Kannada Translation

Ayah by Ayah

Tags

Download Links

Kannada Translation translation for Surah Ash-Shuraa — Ayah 15

42:15
فَلِذَٰلِكَ فَٱدۡعُۖ وَٱسۡتَقِمۡ كَمَآ أُمِرۡتَۖ وَلَا تَتَّبِعۡ أَهۡوَآءَهُمۡۖ وَقُلۡ ءَامَنتُ بِمَآ أَنزَلَ ٱللَّهُ مِن كِتَٰبٖۖ وَأُمِرۡتُ لِأَعۡدِلَ بَيۡنَكُمُۖ ٱللَّهُ رَبُّنَا وَرَبُّكُمۡۖ لَنَآ أَعۡمَٰلُنَا وَلَكُمۡ أَعۡمَٰلُكُمۡۖ لَا حُجَّةَ بَيۡنَنَا وَبَيۡنَكُمُۖ ٱللَّهُ يَجۡمَعُ بَيۡنَنَاۖ وَإِلَيۡهِ ٱلۡمَصِيرُ ١٥
(ಓ ಪೈಗಂಬರರೇ,) ಹೀಗಾಗಿ ನೀವು (ಅದೇ ಧರ್ಮದ ಕಡೆಗೆ) ಕರೆ ನೀಡಿರಿ ಮತ್ತು ನಿಮಗೆ ಆಜ್ಞಾಪಿಸಲಾಗಿರುವ ಪ್ರಕಾರ ಅದರಲ್ಲೇ ಸ್ಥಿರ ವಾಗಿರಿ. ಅವರ ಸ್ವೇಚ್ಛೆಗಳನ್ನು ಅನುಸರಿಸ ಬೇಡಿರಿ. ಮತ್ತು (ಅವರೊಡನೆ) ಹೇಳಿರಿ; ಅಲ್ಲಾ ಹನು ಅವತೀರ್ಣಗೊಳಿಸಿದ ಪ್ರತಿಯೊಂದು ಗ್ರಂಥದ ಮೇಲೆ ನಾನು ವಿಶ್ವಾಸವಿರಿಸಿದೆನು. ನಿಮ್ಮ ನಡುವೆ ನ್ಯಾಯಪಾಲಿಸಬೇಕೆಂದು ನನಗೆ ಆದೇ ಶಿಸಲಾಗಿದೆ. ಅಲ್ಲಾಹನು ನಮ್ಮ ಮತ್ತು ನಿಮ್ಮ ಪ್ರಭುವೂ ಆಗಿರುತ್ತಾನೆ. ನಮ್ಮ ಕರ್ಮ (ಫಲ) ಗಳು ನಮಗೆ, ನಿಮ್ಮ ಕರ್ಮ(ಫಲ)ಗಳು ನಿಮಗೆ, ನಮ್ಮ ನಿಮ್ಮೊಳಗೆ ಯಾವ ವಿವಾದವೂ ಇಲ್ಲ1. ಅಲ್ಲಾಹನು ನಮ್ಮೆಲ್ಲರನ್ನು ಒಟ್ಟುಗೂಡಿಸುವನು ಮತ್ತು ಎಲ್ಲರ ಮರಳಿಕೆ ಅವನ ಕಡೆಗೇ ಇದೆ.
Footnotes
  • [1] ಅರ್ಥಾತ್ ಯಾವುದೇ ವಿವಾದಕ್ಕೂ ಸಮರ್ಥನೆಗೂ ಯಾವುದೇ ಸ್ಥಾನವಿಲ್ಲ.