Kannada Translation

Ayah by Ayah

Tags

Download Links

Kannada Translation translation for Surah Sad — Ayah 33

38:33
رُدُّوهَا عَلَيَّۖ فَطَفِقَ مَسۡحَۢا بِٱلسُّوقِ وَٱلۡأَعۡنَاقِ ٣٣
ಆದ್ದರಿಂದ ಅವುಗಳನ್ನು ನನ್ನ ಬಳಿಗೆ ಮರಳಿ ತನ್ನಿರಿ. ಆಮೇಲೆ ಅವರು ಆ ಕುದುರೆಗಳನ್ನು ಬಲಿದಾನ ನೀಡಿದರು. ಅವುಗಳ ಮೊಣಕಾಲನ್ನು ಕಡಿದರು1.
Footnotes
  • [1] ಇದು ಹಸನುಲ್ ಬಸರಿ ಮತ್ತು ಸುದ್ದೀ ನೀಡಿದ ಅರ್ಥ. ಇದು ಹೆಚ್ಚು ಸ್ಪಷ್ಟ. ಅಂದರೆ ಅಲ್ಲಾಹನಿಗೆ ಸಲ್ಲಿಸಬೇಕಾದ ಆರಾಧನೆಗೆ ಕುದುರೆಗಳು ಅಡ್ಡಿಯಾದುದರಿಂದ ಅವುಗಳನ್ನು ಬಲಿದಾನ ಮಾಡಿದರು ಎಂದರ್ಥ. ಈ ಕಾರಣಕ್ಕಾಗಿ ಅಲ್ಲಾಹು ಅವರಿಗೆ ಅವುಗಳಿಗಿಂತ ಉತ್ತಮವಾದ ಶರವೇಗಕ್ಕೂ ಮಿಗಿಲಾದ ಅತಿರಭಸದ ಗಾಳಿಯನ್ನು ವಾಹನವಾಗಿ ದಯಪಾಲಿಸಿದನು ಎನ್ನಲಾಗಿದೆ.ಆದರೆ ಇಬ್ನು ಜರೀರ್ ಆರಿಸಿದ ಅರ್ಥ ಪ್ರಕಾರ ‘ತಫಿಕ ಮಸ್‍ಹನ್’ ಎಂದರೆ ಕುದುರೆಯ ಮೊಣಕಾಲು ಹಾಗೂ ಕೊರಳುಗಳನ್ನು ಪ್ರೀತಿಯಿಂದ ತಡವಿದರು ಎಂದಾಗಿದೆ. ಮಾಇದಾ ಸೂರಾದ 6ನೇ ಆಯತ್‍ನಲ್ಲಿ ‘ವಮ್ಸಹೂ ಬಿರುಊಸಿಕುಂ’ ಎಂಬ ವಾಕ್ಯವು ಈ ಅರ್ಥಕ್ಕೆ ಬಂದಿದೆ. ಈ ಅಭಿಪ್ರಾಯ ಪ್ರಕಾರ ‘ಅನ್‍ದಿಕ್‍ರಿ ರಬ್ಬಿ’ ಎಂದರೆ ನನ್ನ ಪ್ರಭುವಿನ ಸ್ಮರಣೆಯ ಕಾರಣಕ್ಕೆ ಎಂದಾಗುತ್ತದೆ. ಒಟ್ಟರ್ಥವೇನೆಂದರೆ ನನ್ನ ಪ್ರಭುವಿನ ಸ್ಮರಣೆಗಾಗಿ ಸಂಪತ್ತನ್ನು ಪ್ರೀತಿಸಿದೆ. ಕೊನೆಗೆ ಅಶ್ವಗಳು ಅತಿದೂರ ಸಾಗಿ ಮರೆಯಾದವು. ಆದ್ದರಿಂದ ಆ ಕುದುರೆಗಳನ್ನೂ ನನ್ನ ಬಳಿಗೆ ತನ್ನಿರಿ ಎನ್ನುತ್ತಾ ಸುಲೈಮಾನ್ ನಬಿ ಆ ಕುದುರೆಗಳ ಮೊಣಕಾಲುಗಳನ್ನೂ, ಕೊರಳುಗಳನ್ನೂ ತಡವತೊಡಗಿದರು. ಈ ಅರ್ಥವು ಇಬ್ನು ಅಬ್ಬಾಸ್ ರಿಂದ ವರದಿ ಮಾಡಿದೆ. (ಶರಹುಲ್ ಮವಾಫಿಕ್ 8/299)