Kannada Translation

Ayah by Ayah

Tags

Download Links

Kannada Translation translation for Surah As-Saffat — Ayah 5

37:5
رَّبُّ ٱلسَّمَٰوَٰتِ وَٱلۡأَرۡضِ وَمَا بَيۡنَهُمَا وَرَبُّ ٱلۡمَشَٰرِقِ ٥
ಅವನು ಭೂಮಿ-ಆಕಾಶಗಳ ಹಾಗೂ ಅವುಗಳ ಎಡೆಯಲ್ಲಿರುವ ಸಕಲ ವಸ್ತುಗಳ ಪರಿಪಾಲಕನು ಮತ್ತು ಉದಯಸ್ಥಾನಗಳ ಒಡೆಯನು1.
Footnotes
  • [1] ಉದಯಸ್ಥಾನಗಳ ಪ್ರಭು ಎಂಬಲ್ಲಿ ಉದಯಗಳು ಎಂದು ಬಹುವಚನ ಮಾಡಿರುವುದು ಗಮನಾರ್ಹ. ಸೂರ್ಯ, ಚಂದ್ರ ಹಾಗೂ ಇತರ ಗ್ರಹಗಳ ಉದಯ ಸ್ಥಾನಗಳು ಬದಲಾಗುತ್ತಾ ಇರುತ್ತವೆ. ಅಂದರೆ ಭೂಮಿಯ ವಾರ್ಷಿಕ ಚಲನೆಯಿಂದಾಗಿ ಹಾಗೆ ಕಾಣುತ್ತಿರುತ್ತದೆ. ಉದಯ ಸ್ಥಾನ ಬದಲಾದಾಗ ಅಸ್ತಮಸ್ಥಾನವೂ ಬದಲಾಗುತ್ತದೆ. ಆದ್ದರಿಂದ ಸೂರಾ ಮಆರಿಜ್‍ನಲ್ಲಿ “ಉದಯಗಳು ಮತ್ತು ಅಸ್ತಮಾನಗಳ ಪ್ರಭು” ಎಂದು ಅಸ್ತಮಾನಗಳನ್ನು ಸೇರಿಸಿ ಹೇಳಲಾಗಿದೆ. ಭೂಮಿಯ ಪಾಲಿಗೆ ಸೂರ್ಯ ಮಾತ್ರವಲ್ಲ ಇತರ ಗ್ರಹ, ನಕ್ಷತ್ರಗಳ ಉದಯಾಸ್ತಮಾನಗಳು ನಿರಂತರ ನಡೆಯುತ್ತಲೇ ಇರುತ್ತವೆ. ಅಲ್ಲದೆ ಸೂರ್ಯನ ಉದಯಾಸ್ತಮಾನ ಭೂಮಿಗೆ ಮಾತ್ರವಲ್ಲ, ಚಂದ್ರನಿಗೂ ಇತರ ಗ್ರಹಗಳಲ್ಲೂ ನಡೆಯುತ್ತವೆ. ಉದಯಗಳು ಮತ್ತು ಅಸ್ತಮಾನಗಳು ಎಂಬ ಬಹುವಚನದ ಪ್ರಯೋಗದಲ್ಲಿ ಇದೂ ಕೂಡಾ ಒಳಪಡುವುದು.