Kannada Translation

Ayah by Ayah

Tags

Download Links

Kannada Translation translation for Surah Sad — Ayah 24

38:24
قَالَ لَقَدۡ ظَلَمَكَ بِسُؤَالِ نَعۡجَتِكَ إِلَىٰ نِعَاجِهِۦۖ وَإِنَّ كَثِيرٗا مِّنَ ٱلۡخُلَطَآءِ لَيَبۡغِي بَعۡضُهُمۡ عَلَىٰ بَعۡضٍ إِلَّا ٱلَّذِينَ ءَامَنُواْ وَعَمِلُواْ ٱلصَّٰلِحَٰتِ وَقَلِيلٞ مَّا هُمۡۗ وَظَنَّ دَاوُۥدُ أَنَّمَا فَتَنَّٰهُ فَٱسۡتَغۡفَرَ رَبَّهُۥ وَخَرَّۤ رَاكِعٗاۤ وَأَنَابَ۩ ٢٤
ಆಗ ದಾವೂದರು- ‘ಇವನು ತನ್ನ ಹೆಣ್ಣು ಆಡುಗಳೊಂದಿಗೆ ನಿನ್ನ ಆಡನ್ನು ಸೇರಿಸಿಕೊಳ್ಳಲು ಕೇಳುವ ಮೂಲಕ ನಿಜಕ್ಕೂ ನಿನ್ನ ಮೇಲೆ ಅಕ್ರಮವೆಸಗಿರುವನು. ಸಹಬಾಳುವೆ ನಡೆಸುವವರಲ್ಲಿ ಹೆಚ್ಚಿನವರೂ ಪರಸ್ಪರ ಅತಿರೇಕವೆಸಗುತ್ತಾರೆ. ಸತ್ಯವಿಶ್ವಾಸವಿರಿಸಿ ಸತ್ಕರ್ಮವೆಸಗುವವರು ಮಾತ್ರ ಇದರಿಂದ ದೂರವಿರುತ್ತಾರೆ. ಇಂತಹವರು ಬಹಳ ವಿರಳ’ ಎಂದರು. ದಾವೂದರು ಭಾವಿಸಿದರು, ‘ನಾವು ಅವರನ್ನು ಪರೀಕ್ಷಿಸುತ್ತಿದ್ದೇವೆ’ ಎಂದು. ನಂತರ ಅವರು ತಮ್ಮ ಪ್ರಭುವಿನೊಡನೆ ಕ್ಷಮಾಯಾಚನೆ ನಡೆಸಿದರು. ಸಾಷ್ಟಾಂ ಗವೆರಗಿದರು. ಪಶ್ಚಾತ್ತಾಪಪಟ್ಟು ಮರಳಿದರು1.
Footnotes
  • [1] ಈ ವಾಕ್ಯವನ್ನು ಓದಿ ಮುಗಿಸಿದಾಗ ಸುಜೂದ್ ಸುನ್ನತ್ತಿದೆ. ಇಮಾಮ್ ಮಾಲಿಕ್ ಹಾಗೂ ಅಬೂಹನೀಫಾರ ಪ್ರಕಾರ ಇದು ತಿಲಾವತಿನ ಸುಜೂದ್ ಆಗಿದೆ. ಇಮಾಮ್ ಶಾಫಿಈ ಹಾಗೂ ಅಹ್ಮದ್ ಪ್ರಕಾರ ಇದು ತಿಲಾವತಿನದ್ದಲ್ಲ, ಶುಕ್ರ್‍ನ ಸುಜೂದ್, ಆದ್ದರಿಂದ ನಮಾಝ್‍ನಲ್ಲಿರುವಾಗ ಈ ಸುಜೂದ್ ಮಾಡಬಾರದು.