Kannada Translation

Ayah by Ayah

Tags

Download Links

Kannada Translation translation for Surah Ash-Shuraa — Ayah 10

42:10
وَمَا ٱخۡتَلَفۡتُمۡ فِيهِ مِن شَيۡءٖ فَحُكۡمُهُۥٓ إِلَى ٱللَّهِۚ ذَٰلِكُمُ ٱللَّهُ رَبِّي عَلَيۡهِ تَوَكَّلۡتُ وَإِلَيۡهِ أُنِيبُ ١٠
ನಿಮ್ಮೊಳಗೆ ಯಾವ ವಿಷಯದಲ್ಲೇ ಭಿನ್ನಮತವುಂ ಟಾದರೂ ಅದರ ತೀರ್ಮಾನ ಅಲ್ಲಾಹನಿಂದಲೇ ನಡೆಯುತ್ತದೆ1. ಅವನೇ ನನ್ನ ಪ್ರಭುವಾದ ಅಲ್ಲಾಹು. ನಾನು ಅವನ ಮೇಲೆಯೇ ಭರವಸೆಯನ್ನಿರಿಸಿದ್ದೇನೆ ಮತ್ತು ಅವನ ಕಡೆಗೇ ನಾನು ಮರಳುತ್ತೇನೆ.
Footnotes
  • [1] ಮುಸ್ಲಿಮರು ಮತ್ತು ನಿಷೇಧಿಗಳ ಭಿನ್ನತೆಗಳು ಉದ್ದೇಶ. ಮುಸ್ಲಿಮರಿಗೆ ಉತ್ತಮ ಪ್ರತಿಫಲ ಹಾಗೂ ನಿಷೇಧಿಗಳಿಗೆ ಕಠಿಣ ಶಿಕ್ಷೆ ನೀಡುವುದು ಎಂದಾಗಿದೆ ಅಲ್ಲಾಹನು ತೀರ್ಪು ನೀಡುವುದರ ತಾತ್ಪರ್ಯ. ಅಭಿಪ್ರಾಯ ಭೇದವಿರುವ ಎಲ್ಲ ವಿಚಾರಗಳಿಗೂ ಇದು ಅನ್ವಯವಾಗುವುದನ್ನೂ ಅಲ್ಲಗಳೆಯುವಂತಿಲ್ಲ. (ಇಬ್ನು ಕಸೀರ್) ಪ್ರವಾದಿವರ್ಯ ರು ಖುರ್‍ಆನಿನ ಪ್ರಪ್ರಥಮ ವ್ಯಾಖ್ಯಾನಕಾರರಾಗಿದ್ದಾರೆ. ಖುರ್‍ಆನನ್ನು ನಮಗೆ ಬೋಧಿಸಿದವರೂ ಅವರೇ. ಅಲ್ಲದೆ ಅವರನ್ನು ಅನುಸರಿಸುವಂತೆ ಖುರ್‍ಆನ್ ನಮಗೆ ಆದೇಶವನ್ನು ನೀಡಿದೆ. ಆದ್ದರಿಂದ ನಬಿಯವರ ತೀರ್ಮಾನ ಅಲ್ಲಾಹನ ತೀರ್ಮಾನದಂತೆ. ಅದೇ ಪ್ರಕಾರ ಇಜ್‍ಮಾ ಮತ್ತು ಕಿಯಾಸ್ ಕೂಡಾ ಖುರ್‍ಆನ್ ಹದೀಸ್‍ಗಳ ತಳಹದಿಯಲ್ಲಿ ರೂಪುಗೊಂಡಿದೆ. ಅವರೆಡನ್ನೂ ಅಲ್ಲಾಹು-ರಸೂಲರು ಅಂಗೀಕರಿಸಿ ದ್ದಾರೆ. ಆದ್ದರಿಂದ ಇಜ್‍ಮಾ ಕಿಯಾಸ್ ಕೂಡಾ ವಿವಾದ ಪರಿಹಾರಕ್ಕೆ ಮಾರ್ಗಗಳಾಗಿದ್ದು ಇವು ಕೂಡಾ ಅಲ್ಲಾಹನ ತೀರ್ಮಾನವೇ ಆಗಿರುತ್ತದೆ.