Kannada Translation

Ayah by Ayah

Tags

Download Links

Kannada Translation translation for Surah Az-Zumar — Ayah 67

39:67
وَمَا قَدَرُواْ ٱللَّهَ حَقَّ قَدۡرِهِۦ وَٱلۡأَرۡضُ جَمِيعٗا قَبۡضَتُهُۥ يَوۡمَ ٱلۡقِيَٰمَةِ وَٱلسَّمَٰوَٰتُ مَطۡوِيَّٰتُۢ بِيَمِينِهِۦۚ سُبۡحَٰنَهُۥ وَتَعَٰلَىٰ عَمَّا يُشۡرِكُونَ ٦٧
ಇವರು ಅಲ್ಲಾಹನನ್ನು ಗೌರವಿಸಬೇಕಾದ ರೀತಿಯಲ್ಲಿ ಗೌರವಿಸಲಿಲ್ಲ. ಪುನರುತ್ಥಾನ ದಿನ ಇಡೀ ಭೂಮಿಯು ಅವನ ಹಿಡಿತದಲ್ಲಿರುವುದು. ಆಕಾಶಗಳು ಅವನ ಶಕ್ತಿಯಲ್ಲಿ ಸುತ್ತಿಕೊಂಡಿರುವವು1. ಇವರು ಎಸಗುತ್ತಿರುವ ಬಹುದೇವಾರಾಧನೆಯಿಂದ ಅವನು ಪಾವನನೂ ಪರಮೋ ನ್ನತನೂ ಆಗಿರುತ್ತಾನೆ.
Footnotes
  • [1] ಭೂಮ್ಯಾಕಾಶಗಳು ಅವನ ಹಿಡಿತದಲ್ಲಿ ಸುರುಟಲ್ಪಟ್ಟಿವೆ ಎಂಬ ಪ್ರಯೋಗ ಅಲ್ಲಾಹನ ಅನೂಹ್ಯವಾದ ಪ್ರಚಂಡ ಶಕ್ತಿಯ ದ್ಯೋತಕ. ಪ್ರವಾದಿ ಹೀಗೆ ಹೇಳಿರುವರು; ‘ಅಲ್ಲಾಹನು ಭೂಮಿಯನ್ನು ಹಿಡಿಯುವನು. ಆಕಾಶವನ್ನು ಬಲಕೈಯಲ್ಲಿ ಸುತ್ತಿಕೊಳ್ಳುವನು. ನಂತರ ಹೀಗೆ ಹೇಳುವನು; ‘ನಾನು ಪರಮ ಸಾಮ್ರಾಟ. ಭೂಮಿಯ ಸಾಮ್ರಾಟರೆಲ್ಲಿ?’ (ಬುಖಾರಿ, ಮುಸ್ಲಿಂ) ಇಂಥದೇ ಅರ್ಥದ ಅನೇಕ ಹದೀಸ್‍ಗಳು ಬಂದಿವೆ. ಈ ಸೂಕ್ತದಲ್ಲಿ ಹೇಳಲಾದ ‘ಕಬ್‍ಳತ್’ ಎಂಬ ಪ್ರಯೋಗವನ್ನು ಅದರ ಪದಾರ್ಥ ಪ್ರಕಾರ ವ್ಯಾಖ್ಯಾನಿಸುವುದು. ಅಲ್ಲಾಹನಿಗೆ ಕೈ ಕಾಲುಗಳಾಗಲಿ ಅಂಗಾಂಗಗಳಾಗಲಿ ಇಲ್ಲವೆಂಬ ಬೌದ್ಧಿಕ ಪುರಾವೆಗಳಿಗೆ ವಿರುದ್ಧವಾಗಿದೆ. ಆದ್ದರಿಂದ ಆಕಾಶ-ಭೂಮಿಗಳನ್ನು ಅಲ್ಲಾಹನು ಹಿಡಿತದಲ್ಲಿ ಬಿಗಿದುಕೊಂಡಿದ್ದಾನೆ. ಎಂದರೆ ಅವುಗಳನ್ನು ಅವನ ನಿಯಂತ್ರಣ ಹಾಗೂ ಅಧಿಪತ್ಯದಲ್ಲಿ ಕೆಳಗೆ ತರುತ್ತಾನೆ ಎಂದು ಅರ್ಥೈಸಿಕೊಳ್ಳುವುದು ಅನಿವಾರ್ಯವಾಗುತ್ತದೆ. (ಗರಾಯಿ ಬುಲ್ ಕುರ್‍ಆನ್) ಪರಮಶಕ್ತನಾದ ಅಲ್ಲಾಹನಿಗೆ ಆರಾಧಿಸುವುದಕ್ಕೆ ಬದಲಾಗಿ ವಿಗ್ರಹಗಳಿಗೋ ಕಲ್ಪಿತ ದೇವರುಗಳಿಗೋ ಆರಾಧಿಸುತ್ತಿರುವವರು ನಿಜಕ್ಕೂ ಅಲ್ಲಾಹನಿಗೆ ಸಲ್ಲಬೇಕಾದ ಗೌರವವನ್ನು ನೀಡಿಲ್ಲ. ಸರ್ವಾಧಿಪತಿಯಾದ ಅಲ್ಲಾಹನಿಗೇ ಸರ್ವ ಅಧಿಕಾರಗಳೂ ಇರುವ ಸ್ಥಿತಿಯಲ್ಲಿ ಇತರ ಕಲ್ಪಿತ ದೇವರುಗಳಿಂದ ಏನೂ ಸಾಧ್ಯವಿಲ್ಲ. ಅರಬ್ ಮುಶ್ರಿಕರು ಅಲ್ಲಾಹನಲ್ಲಿ ಪರಿಪೂರ್ಣ ವಿಶ್ವಾಸವಿಟ್ಟವರಾಗಿರಲಿಲ್ಲವೆಂದು ಇದರಿಂದ ವ್ಯಕ್ತ. ಅವರು ಅಲ್ಲಾಹನನ್ನು ಅರಿಯಬೇಕಾದ ಕ್ರಮದಲ್ಲಿ ಅರಿತಿಲ್ಲವೆನ್ನುವುದೇ ಅದಕ್ಕೆ ಕಾರಣ.