Kannada Translation

Ayah by Ayah

Tags

Download Links

Kannada Translation translation for Surah Az-Zumar — Ayah 6

39:6
خَلَقَكُم مِّن نَّفۡسٖ وَٰحِدَةٖ ثُمَّ جَعَلَ مِنۡهَا زَوۡجَهَا وَأَنزَلَ لَكُم مِّنَ ٱلۡأَنۡعَٰمِ ثَمَٰنِيَةَ أَزۡوَٰجٖۚ يَخۡلُقُكُمۡ فِي بُطُونِ أُمَّهَٰتِكُمۡ خَلۡقٗا مِّنۢ بَعۡدِ خَلۡقٖ فِي ظُلُمَٰتٖ ثَلَٰثٖۚ ذَٰلِكُمُ ٱللَّهُ رَبُّكُمۡ لَهُ ٱلۡمُلۡكُۖ لَآ إِلَٰهَ إِلَّا هُوَۖ فَأَنَّىٰ تُصۡرَفُونَ ٦
ನಿಮ್ಮನ್ನು ಒಂದೇ ಒಂದು ದೇಹದಿಂದ ಅವನು ಸೃಷ್ಟಿಸಿದನು. ತರುವಾಯ ಆ ದೇಹದಿಂದ ಅದರ ಸಂಗಾತಿಯನ್ನು ಅವನು ಸೃಷ್ಟಿಸಿದನು. ಜಾನು ವಾರುಗಳಿಂದ ಎಂಟು (ಗಂಡು-ಹೆಣ್ಣು) ಜೋಡಿಗಳನ್ನು1 ಅವನು ನಿಮಗಾಗಿ ಒದಗಿಸಿದನು. ನಿಮ್ಮ ಮಾತೆಯರ ಉದರಗಳಲ್ಲಿ ಸೃಷ್ಟಿಯ ನಂತರ2 ಮೂರು ರೀತಿಯ ಕತ್ತಲುಗಳೊಳಗೆ3 ನಿಮ್ಮನ್ನು ಅವನು ಸೃಷ್ಟಿಸುತ್ತಾನೆ. ಅಂಥವನೇ ನಿಮ್ಮ ಪಾಲಕ ಪ್ರಭುವಾದ ಅಲ್ಲಾಹು. ಪ್ರಭುತ್ವವು ಅವನಿಗೇ ಸೇರಿದೆ. ಅವನ ಹೊರತು ಬೇರೆ ಆರಾಧ್ಯನಿಲ್ಲ. ಹೀಗಿರುವಾಗ ನಿಮ್ಮನ್ನು ಬೇರೊಬ್ಬನ ಆರಾಧನೆಗೆ ಹೇಗೆ ತಿರುಗಿಸಲಾಗುತ್ತಿದೆ ?
Footnotes
  • [1] ಎಂಟು ತರ ಜೋಡಿಗಳು ಎಂಬುದರ ಉದ್ದೇಶ ಎರಡು ವಿಧ ಆಡುಗಳು, ಒಂಟೆ ಹಾಗೂ ಎತ್ತು ವರ್ಗ ಇವು ಗಂಡು-ಹೆಣ್ಣು, ಸೇರಿದಾಗ ಎಂಟಾಗುತ್ತದೆ.
  • [2] ಸೃಷ್ಟಿಯ ನಂತರ ಸೃಷ್ಟಿ ಅಂದರೆ ವೀರ್ಯ, ರಕ್ತಪಿಂಡ, ಮಾಂಸಗಡ್ಡೆ, ಪೂರ್ಣಶಿಶು ಎಂಬ ಹಂತಗಳು.
  • [3] ಉದರ, ಗರ್ಭಕೋಶ ಹಾಗೂ ಶಿಶುವಿನ ಮೇಲಿರುವ ತೆಳುವಾದ ಪೊರೆಯ ಒಳಗೆ ಶಿಶುವಿನ ಸೃಷ್ಟಿಕಾರ್ಯ ನಡೆಯುತ್ತದೆ. ಮೂರು ಇರುಳುಗಳೊಳಗೆ ಎಂದಿರುವುದರ ತಾತ್ಪರ್ಯವಿದು.