Kannada Translation

Ayah by Ayah

Tags

Download Links

Kannada Translation translation for Surah Fussilat — Ayah 31

41:31
نَحۡنُ أَوۡلِيَآؤُكُمۡ فِي ٱلۡحَيَوٰةِ ٱلدُّنۡيَا وَفِي ٱلۡأٓخِرَةِۖ وَلَكُمۡ فِيهَا مَا تَشۡتَهِيٓ أَنفُسُكُمۡ وَلَكُمۡ فِيهَا مَا تَدَّعُونَ ٣١
ನಾವು ಇಹ ಜೀವನದಲ್ಲೂ, ಪರಲೋಕದಲ್ಲೂ ನಿಮ್ಮ ಸಹಾಯಕರಾಗಿದ್ದೇವೆ1. ಅಲ್ಲಿ ನಿಮ್ಮ ಮನಸ್ಸು ಬಯಸಿದ್ದೆಲ್ಲವೂ ನಿಮಗೆ ಸಿಗುವುದು. ನೀವು ಕೇಳುವ ಪ್ರತಿಯೊಂದು ವಸ್ತುವೂ ನಿಮಗಲ್ಲಿ ಸಿಗುವುದು.
Footnotes
  • [1] ಅಲ್ಲಾಮಾ ವಕೀಅï ಹಾಗೂ ಇಬ್ನುಝೈದ್ ಹೇಳಿದ ಪ್ರಕಾರ ಇದು ಮೂರು ಘಟ್ಟಗಳಲ್ಲಿ ಅಂದರೆ ಮರಣ ವೇಳೆಯಲ್ಲಿ, ಖಬ್‍ರ್‍ನಲ್ಲಿ, ಹಾಗೂ ಪುನರುತ್ಥಾನದ ವೇಳೆಯಲ್ಲಿರುವ ಸುವಾರ್ತೆಯಾಗಿದೆ. ಇಮಾಮ್ ಮುಜಾಹಿದ್ ಹೇಳುತ್ತಾರೆ, ಅರ್ಥಾತ್ ಇಹಲೋಕದಲ್ಲಿ ನಿಮ್ಮ ಜೊತೆಗಿದ್ದ ನಿಮ್ಮ ಒಡನಾಡಿಗಳು ನಾವು. ಅಂತ್ಯದಿನವಾದರೆ ಅವರು ಹೇಳುವರು, ‘ನೀವು ಸ್ವರ್ಗದಲ್ಲಿ ಪ್ರವೇಶಿಸುವ ತನಕ ನಾವು ನಿಮ್ಮನ್ನು ಬಿಟ್ಟು ಹೋಗಲಾರೆವು. (ಖುರ್ತುಬಿ) ನಾವು ನಿಮಗೆ ಇಹದಲ್ಲೂ ಪರದಲ್ಲೂ ಸಹಾಯಕರು ಎಂದು ಮಲಕ್‍ಗಳು ಅವರಿಗೆ ಶುಭವರುಹುವುದರ ತಾತ್ಪರ್ಯವೇನೆಂದು ಇಮಾಮ್ ರಾಝಿ ಬರೆಯುತ್ತಾರೆ; “ಮಲಾಇಕತ್ ಮನುಷ್ಯಾತ್ಮಗಳಲ್ಲಿ ಜ್ಞಾನೋದಯ, ನಿಜ ದಿಗ್ದರ್ಶನ ಹಾಗೂ ವಾಸ್ತವಿಕ ಪ್ರಜ್ಞೋದಯಗಳನ್ನು ಉಂಟುಮಾಡುತ್ತವೆ. ಪವಿತ್ರ, ನಿರ್ಮಲಾತ್ಮಗಳಿಗೆ ಮಲಕ್‍ಗಳು ಸಹಾಯಕರು ಎಂದರ್ಥ. ದೈವಿಕ ಪರಿಜ್ಞಾನ ಹಾಗೂ ವಾಸ್ತವಿಕ ದರ್ಶನಗಳ ವಿವಿಧ ಮೂಲಗಳು ಪವಿತ್ರಾತ್ಮಗಳಿಗೆ ಮಲಕ್‍ಗಳಿಂದ ಲಭ್ಯವಾಗುತ್ತಿರುವುವು. ಇದೇ ಸಂಪರ್ಕವು ಇಹದಲ್ಲಿ ಇದ್ದಂತೆ ಮರಣಾನಂತರವೂ ಮುಂದುವರಿಯುವುದು ಎಂದಾಗಿದೆ ಸಜ್ಜನರು ಮರಣ ಹೊಂದುವ ವೇಳೆ ಅವರಲ್ಲಿ ಮಲಕ್‍ಗಳು ಹೇಳುತ್ತಿರುವುದು. ಯಾಕೆಂದರೆ ಈ ಮಲಕೀ ಸಂಪರ್ಕವು ನೈಸರ್ಗಿಕವೆನಿಸಿ ಸ್ಥಳಾಂತರದಿಂದ ರದ್ದಾಗದ ಸ್ಥಿತಿಯನ್ನು ಹೊಂದಿರುತ್ತದೆ. ಅಷ್ಟೇ ಅಲ್ಲ; ಮಹಾತ್ಮರ ಮರಣಾನಂತರ ಆತ್ಮವು ಮತ್ತಷ್ಟು ಬಲಶಾಲಿಯಾಗಿರುತ್ತದೆ. ಹೆಚ್ಚು ಬಂಧಮುಕ್ತಗೊಂಡಿರುತ್ತದೆ. ಯಾಕೆಂದರೆ ಆತ್ಮವು ಸೂರ್ಯನ ರಶ್ಮಿಯಂತೆ, ಕಡಲಿನ ಬಿಂದುಗಳಂತೆ ಮಲಕೀ ಸ್ವರೂಪದಲ್ಲಿ ಮುಕ್ತವಾದುದು. ಆದರೆ ದೇಹದ ಬಂಧನವು ಅದರ ಉಪರಿ ಸಂಪರ್ಕಕ್ಕೆ ತಡೆಯಾಗಿರುತ್ತದೆ. ಪಿಶಾಚಿಗಳು ಮನುಷ್ಯ ಹೃದಯಗಳನ್ನು ಸುತ್ತುವರಿಯದಿರುತ್ತಿದ್ದರೆ ಆಕಾಶಗಳ ರಹಸ್ಯಗಳನ್ನು ಅವರು ನೋಡಿ ತಿಳಿಯುತ್ತಿದ್ದರು. ಎಂಬ ನಬಿ ನುಡಿಯು ಇದನ್ನೇ ಸೂಚಿಸುತ್ತದೆ. ಹೀಗಾಗಿ ಅಂತಹ ದೈಹಿಕ ಬಂಧ ಕಳಚಲ್ಪಟ್ಟರೆ ಆತ್ಮವು ತನ್ನ ಮುಕ್ತತೆಯನ್ನು ಪಡಕೊಳ್ಳುತ್ತದೆ. (ರಾಝಿ/28)