ ಸಂತತಿಯಲ್ಲಿ ಸದ್ಭಕ್ತರಿದ್ದಾರೆ. ತಮ್ಮ ಮೇಲೆ ತಾವೇ ಬಹಿರಂಗವಾದ ಅಕ್ರಮವೆಸಗುವವರೂ ಇದ್ದಾರೆ1.
Footnotes
  • [1] ‘ಅವರಿಬ್ಬರ ಸಂತತಿಯಲ್ಲಿ’ ಎಂಬಲ್ಲಿರುವ ಇಬ್ಬರು ಅಂದರೆ ಇಬ್ರಾಹೀಮ್ ಮತ್ತು ಇಸ್‍ಹಾಖ್‍ರನ್ನು ಉದ್ದೇಶವಿಡಬಹುದು. ಅಥವಾ ಇಸ್ಮಾಈಲ್, ಇಸ್‍ಹಾಖ್‍ರನ್ನು ಉದ್ದೇಶವಿಡಬಹುದು. ಇವರ ಸಂತತಿಗಳ ಪೈಕಿ ಸುಗುಣರೂ, ದುರ್ಗಣರೂ ಇದ್ದಾರೆ ಎಂಬುದು ಚಾರಿತ್ರಿಕ ಸತ್ಯ. ಇಬ್ಬರ ಪರಂಪರೆಯಲ್ಲೂ ಅನೇಕ ಪ್ರವಾದಿಗಳು ಬಂದಿದ್ದಾರೆ. ಅನೇಕ ದುಷ್ಟರೂ ಆಗಿ ಹೋಗಿದ್ದಾರೆ. ಉತ್ತಮ ಪಿತೃರ ಸಂತಾನ ಉತ್ತಮವೇ ಆಗ ಬೇಕೆಂದಿಲ್ಲ ಹಾಗೂ ಸಂತಾನ ಕೆಟ್ಟರೆ ಪಿತೃರ ಸ್ಥಾನಕ್ಕೆ ಕೊರತೆಯಿಲ್ಲ ಎಂಬ ತತ್ವವನ್ನು ಇದರಿಂದ ಗ್ರಹಿಸಿಕೊಳ್ಳಬಹುದು.