Kannada Translation

Ayah by Ayah

Tags

Download Links

Kannada Translation translation for Surah Sad — Ayah 5

38:5
أَجَعَلَ ٱلۡأٓلِهَةَ إِلَٰهٗا وَٰحِدًاۖ إِنَّ هَٰذَا لَشَيۡءٌ عُجَابٞ ٥
ಇವನು ದೇವರುಗಳನ್ನು ಏಕ ದೇವನಾಗಿ ಮಾಡಿ ಬಿಟ್ಟನೇ? ನಿಜಕ್ಕೂ ಇದೊಂದು ಬಹಳ ವಿಚಿತ್ರ ಸಂಗತಿ’1.
Footnotes
  • [1] ಖುರೈಶಿ ಪ್ರಮುಖರು ಪ್ರವಾದಿಯವರ ದೊಡ್ಡಪ್ಪ ಹಾಗೂ ಆಶ್ರಯದಾತರಾಗಿದ್ದ ಅಬೂತಾಲಿಬರ ಬಳಿ ಬಂದು ಮುಹಮ್ಮದರ ಬೋಧನೆಯನ್ನು ನಿಲ್ಲಿಸುವಂತೆ ಆದೇಶ ಕೊಡಬೇಕೆಂದು ಭಿನ್ನವಿಸಿಕೊಂಡರು. ಅಬೂತಾಲಿಬರು ಪ್ರವಾದಿಯವರಲ್ಲಿ ಈ ವಿಷಯ ಹೇಳಿದಾಗ “ಇವರು ಒಂದು ವಾಕ್ಯ ಹೇಳಿದರೆ ಅರಬಿಗಳೂ, ಅನರಬಿಗಳೂ ಇವರಿಗೆ ವಿಧೇಯರಾಗುತ್ತಾರೆ” ಎಂದರು ಪ್ರವಾದಿವರ್ಯರು. ಆಗ ಖುರೈಶಿ ಪ್ರಮುಖರು ಬಹಳ ಕುತೂಹಲದಿಂದ ಆ ವಾಕ್ಯವೇನು? ಎಂದು ಕೇಳಿದಾಗ; ‘ಲಾ ಇಲಾಹ ಇಲ್ಲಲ್ಲಾಹ್’ ಎಂಬ ವಾಕ್ಯ ಎಂದರು ಪ್ರವಾದಿವರ್ಯ ರು, ಆಗ ಕುಪಿತರಾದ ಖುರೈಶರು ನೀನು ಹಲವು ದೇವರುಗಳನ್ನು ಒಂದೇ ದೇವನಾಗಿ ಮಾಡುತ್ತೀಯೆ ಎಂದೆಲ್ಲ ಹೇಳಿ ಆಕ್ಷೇಪಿಸಿದರು. ಹಲವು ದೇವರಿದ್ದೂ ಇಷ್ಟಾರ್ಥ ನೆರವೇರುವುದಿಲ್ಲ. ಇನ್ನು ದೇವ ಒಬ್ಬನೇ ಆದರೆ ಗತಿ ಏನು ಎಂದಾಗಿತ್ತು ಅವರ ವಾದ ಸರಣಿ. ಇಲ್ಲಿನ 5ರಿಂದ 8ರ ವರೆಗಿನ ಆಯತ್‍ಗಳು ಈ ಘಟನೆಗಳನ್ನು ಪ್ರತಿಪಾದಿಸುತ್ತಿವೆ.