Kannada Translation

Ayah by Ayah

Tags

Download Links

Kannada Translation translation for Surah Ash-Shuraa — Ayah 23

42:23
ذَٰلِكَ ٱلَّذِي يُبَشِّرُ ٱللَّهُ عِبَادَهُ ٱلَّذِينَ ءَامَنُواْ وَعَمِلُواْ ٱلصَّٰلِحَٰتِۗ قُل لَّآ أَسۡـَٔلُكُمۡ عَلَيۡهِ أَجۡرًا إِلَّا ٱلۡمَوَدَّةَ فِي ٱلۡقُرۡبَىٰۗ وَمَن يَقۡتَرِفۡ حَسَنَةٗ نَّزِدۡ لَهُۥ فِيهَا حُسۡنًاۚ إِنَّ ٱللَّهَ غَفُورٞ شَكُورٌ ٢٣
ಇದು ಸತ್ಯವಿಶ್ವಾಸವನ್ನು ಸ್ವೀಕರಿಸಿ ಸತ್ಕರ್ಮ ನಿರ್ವಹಿಸಿದಂತಹ ತನ್ನ ದಾಸರಿಗೆ ಅಲ್ಲಾಹು ನೀಡುತ್ತಿರುವ ಸುವಾರ್ತೆಯಾಗಿದೆ. (ಪ್ರವಾದಿ ಯರೇ!) ತಾವು ಹೇಳಿರಿ; ನಾನು ಈ ಕಾರ್ಯ ಕ್ಕಾಗಿ ನಿಮ್ಮಿಂದ ಯಾವುದೇ ಪ್ರತಿಫಲವನ್ನು ಅಪೇಕ್ಷಿಸುವುದಿಲ್ಲ. (ಬದಲಾಗಿ) ಸಾಮಿಪ್ಯ ಬಾಂ ಧವ್ಯದ ಪ್ರೀತಿಯನ್ನು ಖಂಡಿತ ಅಪೇಕ್ಷಿಸುತ್ತೇನೆ1. ಯಾವನಾದರೂ ಒಂದು ಒಳಿತನ್ನು ಗಳಿಸಿದರೆ ಅದರಲ್ಲಿ ನಾವು ಅವನಿಗೆ ಗುಣವನ್ನು ವರ್ಧಿಸಿಕೊಡುವೆವು. ಖಂಡಿತ, ಅಲ್ಲಾಹು ಕ್ಷಮಾಶೀಲನೂ ಹಿರಿಯ ಕೃತಜ್ಞನೂ ಆಗಿರುತ್ತಾನೆ.
Footnotes
  • [1] ಅಲ್ ಖುರ್ಬಾ ಎಂಬುದಕ್ಕೆ ಕುಟುಂಬ, ಸನಿಹತೆ, ಪುಣ್ಯ ಕರ್ಮ ಮುಂತಾದ ಹಲವು ಅರ್ಥಗಳಿವೆ. ತನ್ನಿಮಿತ್ತ ಈ ವಾಕ್ಯಕ್ಕೆ ಹಲವು ವ್ಯಾಖ್ಯಾನಗಳಿವೆ. ಧರ್ಮಬೋಧನೆಗಾಗಿ ನಬಿಯವರು ಜನರಿಂದ ಯಾವ ನೆಲೆಯಲ್ಲೂ ಪ್ರತಿಫಲವನ್ನು ಬಯಸಲಿಲ್ಲ ಎಂಬ ವಿಷಯದಲ್ಲಿ ಒಮ್ಮತವಿದೆ. ಇಲ್ಲಿನ ಒಂದು ವ್ಯಾಖ್ಯಾನ ನನ್ನ ಬೋಧನೆಯನ್ನು ನೀವು ಸ್ವೀಕರಿಸದಿದ್ದರೆ ಇರಲಿ, ಆದರೆ ನಾನು ನಿಮ್ಮ ಕುಟುಂಬದವನು ಎಂಬ ನೆಲೆಯಲ್ಲಾದರೂ ನನಗೆ ಉಪದ್ರವಿಸದಿರಬಾರದೆ? ಅಡ್ಡಿಪಡಿಸದಿರಬಾರದೆ? ಎಂದಾಗಿದೆ. ನಬಿಯವರು ಖುರೈಶಿ ವರ್ಗದವರೂ ಖುರೈಶಿಗಳ ನಿಕಟ ಬಂಧುವೂ ಆಗಿದ್ದರು. ಕುಟುಂಬ ಸಂಬಂಧ ನೋಡುವುದು ಎಲ್ಲರ ಕರ್ತವ್ಯವಾಗಿದೆ. ಅದಕ್ಕೆ ಧಾರ್ಮಿಕ ಭಿನ್ನತೆ ಅಡ್ಡಿಯಾಗಬೇಕಿಲ್ಲ. ಇದು ಇಬ್ನು ಅಬ್ಬಾಸ್ ರಿಂದ ಬುಖಾರಿ ಉಲ್ಲೇಖಿಸಿದ ವ್ಯಾಖ್ಯಾನ. ಇಬ್ನುಕಸೀರ್, ಇಬ್ನುಜರೀರ್ ಮುಂತಾದ ಪ್ರಧಾನ ಮುಫಸ್ಸಿರ್‍ಗಳೂ ಈ ವ್ಯಾಖ್ಯಾನಕ್ಕೆ ಪುಷ್ಟಿ ನೀಡಿದ್ದಾರೆ. ಇನ್ನೊಂದು ವ್ಯಾಖ್ಯಾನ: ನೀವು ಅಲ್ಲಾಹನನ್ನು ಅನುಸರಿಸಿ ಅವನ ಸಾಮೀಪ್ಯ ಪಡೆಯಬೇಕೆನ್ನುವುದು ನನ್ನ ಬಯಕೆ. ಇದಲ್ಲದೆ ನಿಮ್ಮಿಂದ ನನಗೇನೂ ಪ್ರತಿಫಲ ಬೇಡ ಎಂದಾಗಿದೆ. ಮೂರನೇ ವ್ಯಾಖ್ಯಾನ: ನನ್ನ ಅತಿ ನಿಕಟ ಬಂಧುಗಳ ಮೇಲೆ ನೀವು ಪ್ರೀತಿ ಇಡಬೇಕು ಎಂದಾಗಿದೆ. ಅಲ್ಲಾಹು ಮತ್ತು ರಸೂಲರಲ್ಲಿ ಸ್ನೇಹವಿದ್ದರೆ ರಸೂಲರ ಕುಟುಂಬದವರಲ್ಲಿ ಸ್ನೇಹ ಮೂಡುವುದು ಸಹಜ ತಾನೇ? ನಬಿಯವರ ಕುಟುಂಬದ ಮೇಲೆ ಸ್ನೇಹಾದರ ತೋರುವುದು ಸಮುದಾಯದ ಕರ್ತವ್ಯವಾಗಿದೆ. ಅದು ಪ್ರಭೋದನೆಗೆ ಪ್ರತಿಫಲವಲ್ಲ. ಅಹ್ಲುಬೈತನ್ನು ಪ್ರೀತಿಸುವುದು ನಮಗೆ ಕಡ್ಡಾಯ. ಒಂದು ವರದಿಯ ಪ್ರಕಾರ ಈ ಆಯತ್ ಬಂದಾಗ; ನಾವು ಪ್ರೀತಿಸಬೇಕಾದ ತಮ್ಮ ಕುಟುಂಬ ಯಾವುದೆಂದು ಸಹಾಬಿಗಳು ಕೇಳಿದರು. ಅದಕ್ಕೆ ``ಅಲಿ, ಫಾತಿಮಾ ಹಾಗೂ ಅವರ ಮಕ್ಕಳು'' ಎಂದು ನಬಿಯವರು ಉತ್ತರಿಸಿದರು. (ಜಾಮಿಉಲ್ ಬಯಾನ್) ‘ಖುಮ್ಮ್’ ಎಂಬಲ್ಲಿ ಬಿಳಿ ತಾಟಕದ ಬಳಿ ಪ್ರವಾದಿವರ್ಯ ಮಾಡಿದ ಭಾಷಣದಲ್ಲಿ ‘ಎರಡು ಘನ ವಸ್ತುಗಳನ್ನು ನಾನು ನಿಮಗೆ ಬಿಟ್ಟು ಹೋಗುತ್ತೇನೆ. ಒಂದು ಅಲ್ಲಾಹನ ಗ್ರಂಥ, ಇನ್ನೊಂದು ನನ್ನ ಕುಟುಂಬ ಎಂದಿರುವುದು ವರದಿಯಾಗಿದೆ. (ಇಬ್ನು ಕಸೀರ್ 7/201)