Kannada Translation

Ayah by Ayah

Tags

Download Links

Kannada Translation translation for Surah Fussilat — Ayah 51

41:51
وَإِذَآ أَنۡعَمۡنَا عَلَى ٱلۡإِنسَٰنِ أَعۡرَضَ وَنَـَٔا بِجَانِبِهِۦ وَإِذَا مَسَّهُ ٱلشَّرُّ فَذُو دُعَآءٍ عَرِيضٖ ٥١
ನಾವು ಮಾನವನಿಗೆ ಅನುಗ್ರಹವನ್ನು ನೀಡಿದರೆ ಅವನು ವಿಮುಖನಾಗುತ್ತಾನೆ. ಅವನ ಪಾಡಿಗೆ ಹೋಗುತ್ತಾನೆ. ಅವನಿಗೇನಾದರೂ ವಿಪತ್ತು ತಟ್ಟಿದರೆ ಬಹಳ ಹೆಚ್ಚು ಪ್ರಾರ್ಥಿಸುತ್ತಾನೆ1.
Footnotes
  • [1] `ಕೇಡು ಬಂದಾಗ ದೀರ್ಘವಾಗಿ ಪ್ರಾರ್ಥಿಸುತ್ತಾನೆ' ಎಂದಿಲ್ಲಿ ಹೇಳಲಾಗಿದೆ. 49ನೇ ಆಯತ್‍ನಲ್ಲಿ `ಅವನು ತೀವ್ರ ಹತಾಶನಾಗುತ್ತಾನೆ' ಎನ್ನಲಾಗಿದೆ. ಇವೆರಡರಲ್ಲಿ ವೈರುಧ್ಯವಿಲ್ಲ. ಹಲವು ವಿಧ ಜನರು ಹಲವು ವಿಧ ವರ್ತಿಸುತ್ತಾರೆ. ಕೆಲವರು ಸಂಪೂರ್ಣ ಹತಾಶರಾಗಿ ಮೌನಿಗಳಾದರೆ ಕೆಲವರು ದೀರ್ಘ ಪ್ರಾರ್ಥನೆಯಲ್ಲಿ ನಿರತರಾಗುತ್ತಾರೆ. ಒಟ್ಟಿನಲ್ಲಿ ಬೇರೆ ಬೇರೆ ಸಂದರ್ಭದಲ್ಲಿ ಈ ಎರಡೂ ಸ್ವಭಾವಗಳು ಕಂಡುಬರಬಹುದು. (ಅಬುಸ್ಸುಊದ್)