Kannada Translation

Ayah by Ayah

Tags

Download Links

Kannada Translation translation for Surah Az-Zumar — Ayah 15

39:15
فَٱعۡبُدُواْ مَا شِئۡتُم مِّن دُونِهِۦۗ قُلۡ إِنَّ ٱلۡخَٰسِرِينَ ٱلَّذِينَ خَسِرُوٓاْ أَنفُسَهُمۡ وَأَهۡلِيهِمۡ يَوۡمَ ٱلۡقِيَٰمَةِۗ أَلَا ذَٰلِكَ هُوَ ٱلۡخُسۡرَانُ ٱلۡمُبِينُ ١٥
ನೀವು ಅವನ ಹೊರತು ನೀವಿಚ್ಚಿಸುವುದನ್ನು ಆರಾಧಿಸಿರಿ”1. ಹೇಳಿರಿ; “ಪುನರುತ್ಥಾನ ದಿನ ತಮ್ಮನ್ನೂ ತಮ್ಮ ಕುಟುಂಬದವರನ್ನೂ2 ನಷ್ಟ ಕ್ಕೀಡು ಮಾಡಿದವರೇ ನಿಜವಾದ ನಷ್ಟವಂತರು”. ತಿಳಿಯಿರಿ. ಇದೇ ಸ್ಪಷ್ಟವಾದ ನಷ್ಟ.
Footnotes
  • [1] ಇದು ಎಚ್ಚರಿಕೆಯ ಮಾತು. “ನೀನು ಬಂದು ನನಗೆ ಹೊಡೆದು ನೋಡು” ಮುಂತಾದ ಮಾತುಗಳನ್ನು ಶತ್ರುವಿಗೆ ಶತ್ರು ಹೇಳುವಂತಹ ತಾಕೀತಿನ ಶೈಲಿ ಇದು.
  • [2] ಇಲ್ಲಿನ ಕುಟುಂಬ ಎಂಬುದರ ಉದ್ದೇಶ ಸ್ವರ್ಗದಲ್ಲಿ ಪ್ರತಿಯೊಬ್ಬರಿಗೂ ಸಿದ್ಧಪಡಿಸಿ ಕಾದಿರಿಸಲಾದ ಕುಟುಂಬ ಎಂದರ್ಥ. ಪ್ರತಿಯೊಬ್ಬರ ಹೆಸರಲ್ಲೂ ಸ್ವರ್ಗದಲ್ಲೂ ನರಕದಲ್ಲೂ ಒಂದೊಂದು ನಿರ್ದಿಷ್ಟ ತಾಣವನ್ನು ಕಾದಿರಿಸಲಾಗಿರುವುದು. ಭಕ್ತನಾಗಿ ತೀರಿಕೊಂಡರೆ ನರಕದ ಜಾಗವನ್ನು ಅವನ ಹೆಸರಿನಿಂದ ಅಳಿಸಿ ಸ್ವರ್ಗದ ನಿಗದಿತ ಜಾಗಕ್ಕೆ ಅವನನ್ನು ಕಳುಹಿಸಲಾಗುವುದು. ದುಷ್ಟನಾಗಿ ತೀರಿಕೊಂಡರೆ ನರಕಕ್ಕೆ ಕಳುಹಿಸಲಾಗುವುದು. ಆಗ ಸ್ವರ್ಗದಲ್ಲಿ ಅವನ ಹೆಸರಿಗೆ ಕಾದಿರಿಸಲಾಗಿದ್ದ ತಾಣ ಮತ್ತು ಅಲ್ಲಿನ ಅಪ್ಸರೆಯರು ಹಾಗೂ ಸೇವಕರನ್ನೊಳಗೊಂಡ ಕುಟುಂಬವು ಅವನಿಗೆ ನಷ್ಟವಾಗುವುದು.