Kannada Translation

Ayah by Ayah

Tags

Download Links

Kannada Translation translation for Surah Ghafir — Ayah 46

40:46
ٱلنَّارُ يُعۡرَضُونَ عَلَيۡهَا غُدُوّٗا وَعَشِيّٗاۚ وَيَوۡمَ تَقُومُ ٱلسَّاعَةُ أَدۡخِلُوٓاْ ءَالَ فِرۡعَوۡنَ أَشَدَّ ٱلۡعَذَابِ ٤٦
ಬೆಳಗು ಬೈಗುಗಳಲ್ಲಿ ಅವರನ್ನು ನರಕಾಗ್ನಿಯ ಮುಂದೆ ಪ್ರದರ್ಶಿಸಲಾಗುವುದು. ಅಂತಿಮ ಘಳಿಗೆ ಜಾರಿಯಾಗುವ ದಿನ ಫಿರ್‍ಔನನ ಜನರನ್ನು ಅತ್ಯುಗ್ರ ಶಿಕ್ಷೆಯಲ್ಲಿ ಪ್ರವೇಶಗೊಳಿಸಿರೆಂದು ಅಪ್ಪಣೆಯಾಗುವುದು1.
Footnotes
  • [1] ಇಲ್ಲಿನ ಉದ್ದೇಶ ಫಿರ್‍ಔನ್ ಮತ್ತು ಅವನ ಪರಿವಾರದವರಿಗೆ ದೊರೆಯುವ ಶಾಶ್ವತ ಶಿಕ್ಷೆಯ ಬಗ್ಗೆಯಾಗಿದೆ. ಸಂಜೆ ಮುಂಜಾನೆ ನರಕಕ್ಕೆ ಅವರನ್ನು ಪ್ರದರ್ಶಿಸುವ ರೂಪ ನಮಗೆ ಅಜ್ಞಾತ. ಅದು ನಮ್ಮ ಪಾಲಿಗೆ ಅದೃಶ್ಯ ಕಾರ್ಯ. ಈ ಪ್ರದರ್ಶನವು ಅವರ ಮರಣದ ನಂತರ ಹಾಗೂ ಪುನರುತ್ಥಾನದ ದಿನದ ನಡುವಿನ ಅವಧಿಯಲ್ಲಿ ಎಂಬುದು ‘ಪುನರುತ್ಥಾನದಂದು ಅವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು' ಎಂಬ ಮಾತಿನಿಂದ ಸ್ಪಷ್ಟ. ಇಹದ ಪಾಪ-ಪುಣ್ಯಗಳ ಪೂರ್ಣಫಲವನ್ನು ಅನುಭವಿಸುವುದು ಪುನರುತ್ಥಾನದಲ್ಲೂ ಮರಣಾನಂತರ ಆ ದಿನದ ವರೆಗಿನ ಬರ್ಝಖಿ ಘಟ್ಟದಲ್ಲಿ ಅವರವರ ಕರ್ಮಫಲದ ಒಂದಂಶವು ಅನುಭವಕ್ಕೆ ಬರುವುದು ಎಂದು ಇದರಿಂದ ಸ್ಪಷ್ಟ. ಕಬರ್‍ನಲ್ಲಿ ಸುಖ-ದುಃಖಗಳಿವೆ ಎಂಬುದಕ್ಕೆ ಈ ಆಯತ್ ಒಂದು ಪುರಾವೆ. ಪ್ರಬಲ ಹದೀಸ್‍ಗಳು ಇದಕ್ಕೆ ಪುಷ್ಟಿ ನೀಡುತ್ತವೆ.