Kannada Translation

Ayah by Ayah

Tags

Download Links

Kannada Translation translation for Surah Sad — Ayah 25

38:25
فَغَفَرۡنَا لَهُۥ ذَٰلِكَۖ وَإِنَّ لَهُۥ عِندَنَا لَزُلۡفَىٰ وَحُسۡنَ مَـَٔابٖ ٢٥
ಆಗ ನಾವು ಅವರಿಗೆ ಅದನ್ನು ಕ್ಷಮಿಸಿದೆವು. ನಿಶ್ಚಯ ನಮ್ಮ ಬಳಿ ಅವರಿಗಾಗಿ ನಿಕಟ ಸ್ಥಾನ ಹಾಗೂ ಉತ್ತಮವಾದ ಅಂತಿಮ ನೆಲೆ ಇದೆ1.
Footnotes
  • [1] ದಾವೂದ್ ನಬಿ ತನ್ನ ಏಕಾಂತ ಆರಾಧನಾ ಕೊಠಡಿಯಲ್ಲಿದ್ದಾಗ ವಧಿಸಲೆಂದು ಶತ್ರುಗಳು ಗೋಡೆ ಹಾರಿ ಒಳನುಗ್ಗಿದಾಗ ಸಹಜವಾಗಿ ಭಯಗೊಂಡರು. ಅಷ್ಟರಲ್ಲಿ ಕಾವಲುಗಾರರು ಅಲ್ಲಿ ತಲುಪಿದಾಗ ಪಟ್ಟು ಬದಲಿಸಿ ಆಡಿನ ಬಗ್ಗೆ ಜಗಳ ನಡೆದ ವಿಷಯ ಹೇಳಿ ತೀರ್ಪು ಕೇಳಿದರು. ನಬಿಯವರು ತೀರ್ಪು ಕೊಟ್ಟರು. ಆದರೆ ಅವರು ಬಂದ ವಿಧಾನದಲ್ಲಿ ಸಿಟ್ಟು ಬಂದಿತ್ತು. ಅವರಿಗೆ ಸೂಕ್ತ ಶಿಕ್ಷೆ ವಿಧಿಸಬೇಕೆಂದು ನಿರ್ಧರಿಸಿದರು. ಆದರೆ ಸ್ವಲ್ಪ ಹೊತ್ತಲ್ಲೇ ಅವರಿಗೆ ಕ್ಷಮೆ ನೀಡಿ ಕಳುಹಿಸಿದರು. ಆದರೆ ತನ್ನ ಸಿಟ್ಟು ಹಾಗೂ ಶಿಕ್ಷೆ ನೀಡುವ ನಿರ್ಧಾರ ತಪ್ಪಾಯಿತು ಎಂದು ತೋರಿದ ನಬಿಯವರು ಅಲ್ಲಾಹನಲ್ಲಿ ಕ್ಷಮೆ ಯಾಚಿಸಿದರು. ಅಲ್ಲಾಹನು ಕ್ಷಮಿಸಿದನು. ಅದಕ್ಕೆ ಶುಕ್ರ್ ಆಗಿ ಅಲ್ಲಾಹನಿಗೆ ಸುಜೂದ್ ಮಾಡಿದರು. ಇದು 21ರಿಂದ 25 ವರೆಗಿನ ಆಯತ್‍ಗಳಲ್ಲಿ ಪ್ರಸ್ತಾಪಿತವಾದ ಘಟನೆಯ ಬಗ್ಗೆ ದಾಖಲಾಗಿರುವ ಹಲವು ವ್ಯಾಖ್ಯಾನಗಳ ಪೈಕಿ ಅತ್ಯಂತ ಸೂಕ್ತವಾದ ವ್ಯಾಖ್ಯಾನ. ಬೇರೆ ಕೆಲವು ವ್ಯಾಖ್ಯಾನಗಳಿವೆ. ಅವುಗಳಲ್ಲಿ ಕೆಲವು ವಿವರಣೆಗಳು ಓರ್ವ ಪ್ರವಾದಿಗೆ ಯೋಗ್ಯವೆನಿಸುವುದಿಲ್ಲ. ಈ ವಿಷಯದಲ್ಲಿ ಇಬ್ನು ಕಸೀರ್ ನೀಡಿದ ಪ್ರಸ್ತಾಪನೆ ಹೀಗಿದೆ; “ವ್ಯಾಖ್ಯಾನಕಾರರು ಇಲ್ಲಿ ಹೇಳುವ ಕೆಲವು ಕಥೆಗಳು ಇಸ್ರಾಈಲಿ ಐತಿಹ್ಯಗಳಿಂದ ಬಂದವುಗಳು. ಅದಕ್ಕೆ ಸ್ವೀಕಾರ ಯೋಗ್ಯವಾದ ಒಂದೇ ಒಂದು ಹದೀಸ್‍ನ ಪುರಾವೆ ಇಲ್ಲ. ಖುರ್‍ಆನಿನಲ್ಲಿ ಬಂದಿರುವಂತೆ ಪಾರಾಯಣ ಮಾಡುವುದು ಹಾಗೂ ನಿಜಸ್ಥಿತಿ ಅಲ್ಲಾಹನಿಗೆ ಮಾತ್ರ ಗೊತ್ತು ಎಂದು ವಿಶ್ವಾಸ ವಿಡುವುದೇ ನಮಗೆ ಸೂಕ್ತವಾದುದು. “ದಾವೂದ್ ನಬಿಯವರ ಬಗ್ಗೆ ಈ ವಿಷಯದಲ್ಲಿ ಪ್ರಚಲಿತವಿರುವ ಕಥೆಗಳನ್ನು ಹೇಳಿದವರಿಗೆ 160 ಚಡಿ ಯೇಟಿನ ಶಿಕ್ಷೆ ವಿಧಿಸುವೆನು. ಪ್ರವಾದಿಗಳ ಮೇಲೆ ಸುಳ್ಳು ಹೇಳುವವರಿಗೆ ತಕ್ಕ ಶಿಕ್ಷೆಯಿದು” ಎಂದು ಅಲಿ ಯವರು ಹೇಳಿರುವುದಾಗಿ ವರದಿಯಾಗಿದೆ.