Kannada Translation

Ayah by Ayah

Tags

Download Links

Kannada Translation translation for Surah As-Saffat — Ayah 89

37:89
فَقَالَ إِنِّي سَقِيمٞ ٨٩
ಆಮೇಲೆ ಹೇಳಿದರು, ನಾನು ರೋಗಿಯಾಗಿದ್ದೇನೆ1.
Footnotes
  • [1] ‘ನಾನು ರೋಗಿಯಾಗಿದ್ದೇನೆ’ ಅಂದರೆ ನಿಮ್ಮ ಅವಸ್ಥೆ ಕಂಡು ಮಾನಸಿಕವಾಗಿ ಅಸ್ವಸ್ಥನಾಗಿರುತ್ತೇನೆ ಎಂದರ್ಥ. ಆದರೆ ಜನರು ಭಾವಿಸಿದ್ದು ಇಬ್ರಾಹೀಮರಿಗೆ ದೈಹಿಕ ಅಸ್ವಸ್ಥತೆ ಎಂದಾಗಿತ್ತು. ವಾಸ್ತವದಲ್ಲಿ ಸತ್ಯವೂ ಕೇಳುಗರಿಗೆ ಇನ್ನೊಂದು ಭಾವನೆಯೂ ಬರುವ ಇಂತಹ ಮಾತಿಗೆ ‘ತಅïರೀಳ್’ ಎನ್ನಲಾಗುತ್ತಿದೆ. ಅನಿವಾರ್ಯ ಘಟ್ಟದಲ್ಲಿ ಇದು ಧರ್ಮಸಮ್ಮತವಾಗಿದೆ. “ಇಬ್ರಾಹೀಮ್ ನಬಿ ಯವರ ಪ್ರಸ್ತುತ ಮಾತು ಸುಳ್ಳಾಗಿತ್ತು” ಎಂದು ಪ್ರವಾದಿವರ್ಯರು ಹೇಳಿದ್ದು (ಬುಖಾರಿ, ಮುಸ್ಲಿಮ್) ಈ ಅರ್ಥದಲ್ಲಾಗಿದೆ. ಅಂದರೆ ಪ್ರತ್ಯಕ್ಷಕ್ಕೆ ಸುಳ್ಳಾದರೂ ವಾಸ್ತವದಲ್ಲಿ ಸುಳ್ಳಲ್ಲ ಎಂದರ್ಥ. ಸುಳ್ಳು ಹೇಳದೆ ಪಾರಾಗಲು ಸಾಧ್ಯವಿಲ್ಲದ ಆದರೆ ಸುಳ್ಳು ಹೇಳಲು ಪಾಪಪ್ರಜ್ಞೆ ಕಾಡುವ ದ್ವಂದ್ವ ಪರಿಸ್ಥಿತಿ ಕೆಲವು ಸಂದರ್ಭಗಳಲ್ಲಿ ಬರುತ್ತದೆ. ಉದಾ : ಒಬ್ಬ ಸಾಲ ಕೇಳುತ್ತಾನೆ. ಕೊಟ್ಟರೆ ಮರುಪಾವತಿ ಇಲ್ಲವೆಂದು ಸ್ಪಷ್ಟವಿದೆ. ಆದರೆ ಕೊಡದಿದ್ದರೆ ಅವನಿಂದ ತೊಂದರೆ ಇದೆ. ಇಂತಹ ಪರಿಸ್ಥಿತಿಯಲ್ಲಿ ದ್ವಯಾರ್ಥ ಪ್ರಯೋಗ ಮಾಡಬಹುದು. ಉದಾ: “ನನ್ನ ಕೈಯ್ಯಲ್ಲಿ ಹಣ ಇಲ್ಲ” ಎನ್ನಬಹುದು. ವಾಸ್ತವದಲ್ಲಿ ಈತ ಹೇಳಿದ್ದು ಈಗ ನನ್ನ “ಕೈಯ್ಯಲ್ಲಿ” ಇಲ್ಲ ಎಂದು ! “ದ್ವಯಾರ್ಥ ಪ್ರಯೋಗವು ಸುಳ್ಳಿನಿಂದ ಪಾರು ಮಾಡುತ್ತದೆ” ಎಂದು ಹದೀಸ್‍ನಲ್ಲಿದೆ. ಆದರೆ ತನ್ನ ಕಡೆಯಲ್ಲಿ ನೀತಿಯೂ ಎದುರಿಸುವವನ ಕಡೆಯಲ್ಲಿ ಅನೀತಿಯೂ ಇದ್ದರೆ ಮಾತ್ರ ದ್ವಯಾರ್ಥ ಸಮ್ಮತ. ತನ್ನ ಅನ್ಯಾಯಕ್ಕೆ ದ್ವಯಾರ್ಥದ ದುರುಪಯೋಗ ಪಾಪವಾಗುವುದು. ಉದಾ: ಸಾಲದ ಮರುಪಾವತಿಯ ಅವಧಿ ತಲುಪಿದ್ದು ತನ್ನ ಪೆಟ್ಟಿಗೆಯೊಳಗೆ ಮರುಪಾವತಿಯ ಹಣವೂ ಇದ್ದು ಕೂಡಾ ಸಾಲಿಗ ಬಂದು ಕೇಳಿದಾಗ “ನನ್ನ ಕೈಯ್ಯಲ್ಲಿ ಹಣ ಇಲ್ಲ” ಎಂದು ಹೇಳುವವನು ಸುಳ್ಳಿನಿಂದ ಪಾರಾಗುವುದಿಲ್ಲ. ಸುಳ್ಳಿನ ಜೊತೆಗೆ ವಂಚಿಸಿದ ಪಾಪಕ್ಕೂ ಗುರಿಯಾಗುವನು.