Kannada Translation

Ayah by Ayah

Tags

Download Links

Kannada Translation translation for Surah Az-Zumar — Ayah 3

39:3
أَلَا لِلَّهِ ٱلدِّينُ ٱلۡخَالِصُۚ وَٱلَّذِينَ ٱتَّخَذُواْ مِن دُونِهِۦٓ أَوۡلِيَآءَ مَا نَعۡبُدُهُمۡ إِلَّا لِيُقَرِّبُونَآ إِلَى ٱللَّهِ زُلۡفَىٰٓ إِنَّ ٱللَّهَ يَحۡكُمُ بَيۡنَهُمۡ فِي مَا هُمۡ فِيهِ يَخۡتَلِفُونَۗ إِنَّ ٱللَّهَ لَا يَهۡدِي مَنۡ هُوَ كَٰذِبٞ كَفَّارٞ ٣
ತಿಳಿಯಿರಿ, ನಿಷ್ಕಳಂಕವಾದ ವಿಧೇಯತ್ವವು ಕೇವಲ ಅಲ್ಲಾಹನ ಹಕ್ಕಾಗಿದೆ. ಅವನ ಹೊರತು ಇತರರನ್ನು ಆರಾಧ್ಯರನ್ನಾಗಿ ಮಾಡಿಕೊಂಡವರು “ಅವರು ನಮ್ಮನ್ನು ಅಲ್ಲಾಹನಿಗೆ ಹತ್ತಿರಗೊಳಿಸಲಿಕ್ಕಾಗಿ ಮಾತ್ರ ನಾವು ಅವರನ್ನು ಆರಾಧಿಸುತ್ತಿದ್ದೇವೆ” ಎಂದು ಹೇಳುತ್ತಾರೆ1. ಅವರು ಭಿನ್ನತೆ ತೋರಿದ ವಿಷಯದಲ್ಲಿ ಅಲ್ಲಾಹು ಅವರ ನಡುವೆ ತೀರ್ಮಾನ ಮಾಡುವನು. ಸುಳ್ಳುಗಾರನೂ, ಕೃತಘ್ನನೂ ಆಗಿರುವಾತನಿಗೆ ಅಲ್ಲಾಹನು ಖಂಡಿತ ಸತ್ಪಥ ನೀಡುವುದಿಲ್ಲ.
Footnotes
  • [1] ``ಆಮಿರ್, ಕಿನಾನಾ ಹಾಗೂ ಬನೂ ಸಲಮಾ ಎಂಬ ಮೂರು ಗೋತ್ರದವರು ವಿಗ್ರಹಗಳಿಗೆ ಆರಾಧಿಸುತ್ತಿದ್ದರಲ್ಲದೆ ಮಲಾಇಕತ್ ಅಲ್ಲಾಹನ ಹೆಣ್ಮಕ್ಕಳು ಎಂದು ನಂಬಿದ್ದರು. ವಿಗ್ರಹಗಳಿಗೆ ನಮ್ಮ ಆರಾಧನೆಯು ದೊಡ್ಡ ದೇವನ ಬಳಿಗೆ ತಲುಪಿಸುವ ಸಲುವಾಗಿ ಎಂದವರು ಹೇಳುತ್ತಿದ್ದರು. ಅವರನ್ನು ಖಂಡಿಸಿ ಈ ಆಯತ್ ಬಂದಿರುತ್ತದೆ’’ ಎಂದು ಇಮಾಮ್ ಸುಯೂಥೀ ಯವರು ಈ ಆಯತಿನ ವ್ಯಾಖ್ಯಾನದಲ್ಲಿ ಹೇಳಿದ್ದಾರೆ. (ಅದ್ದುರ್ರುಲ್ ಮನ್‍ಸೂರ್ 7-211) ``ಐಹಿಕ ಸವಲತ್ತುಗಳನ್ನು ದೊಡ್ಡ ದೇವನಿಂದ ಈ ಪುಟ್ಟ ದೇವರುಗಳು ನಮಗೆ ಒದಗಿಸಿಕೊಡುತ್ತವೆ ಎಂದವರು ನಂಬಿದ್ದರು. ಪರಲೋಕದಲ್ಲಿ ನೆರವು ಪಡೆಯುವ ಇರಾದೆ ಅವರಿಗೆ ಇರಲಿಲ್ಲ. ಯಾಕೆಂದರೆ ಪರಲೋಕವನ್ನು ಅವರು ನಿಷೇಧಿಸುತ್ತಿದ್ದರು. (ಇಬ್ನುಕಸೀರ್ 4 : 46) (ರಾಝಿ : 26 - 241) ಇಮಾಮ್ ರಾಝಿ ಬರೆಯುತ್ತಾರೆ ‘ಅಲ್ಲಾಹನಿಗೆ ಹತ್ತಿರಗೊಳಿಸಲಿಕ್ಕಾಗಿ ಮಾತ್ರ ನಾವು ಅವರನ್ನು ಆರಾಧಿಸುತ್ತಿದ್ದೇವೆ’ ಎಂಬ ಬಹುದೇವ ವಿಶ್ವಾಸಿಗಳ ಮಾತಿನಲ್ಲಿರುವ ‘ಅವರು’ ಎಂಬುದರ ಉದ್ದೇಶ ಅಲ್ಲಾಹನ ಹೊರತು ಪೂಜಿಸಲ್ಪಡುವ ಸಕಲ ವಸ್ತುಗಳು ಎಂದಾಗಿದೆ. ಈ ಪೂಜ್ಯ ದೈವಗಳು ಎರಡು ವಿಧ. ಬುದ್ಧಿಯುಳ್ಳವರು, ಬುದ್ಧಿ ಇಲ್ಲದವರು, ಒಂದು ವಿಭಾಗವು ಯೇಶು, ಉಝೈರ್, ಮಲಕ್‍ಗಳನ್ನು ಪೂಜಿಸುವರು. ಈ ದೈವಗಳು ಬುದ್ಧಿಯುಳ್ಳವರೇ, ಬಹುದೇವಾರಾಧಕರಲ್ಲಿ ಹೆಚ್ಚಿನವರು ಇಂದ್ರ, ಚಂದ್ರ, ನಕ್ಷತ್ರಗಳನ್ನು ಪೂಜಿಸುವವÀರು. ಅವು ಬುದ್ಧಿಯಿರುವ, ಮಾತಾಡುವ ಆಕಾಶ ಜೀವಿಗಳು ಎಂದಾಗಿತ್ತು. ಅವರ ವಿಶ್ವಾಸ. ಅಂದಮೇಲೆ ಈ ದೈವಗಳೂ ಬುದ್ಧಿಯುಳ್ಳವರೇ. ಜೀವ ಹಾಗೂ ಬುದ್ಧಿಯಿಲ್ಲದ ದೈವಗಳು ಎಂದರೆ ವಿಗ್ರಹಗಳು. ‘ಅಲ್ಲಾಹನಿಗೆ ಹತ್ತಿರ ಗೊಳಿಸಲಿಕ್ಕಾಗಿ ನಮ್ಮ ಆರಾಧನೆ ಎಂಬ ಅವರ ನ್ಯಾಯವಾದವು. ಬುದ್ಧಿಯಿರುವ ದೈವಗಳೊಂದಿಗೆ ಮಾತ್ರ ಹೊಂದಿಕೊಳ್ಳುತ್ತದೆ. ಬುದ್ಧಿಯಿಲ್ಲದ ವಿಗ್ರಹ ದೈವಗಳಿಗೆ ಇದು ಹೊಂದಿಕೊಳ್ಳುವುದಿಲ್ಲ. ಇದು ಬಹಳ ಸ್ಪಷ್ಟ. ಒಂದನೆಯದಾಗಿ ‘ಅವರು’ ಎಂಬ ಪ್ರಯೋಗವೇ ವಿಗ್ರಹಕ್ಕೆ ಸಂಗತವಲ್ಲ. ಬುದ್ಧಿಯುಳ್ಳವರ ಕುರಿತಾದ ಪ್ರಯೋಗವದು. ಎರಡನೆಯದಾಗಿ ಯೇಶು, ಉಝೈರ್, ಮಲಕ್‍ಗಳು ಈ ಬುದ್ಧಿಯಿರುವ ದೈವಗಳ ಬಗ್ಗೆ ಅಲ್ಲಾಹನ ಬಳಿ ಶಿಫಾರಸ್ಸು ಮಾಡುವರೆಂದು ನಂಬುವುದು ವಿದೂರವಲ್ಲ. ಅದೇ ವೇಳೆ ನಿರ್ಜೀವ ವಸ್ತುಗಳು ಹಾಗೂ ವಿಗ್ರಹಗಳ ಬಗ್ಗೆ ಅವು ಅಲ್ಲಾಹನ ಕಡೆಗೆ ನಿಕಟಗೊಳಿಸುತ್ತದೆಂಬ ವಿಶ್ವಾಸವು ವಿವೇಕವಿರುವ ಯಾರಿಂದಲೂ ವಿದೂರ ಮಾತು. ಇದರ ಪ್ರಕಾರ ಈ ವಾಕ್ಯದ ಸಾರ ವಿಗ್ರಹಗಳು ಅಲ್ಲಾಹನೆಡೆಗೆ ನಿಕಟಗೊಳಿಸುತ್ತದೆ ಎಂದಲ್ಲ. ಈ ವಿಗ್ರಹ ಪೂಜೆಯು ಅಲ್ಲಾಹನ ಸಾಮಿಪ್ಯವನ್ನು ಸಾಧಿಸುತ್ತದೆ ಎಂದಾಗುತ್ತದೆ. ಆದರೆ ವಿಗ್ರಹಗಳು ಕೇವಲ ಮರ, ಮತ್ತು ಕಲ್ಲುಗಳು ಎಂಬ ನೆಲೆಯಲ್ಲಿ ಪೂಜಿಸಲ್ಪಡುತ್ತಿಲ್ಲ. ಅವು ನಕ್ಷತ್ರಗಳು, ಆಕಾಶಾತ್ಮಗಳು, ಗತಿಸಿದ ಸಜ್ಜನರು, ಮುಂತಾದವರ ಪ್ರತಿಮೆಗಳಾಗಿದ್ದು, ಅವುಗಳನ್ನು ಪೂಜಿಸುವುದರ ಉದ್ದೇಶ ಅವು ಪ್ರತಿನಿಧಿಸುವ ಸಾಕ್ಷಾತ್ ದೈವಗಳಿಗೆ ಸಲ್ಲುವ ಪೂಜೆ ಎಂಬ ನೆಲೆಯಲ್ಲಾಗಿದೆ ಎಂದು ಸಮರ್ಥಿಸಲು ಸಾದ್ಯವೆನ್ನಿ. ಹಾಗಾದರೆ ವಿಗ್ರಹ ಪೂಜಕರು ಹೇಳಿದ ಈ ಮಾತಿನ ಅರ್ಥವೇನೆಂದರೆ ``ದೊಡ್ಡ ದೇವನು ಮನುಷ್ಯನ ಆರಾಧನೆಗೆ ಅತೀತವಾಗಿದ್ದು ಗ್ರಹಗಳು, ಆಕಾಶದ ಆತ್ಮಗಳು ಮುಂತಾದವುಗಳಿಗೆ ಆರಾಧಿಸುವುದೇ ಮನುಷ್ಯನಿಗೆ ಯೋಗ್ಯವಾದುದು. ಮನುಷ್ಯನಿಂದ ಆರಾಧಿಸಲ್ಪಡುವ ಈ ಪ್ರತಿಭಾಸಗಳು ದೊಡ್ಡ ದೇವನಿಗೆ ಆರಾಧಿಸುತ್ತವೆ ಎಂದಾಗಿದೆ. ಇದರಿಂದೆಲ್ಲ ಸ್ಪಷ್ಟವಾಗುವುದೇನೆಂದರೆ ಮಕ್ಕಾ ಮುಶ್ರಿಕರಲ್ಲಿ ಕೆಲವರು, ಅಲ್ಲಾಹನ (ದೊಡ್ಡ ದೇವನ) ಕೆಳಗಡೆ ಕೆಲವು ಉಪದೇವರುಗಳಿದ್ದು ಅವುಗಳಿಗೆ ನಾವು ಆರಾಧಿಸಬೇಕು ಎಂದು ವಾದಿಸುವವರಾಗಿದ್ದರು. ಅಲ್ಲಾಹು ಅಂದರೆ ಅವರ ನಂಬಿಕೆ ಪ್ರಕಾರ ದೇವರುಗಳ ದೇವ. ರಾಜ ಮತ್ತು ಮಂತ್ರಿಗಳ ಪರಿವಾರವಿದ್ದಂತೆ. ಸಣ್ಣ ಪುಟ್ಟ ದೇವರುಗಳಿಗೆ ನಾವು ಪೂಜಿಸಿದರೆ ಆ ದೇವರುಗಳು ದೊಡ್ಡ ದೇವನಿಗೆ ಪೂಜಿಸಿ ನಮ್ಮ ಕಾರ್ಯ ಸಾಧಿಸಿಕೊಡುತ್ತವೆ ಎಂದಾಗಿತ್ತು ಅವರ ವಿಶ್ವಾಸ. ಅಂಥ ಮುಶ್ರಿಕರು ಅವರ ವಿಗ್ರಹ ಹಾಗೂ ಕಪೋಲ ಕಲ್ಪಿತ ``ದೇವರು’’ಗಳಿಗೆ ಆರಾಧಿಸುತ್ತಿದ್ದ ವಿಷಯವು ಸತ್ಯವಿಶ್ವಾಸಿಗಳ ತವಸ್ಸುಲ್ ಅಥವಾ ಸಹಾಯಾಪೇಕ್ಷೆಗೆ ಅನ್ವಯವಾಗುವುದಿಲ್ಲ. ಸಹಾಯಾಪೇಕ್ಷೆ ಬಹುದೇವಾರಾಧನೆಯಲ್ಲ. ಅಲ್ಲಾಹನ ಬಗ್ಗೆ ಖುರ್‍ಆನ್ ಹದೀಸ್‍ಗಳಲ್ಲಿ ತಿಳಿಸಲಾದ ರೀತಿಯಲ್ಲಿ ವಿಶ್ವಾಸವಿಟ್ಟು ಅವನ ಪರಿಶುದ್ಧತೆಗೆ, ಅವನ ಏಕತ್ವಕ್ಕೆ ವಿರೋಧವಾಗದ ನಂಬಿಕೆಗಳನ್ನು ಇಟ್ಟುಕೊಳ್ಳದೆ ಅವನ ಬಳಿ ಸ್ಥಾನ ಪಡೆದ ಅವನ ದಾಸರಾದ ಮಹಾತ್ಮರನ್ನು ತವಸ್ಸುಲ್ ಮಾಡುವ ಕ್ರಮ ಇದರಿಂದ ಹೊರತಾಗಿದೆ. ಇಲ್ಲಿ ಮುಶ್ರಿಕರು ಹೇಳಿದ ನಅïಬುದುಹುಮ್, ಅರ್ಥಾತ್ ನಾವು ಆರಾಧಿಸುವುದು ಎಂಬ ಮಾತು ಗಮನಾರ್ಹ. ಇಲ್ಲಿ ಇದಕ್ಕೆ ಬದಲಾಗಿ ನತÀವಸ್ಸಲುಬಿಹಿಮ್ (ನಾವು ಅವರನ್ನು ತವಸ್ಸುಲ್ ಮಾಡುವುದು) ಎನ್ನಲಾಗಿಲ್ಲ. ತವಸ್ಸುಲ್ ಬೇರೆ, ಇಬಾದತ್ ಬೇರೆ ಎನ್ನುವುದು ಇದರಿಂದ ವ್ಯಕ್ತ. ಏಕೆಂದರೆ ಮುಶ್ರಿಕರು ಅಲ್ಲಾಹೇತರನ್ನು ಆರಾಧಿಸುವ ಮೂಲಕವೇ ಕುಫ್ರ್ ಮಾಡಿರುವರು. ಕುಫ್ರ್‍ನ ಮೂಲಕ ದೇವಸಾಮೀಪ್ಯ ಅಸಂಭವ. ಮಲಕ್‍ಗಳು, ಉಝೈರ್, ಈಸಾನಬಿ ಮುಂತಾದವರು ಅವರನ್ನು ಇಲಾಹ್ ಎನ್ನಲಾಗಿಲ್ಲ. ತವಸ್ಸುಲ್ ಬೇರೆ, ಇಬಾದತ್ ಬೇರೆ ಎನ್ನುವುದು ಇದರಿಂದ ವ್ಯಕ್ತ. ಏಕೆಂದರೆ ಮುಶ್ರಿಕರು ಅಲ್ಲಾಹೇತರನ್ನು ಆರಾಧಿಸುವ ಮೂಲಕವೇ ಕುಫ್ರ್ ಮಾಡಿರುವರು. ಕುಫ್ರ್‍ನ ಮೂಲಕ ದೇವಸಾಮೀಪ್ಯ ಅಸಂಭವ. ಮಲಕ್‍ಗಳು, ಉಝೈರ್, ಈಸಾನಬಿ ಮುಂತಾದವರು ಅವರನ್ನು ಇಲಾಹ್ ಮಾಡಿದವರಿಗೆ ಶಿಫಾರಸ್ಸು ಮಾಡಲಾರರು. ಯಾಕೆಂದರೆ ಇಲಾಹ್ ಮಾಡಿದವರು ಮುಶ್ರಿಕರು. ಅವರಿಗೆ ಅಲ್ಲಾಹನ ತೃಪ್ತಿ ಇರುವುದಿಲ್ಲ. ಶಫಾಅತ್ ಲಭ್ಯವಾಗುವುದು ತೃಪ್ತಿಪಾತ್ರರಿಗೆ ಮಾತ್ರ ಎಂದು 21:27ರಲ್ಲಿ ಅಲ್ಲಾಹು ಹೇಳಿರುತ್ತಾನೆ. ಅಲ್ಲದೆ 20:109ರಲ್ಲಿ ಅಲ್ಲಾಹನು ತೃಪ್ತಿಪಡುವ ಮಾತು ಹೇಳಿದವರಿಗೆ ಮಾತ್ರ ಶಫಾಅತ್ ಪ್ರಯೋಜನವಾಗುವುದು ಎಂದಿದೆ. ತೌಹೀದ್‍ನ ವಚನವಾಗಿದೆ ಅಲ್ಲಾಹು ತೃಪ್ತಿ ಪಟ್ಟ ವಚನ. ಅದನ್ನು ಅನುಸರಿಸಿ ಮುಸ್ಲಿಮರಾಗಿ ತೀರಿಹೋದವರಿಗೆ ಮಾತ್ರವೇ ಮಹಾತ್ಮರ ಶಫಾಅತ್ ಲಭ್ಯ.